ಪತಿವ್ರತೆ ಎಂದು ಸಾಬೀತು ಮಾಡಲು #Me Too ಅನ್ನುತ್ತಿದ್ದಾರೆ ಗುರುಪ್ರಸಾದ್ ಆರೋಪ

ಕನ್ನಡ ಚಿತ್ರರಂಗಕ್ಕೆ, ಅಭಿಮಾನಿಗಳಿಗೆ ತಮ್ಮ ಮದುವೆಯ ವಿಚಾರವನ್ನೇ ಗುಟ್ಟಾಗಿ ಇಟ್ಟವರು ಈಗ ಮನೆಯಲ್ಲಿ ಗಂಡ, ಅತ್ತೆ-ಮಾವನ ಎದುರು ತಾನು ಸತಿ ಸಾವಿತ್ರ ಅಂತ ತೋರಿಸಿಕೊಳ್ಳಲು “ಮಿ ಟೂ’ ಹೆಸರನ್ನು ಬಳಸಿಕೊಳ್ಳುತ್ತಿದ್ದಾರೆ. ಇನ್ನೊಬ್ಬರ ಮೇಲೆ ಆರೋಪ ಮಾಡಿ ತಾವು ಪತಿವ್ರತೆ ಅಂತ ಬಿಂಬಿಸಿಕೊಳ್ಳಲು ಹೊರಟಿದ್ದಾರೆ.

ಗಂಡನ ಮುಂದೆ ತನಗೆ ಎಂಥಾ ಶ್ರೇಷ್ಟ ವ್ಯಕ್ತಿಗಳು ಹೇಗೆ ಮಾಡಿದ್ರು ಗೊತ್ತಾ ಎಂದು ಸಾರುವ ಸಲುವಾಗಿ ಈ #MeToo ಆರೋಪ ಹೊರಿಸಲಾಗುತ್ತಿದೆ ಎಂದು ಮಠ’ ಖ್ಯಾತಿಯ ನಿರ್ದೇಶಕ ಗುರು ಪ್ರಸಾದ್‌ ಆರೋಪಿಸಿದ್ದಾರೆ.

ಅಂದು ತಬ್ಬಿಕೊಳ್ಳುವ ವೇಳೆಯಲ್ಲೇ ಪ್ರತಿಭಟಿಸುವುದು ಬಿಟ್ಟು, ತಮ್ಮ ವ್ಯವಹಾರಗಳನ್ನು ಮುಗಿಸಿದ ನಂತರ ಈಗ ಮಾತನಾಡುವುದು ಎಷ್ಟು ಸರಿ? ಇದು “ಮಿ ಟೂ’ ವೇದಿಕೆಯ ದುರ್ಬಳಕೆ ತಾನೇ.. ತಾನು ಪ್ರಚಾರ ತೆಗೆದುಕೊಂಡು, ಬೇರೆಯವರ ಹೆಸರಿಗೆ ಮಸಿ ಬಳಿಯುವ ಕೆಲಸವಲ್ಲದೇ ಇದೇನು ಎಂದು ಗುರು ಪ್ರಸಾದ್‌ ಪ್ರಶ್ನಿಸಿದ್ದಾರೆ

ಮಿಟೂ ಕುರಿತು ಆರೋಪಗಳನ್ನು ಮಾಡುತ್ತಿರುವ ಸಂಗೀತಾ ಭಟ್‌, ಮತ್ತು ಶ್ರುತಿ ಹರಿಹರನ್‌ ಹೆಸರುಗಳನ್ನು ಪ್ರಸ್ತಾಪಿಸದೆ, ಪರೋಕ್ಷವಾಗಿ ಮಾತಿನಲ್ಲೇ ಚಾಟಿ ಬೀಸಿದ ಗುರು ಪ್ರಸಾದ್‌, ಅವಕಾಶ ಸಿಕ್ಕಾಗ ಅವರೊಂದಿಗೆ ಕೆಲಸ ಮಾಡುವುದು ಖಾಲಿ ಕುಳಿತಾಗ ಅವರ ಬಗ್ಗೆಯೇ ಮಾತನಾಡುವುದು ಕಲಾವಿದರ ವೃತ್ತಿಗೆ ಮಾಡುವ ಅಪಮಾನ. ನಿಜಕ್ಕೂ ಸಿನಿಮಾದಲ್ಲಿ ನಿಮಗೆ ತೊಂದರೆ ಆಗಿದ್ದರೆ, ಅಂದೇ ಪ್ರತಿಭಟಿಸಿ ಹೊರಬರಬೇಕಿತ್ತು.

ಒಬ್ಬ ಕಳ್ಳ ನಿಮ್ಮ ಬ್ಯಾಗನ್ನು ಕದ್ದುಕೊಂಡು ಓಡಿ ಹೋದರೆ, ನೀವೇನು ಮಾಡುತ್ತೀರಿ? ತಕ್ಷಣಕ್ಕೆ ಹೋಗಿ ಕಂಪ್ಲೆಂಟ್‌ ಕೊಟ್ಟರೆ, ನಿಮ್ಮ ದೂರಿಗೊಂದು ಅರ್ಥ ಇರುತ್ತದೆ.

ಕಳ್ಳನನ್ನು ಹಿಡಿಯಲೂ ಸಾಧ್ಯವಾಗುತ್ತದೆ. ಅದನ್ನು ಬಿಟ್ಟು ಎರಡು ವರ್ಷಗಳಾದ ಮೇಲೆ ನನ್ನ ಬ್ಯಾಗ್‌ ಕದ್ದುಕೊಂಡು ಹೋಗಿದ್ದಾರೆ ಎಂದು ಕೂಗಿಕೊಂಡರೆ ಅದರಿಂದ ಏನು ಪ್ರಯೋಜನ? ಕೆಲವರು ಮಾಡುತ್ತಿರುವುದು ಕೂಡಾ ಇದೇ ಥರದ ಅರ್ಥಹೀನ ಆರೋಪ. ಸದ್ಯ ಟ್ರೆಂಡಿಂಗ್‌ನಲ್ಲಿರುವ “ಮಿ ಟೂ’ ಎಂಬ ವೇದಿಕೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ’ ಎಂದು ಗಂಭೀರ ಆರೋಪ ಮಾಡಿದ್ದಾರೆ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: