Advertisements

ಅಮಿತ್ ಷಾ ಕಣ್ಣೂರು ವಿಮಾನ ನಿಲ್ದಾಣದಲ್ಲಿ ಕಾಲಿಡದಂತೆ ಮಾಡಲು ಯತ್ನಿಸಿತೇ ಪಿಣರಾಯಿ ಸರ್ಕಾರ..?

ಶನಿವಾರ ಕೇರಳ ರಾಜ್ಯಕ್ಕೆ ಭೇಟಿ ಕೊಟ್ಟ ರಾಜ್ಯ ಬಿಜೆಪಿ ಅಧ್ಯಕ್ಷ ಅಮಿತ್ ಷಾ ಹೊಸದೊಂದು ಇತಿಹಾಸ ಬರೆದಿದ್ದಾರೆ. ಕಣ್ಣೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದ ಮೊಟ್ಟ ಮೊದಲ ಪ್ರಯಾಣಿಕನೆಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.

ಪೂರ್ವನಿಗದಿತ ಕಾರ್ಯಕ್ರಮದನ್ವಯ ಬಿಜೆಪಿ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಅಮಿತ್ ಷಾ ಕಣ್ಣೂರು ವಿಮಾನ ನಿಲ್ದಾಣಕ್ಕೆ ಶನಿವಾರ ಬೆಳಗ್ಗೆ 11.50ಕ್ಕೆ ವಿಶೇಷ ವಿಮಾನದಲ್ಲಿ ಆಗಮಿಸಿದರು. ಈ ಮೂಲಕ ಉದ್ಘಾಟನೆಗೂ ಮೊದಲು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮೊದಲ ಪ್ರಯಾಣಿಕರಾದರು.

ಉದ್ಘಾಟನೆಯಾಗದ ಕಣ್ಣೂರು ವಿಮಾನ ನಿಲ್ದಾಣದಲ್ಲಿ ಅಮಿತ್ ಷಾ ವಿಮಾನ ಲ್ಯಾಂಡ್ ಆಗಲಿದೆ ಅನ್ನುವ ಸುದ್ದಿ ಬರುತ್ತಿದ್ದಂತೆ, ಇದಕ್ಕೆ ಅಡ್ಡಿಪಡಿಸಲು ಕೇರಳ ಸರ್ಕಾರ ಇನ್ನಿಲ್ಲದ ಪ್ರಯತ್ನ ನಡೆಸಿತ್ತು ಎಂದು NDTV ವರದಿ ಮಾಡಿದೆ. ಬೇರೆ ವಿಮಾನ ನಿಲ್ದಾಣದಲ್ಲಿ ಅವರು ಇಳಿಯುವಂತಾಗಬೇಕು ಎಂದು ಹರ ಸಾಹಸ ಪಟ್ಟಿತ್ತು. ಈ ವೇಳೆ ಮಧ್ಯ ಪ್ರವೇಶ ಮಾಡಿದ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಪಿಣರಾಯಿ ವಿಜಯನ್ ಸರ್ಕಾರದ ಸರ್ಕಸ್ ಗೆ ಬ್ರೇಕ್ ಹಾಕಿತು.

ಕಣ್ಣೂರು ಜಿಲ್ಲಾ ಘಟಕದ ನೂತನ ಕಚೇರಿಗೆ ಉದ್ಘಾಟನೆ ಸಲುವಾಗಿ ಅವರು ಕೇರಳಕ್ಕೆ ಶನಿವಾರ ಆಗಮಿಸಿದ್ದಾರೆ. ಇದೇ ವೇಳೆ ಕಣ್ಣೂರು ಪಿಣರಾಯಿಯಲ್ಲಿ ರಾಜಕೀಯ ಹಿಂಸಾಚಾರದಿಂದ ಸಾವನ್ನಪ್ಪಿದ ಪಕ್ಷದ ಕಾರ್ಯಕರ್ತರ ಮನೆಗೆ ಭೇಟಿ ನೀಡಿದರು.
https://www.facebook.com/plugins/post.php?href=https%3A%2F%2Fwww.facebook.com%2FAmitShah.Official%2Fposts%2F2338763012831760&width=500
ನಂತರ ಶಿವಗಿರಿ ಮಠಕ್ಕೆ ತೆರಳಿದರು. ಜೊತೆಗೆ ಪಕ್ಷ ಬಲವರ್ಧನೆಯ ಅಂಗವಾಗಿ ಕೇರಳದ ಘಟಾನುಘಟಿ ನಾಯಕರನ್ನು ಕಮಲ ಪಾಳಯಕ್ಕೆ ಸೇರಿಸಿಕೊಂಡರು.

 https://www.facebook.com/plugins/post.php?href=https%3A%2F%2Fwww.facebook.com%2FAmitShah.Official%2Fposts%2F2338487366192658&width=500

Advertisements

Leave a Reply

%d bloggers like this: