Advertisements

ಪುತ್ರ ಶೋಕ ನಿರಂತರ –  ಜನಾರ್ಧನ ರೆಡ್ಡಿಗೂ ಟಿಎ ಶರವಣ ಅವರಿಗೂ ವ್ಯತ್ಯಾಸವೇನಿದೆ..?

ಈ ಬಾರಿಯ ಉಪಚುನಾವಣೆಯಲ್ಲಿ ರಾಜಕಾರಣಿಗಳ ಮಾತಿನ ಸಮರ ನೋಡಿದರೆ ಛೀ..ಥೂ ಅನ್ನಿಸುತ್ತಿದೆ. ಪ್ರಜಾತಂತ್ರದಲ್ಲಿ ಚುನಾವಣೆಗಳು ಪ್ರಣಾಳಿಕೆಯ ಆಧಾರದಲ್ಲಿ, ಅಭಿವೃದ್ಧಿ ವಿಚಾರದಲ್ಲಿ ನಡೆಯಬೇಕು. ಆದರೆ ಈ ಬಾರಿ ವೈಯುಕ್ತಿಕ ವಿಷಯಗಳೇ ಮೇಳೈಸುತ್ತಿದೆ.

ಅದರಲ್ಲೂ ಜನಾರ್ಧನ ರೆಡ್ಡಿ ಸಿದ್ದರಾಮಯ್ಯ ಅವರ ಪುತ್ರನ ಸಾವಿನ ವಿಚಾರ ಪ್ರಸ್ತಾಪಿಸಿರುವುದನ್ನು ನಾಗರಿಕ ಅನ್ನಿಸಿಕೊಂಡವರು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಅದ್ಯಾವ ಶತ್ರುವೇ ಇರಲಿ ಇಂತಹ ಮಾತುಗಳನ್ನು ಜನಾರ್ಧನ ರೆಡ್ಡಿ ಹೇಳಬಾರದಿತ್ತು.

ಪುತ್ರ ಶೋಕ ನಿರಂತರ ಅನ್ನುವ ಮಾತು ಶತಮಾನಗಳಿಂದ ನಡೆದುಕೊಂಡು ಬಂದಿದೆ. ಅದು ರಾಜನಿರಲಿ, ಪ್ರಜೆಯಾಗಿರಲಿ ನೋವು ಅನ್ನುವುದು ಎಲ್ಲರಿಗೂ ಸಮಾನ.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪಬ್ಲಿಕ್ ಟಿವಿಯ ಬಿಗ್ ಬುಲೆಟಿನ್ ನಲ್ಲಿ ಚರ್ಚೆ ನಡೆಯಿತು. ಸ್ಟುಡಿಯೋದಲ್ಲಿ ಕೂತಿದ್ದ ಬಿಜೆಪಿ ವಕ್ತಾರ ವಾಮನ ಆಚಾರ್ಯ,  ಕಾಂಗ್ರೆಸ್ ವಕ್ತಾರ ಬ್ರಿಜೇಶ್ ಕಾಳಪ್ಪ ತೂಕದ ಮಾತುಗಳನ್ನು ಆಡಿದರು.

ಆದರೆ ಎಡವಟ್ಟು ಮಾಡಿಕೊಂಡಿದ್ದು ಜೆಡಿಎಸ್ ಮುಖಂಡ, ವಿಧಾನ ಪರಿಷತ್ ಸದಸ್ಯ ಟಿಎ ಶರವಣ. ರೆಡ್ಡಿಯವರಿಗೆ ಪುತ್ರನನ್ನು ಕಳೆದುಕೊಂಡ ಶೋಕ ಬಂದಿಲ್ಲ ಅನ್ನುವ ಅರ್ಥದಲ್ಲಿ ಮಾತುಗಳನ್ನು ಹೇಳಿ, ತನಗೂ ರೆಡ್ಡಿಗೂ ವ್ಯತ್ಯಾಸವಿಲ್ಲ ಎಂದು ಸಾಬೀತುಪಡಿಸಿದರು.

ಆದರೆ ಚಾನೆಲ್ ಮುಖ್ಯಸ್ಥ ರಂಗನಾಥ್ ಅವರು ಮಧ್ಯಪ್ರವೇಶಿಸಿ ಶರವಣ ಅವರ ಮಾತುಗಳನ್ನು ಖಂಡಿಸಿದರು, ಅರ್ಧಕ್ಕೆ ತುಂಡರಿಸಿದರು. ಇದೇ ವೇಳೆ ಫೋನ್ ಮೂಲಕ ಮಾತನಾಡಿದ ಜನಾರ್ಧನ ರೆಡ್ಡಿ ತಾನು ಆ ಅರ್ಥದಲ್ಲಿ ಹೇಳಿಲ್ಲ ಅನ್ನುವ ಮೂಲಕ ಬಿಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದರು.ಜೊತೆಗೆ ಕ್ಷಮೆಯನ್ನೂ ಕೇಳಿದರು. ಆದರೆ ಶರವಣ ಆಡಿದ ಮಾತುಗಳು ಹಾಗೇ ಉಳಿದು ಹೋಯ್ತು. ಕನಿಷ್ಟ ಪಕ್ಷ ಒಂದು ಕ್ಷಮೆಯನ್ನು ಕೇಳಿ ಶರವಣ ಅವರು ದೊಡ್ಡತನ ತೋರಬಹುದಾಗಿತ್ತು.

Advertisements

Leave a Reply

%d bloggers like this: