Advertisements

ಕುರುಬರಾಗಿರುವ ಸಿದ್ದರಾಮಯ್ಯ ಬೀಫ್ ತಿನ್ನುತ್ತಾರೆಯೇ..?

ರಾಜ್ಯ ಹಾಗೂ ದೇಶದಲ್ಲಿ ಕುರುಬ ಸಮುದಾಯದವರು ಗೋಮಾಂಸ ತಿನ್ನುವುದಿಲ್ಲ,ಸಿದ್ದರಾಮಯ್ಯ ಅವರದ್ದು ಬೀಫ್‌ ತಿನ್ನುವ ಮನೆತನವೇ ಎಂದು ಮಾಜಿ ಸಚಿವ, ಬಿಜೆಪಿ ಮುಖಂಡ ಸಿ. ಟಿ. ರವಿ ಪ್ರಶ್ನಿಸಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ಚುನಾವಣಾ ಪ್ರಚಾರ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು  ಕುರುಬರು ದೈವ ನಿಷ್ಠೆ ಇರುವವರು, ಅವರು ಗೋವಿನ ಪೂಜೆ ಮಾಡುತ್ತಾರೆ. ನಾನು ಕುರುಬ ಅನ್ನುವುದು ಅದೇ ಕಾಲಕ್ಕೆ ದನದ ಮಾಂಸ ತಿನ್ನುತ್ತೇನೆ ಅನ್ನುವುದು ಹೇಗೆ ಸರಿಯಾಗುತ್ತದೆ ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ಕುರುಬರಾಗಿದ್ದರೆ ಬೀಫ್‌ ತಿನ್ನುವ ಬಗ್ಗೆ ಮಾತನಾಡಬಾರದು. ಹಾಗೆ ಮಾಡಿದರೆ ಅದು ಕನಕದಾಸರಿಗೆ, ಭಂಡಾರ ಧರಿಸುವ ಸಮುದಾಯಕ್ಕೆ ಮಾಡುವ ಅಪಚಾರವಾಗುತ್ತದೆ. ಅವರು ಕುರುಬರು ಅಲ್ಲ ಎಂದು ಹೇಳಿದರೆ ಏನೂ ಬೇಕಾದರೂ ತಿನ್ನಲಿ. ಯಾಕೆ ನಾಯಿ ತಿನ್ನುವವರು ನಮ್ಮ ದೇಶದಲ್ಲಿ ಇಲ್ಲವೇ? ಎಂದು ರವಿ ವಾಗ್ದಾಳಿ ನಡೆಸಿದರು.

‘ನಾನು ಇಲ್ಲಿಯವರೆಗೂ ಬೀಫ್ ತಿಂದಿಲ್ಲ. ತಿನ್ನಬೇಕು ಅನ್ನಿಸಿದರೆ, ತಿನ್ನುತ್ತೇನೆ. ಕೇಳೋಕೆ ನೀವ್ಯಾರು’ ಎಂದು ಬಿಜೆಪಿ ವಿರುದ್ಧ ಎರಡು ದಿನಗಳ ಹಿಂದಷ್ಟೇ ಸಿದ್ದರಾಮಯ್ಯ ಹರಿಹಾಯ್ದಿದ್ದರು.

Advertisements

One Comment on “ಕುರುಬರಾಗಿರುವ ಸಿದ್ದರಾಮಯ್ಯ ಬೀಫ್ ತಿನ್ನುತ್ತಾರೆಯೇ..?

  1. Pingback: ಅಪರೇಷನ್ ಸಂಕ್ರಾಂತಿ : ಕಾಂಗ್ರೆಸ್ ಮನೆಯಲ್ಲಿ ಬೆಂಕಿ : ಕುಮಾರಸ್ವಾಮಿ ಫುಲ್ ಕೂಲ್ – torrentspree

Leave a Reply

%d bloggers like this: