Advertisements

ಅಪರೇಷನ್ ಥಿಯೇಟರಿಗೆ ನುಗ್ಗಿದ ನಾಯಿ ಕತ್ತರಿಸಿಟ್ಟದ್ದ ರೋಗಿ ಕಾಲನ್ನು ಕಚ್ಚಿಕೊಂಡು ಹೋಯ್ತು

ಅಪರೇಷನ್ ಥಿಯೇಟರಿಗೆ ನುಗ್ಗಿದ ನಾಯಿಯೊಂದು ಅಪರೇಷನ್ ನಡೆಯುವ ವೇಳೆ ಕತ್ತರಿಸಿ ಇಟ್ಟಿದ್ದ ರೋಗಿಯ ಕಾಲನ್ನು ಕಚ್ಚಿಕೊಂಡು ಹೋಗಿರುವ ವಿಚಿತ್ರ ಘಟನೆ ಬಿಹಾರದ ಬಾಕ್ಸರ್ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

ಅರಾ ಜಿಲ್ಲೆಯ ರಾಮನಾಥ್ ಮಿಶ್ರಾ ಎಂಬಾತ ಬಾಕ್ಸರ್ ರೈಲ್ವೆ ನಿಲ್ದಾಣದಿಂದ ನಿರ್ಗಮಿಸುತ್ತಿದ್ದ ಶ್ರಮಜೀವಿ ರೈಲು ಹಿಡಿಯಲು ಹೋಗಿ ಜಾರಿ, ರೈಲ್ವೆ ಹಳಿ ಮೇಲೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಬಳಿಕ ಅವರನ್ನು ರೈಲ್ವೆ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದರು.

ಈ ವೇಳೆ ವೈದ್ಯರು ಗಾಯಗೊಂಡಿದ್ದ ಮಿಶ್ರಾ ಅವರ ಕಾಲನ್ನು ಕತ್ತರಿಸಿ ಪಕ್ಕಕ್ಕಿಟ್ಟು ಡ್ರೆಸ್ಸಿಂಗ್ ಮಾಡುತ್ತಿದ್ದರು. ಈ ವೇಳೆ ಶಸ್ತ್ರಚಿಕಿತ್ಸೆ ಕೊಠಡಿಗೆ ನುಗ್ಗಿದ ನಾಯಿ ಕತ್ತರಿಸಿಟ್ಟಿದ್ದ ಕಾಲಿನ ಭಾಗವನ್ನು ಕಚ್ಚಿಕೊಂಡು ಪರಾರಿಯಾಗಿದೆ.

ಗಂಭೀರ ಗಾಯಗೊಂಡಿದ್ದ ಮಿಶ್ರಾ ಬಳಿಕ ಅವರು ಕೂಡ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದರು.
ಕಪ್ಪು ಬಣ್ಣದ ನಾಯಿ ಬಾಯಿಯಲ್ಲಿ ಒಂದು ತುಂಡು ಮಾಂಸ ಮತ್ತು ಮೂಳೆಯನ್ನು ಕಚ್ಚಿಕೊಂಡು ಸರ್ದಾರ್ ಆಸ್ಪತ್ರೆಯಿಂದ ಪರಾರಿಯಾಗುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ ಎಂದು Times of India ವರದಿ ಮಾಡಿದೆ.

Advertisements

Leave a Reply

%d bloggers like this: