Advertisements

ಒಂದು ಕೇಸ್ ನಿಂದ ಗೊತ್ತಾಯ್ತು. .ಆಕೆ ಇನ್ಮುಂದೆ ಶ್ರೀಮತಿ ಶೃತಿ ಹರಿಹರನ್ ಅಂತಾ….

ನಟ ಅರ್ಜುನ್ ಸರ್ಜಾ ವಿರುದ್ಧ ಮೀಟೂ ಆರೋಪ ಮಾಡಿರುವ ಶ್ರುತಿ ಹರಿಹರನ್‍ಗೆ ಈಗಾಗಲೇ ಮದುವೆ ಆಗಿದೆ ಅನ್ನುವ ರಹಸ್ಯ ಪೊಲೀಸರಿಗೆ ನೀಡಿರುವ ದೂರಿನ ಪ್ರತಿಯಲ್ಲಿ ಬಹಿರಂಗವಾಗಿದೆ.

ಇಂದು ನಟಿ ಶೃತಿ ಹರಿಹರನ್ ಅವರು ಸುಮಾರು 5 ಪುಟಗಳಲ್ಲಿ ಅರ್ಜುನ್ ಸರ್ಜಾ ಅವರ ವಿರುದ್ಧ ದೂರು ನೀಡಿದ್ದರು. ಇದರಲ್ಲಿ ತಮ್ಮ ಹೆಸರಿನ ವಿಳಾಸದೊಂದಿಗೆ ವೈಫ್ ಆಫ್ ರಾಮ್ ಕುಮಾರ್ ಎಂದು ನಮೂದಿಸಿದ್ದಾರೆ. ಇದರೊಂದಿಗೆ ಹರಿಹರನ್ ಅವರಿಗೆ ಮದುವೆ ಆಗಿದೆ ಅಂಶ ಬಹಿರಂಗವಾಗಿದೆ. ಇದಕ್ಕೂ ಮುನ್ನ ನಟಿ ಶೃತಿ ಹರಿಹರನ್ ಅವರಿಗೆ ಮದುವೆ ಆಗಿದೆಯೇ ಇಲ್ಲವೇ ಎಂಬ ಸಂಗತಿ ಇಷ್ಟು ದಿನಗಳ ಕಾಲ ಗುಟ್ಟಾಗಿಯೇ ಇತ್ತು. ಆದರೆ ಮೀಟೂ ಅಭಿಯಾನದ ಭಾಗವಾಗಿ ನೀಡಿದ ದೂರಿನಿಂದ ಶೃತಿ ಅವರಿಗೆ ಮದುವೆ ಆಗಿದೆ ಎಂಬ ಅಂಶ ತಿಳಿದು ಬಂದಿದೆ.

ಹಾಗಾದರೆ ಶೃತಿ ಮದುವೆ ವಿಚಾರವನ್ನು ಅದ್ಯಾಕೆ ಮುಚ್ಚಿಟ್ಟರು, ಸಾಮಾನ್ಯವಾಗಿ ಸಿನಿಮಾ ರಂಗದಲ್ಲಿ ಅವಕಾಶ ಕಡಿಮೆಯಾಗಬಹುದು ಅನ್ನುವ ಆತಂಕ ಕಾಡಿದೆಯೋ ಗೊತ್ತಿಲ್ಲ.

2018-10-27_21-21-53

ಹಿಂದೊಮ್ಮೆ ಶೃತಿ ಮದುವೆಯಾಗಿದ್ದಾರೆ ಅನ್ನುವ ಸುದ್ದಿ ಹರಡಿದಾಗ, ಸುದ್ದಿಯನ್ನು ನಿರಾಕರಿಸಿದ್ದರು. ಬಳಿಕ ಮತ್ತೊಮೆ ವದಂತಿ ಹಬ್ಬಿದಾಗ, ನಾವು ಮಾನಸಿಕವಾಗಿ ಮದುವೆಯಾಗಿದ್ದೇವೆ ಎಂದು ಜೀವನದ ಸಂಗಾತಿಯನ್ನು ಪರಿಚಯಿಸಿದ್ದರು.

ಆದರೆ ಇದೀಗ ಶೃತಿ ಹರಿಹರನ್ ಅವರು, ಶ್ರೀಮತಿ ಶೃತಿ ಹರಿಹರನ್ ಅನ್ನುವುದು ಗೊತ್ತಾಗಿದೆ.

Advertisements

Leave a Reply

%d bloggers like this: