ಚಿತ್ರರಂಗಕ್ಕೆ ಪ್ರಥಮ್ ಗುಡ್ ಬೈ …. ಬೆಂಗಳೂರಿನಿಂದ ಗಂಟು ಮೂಟೆ ಕಟ್ಟಲು ಕಾರಣ ಗೊತ್ತಾ….?

ಒಳ್ಳೆ ಹುಡುಗ, ಕನ್ನಡ ಕಂದ, ಬಿಗ್ ಬಾಸ್ ವಿನ್ನರ್ ಪ್ರಥಮ್ ಬೆಂಗಳೂರು ತೊರೆಯಲು ನಿರ್ಧರಿಸಿದ್ದಾರೆ. ಬೆಂಗಳೂರು ತೊರೆಯುವುದರೊಂದಿಗೆ ಚಂದನವನಕ್ಕೂ ಗುಡ್ ಬೈ ಹೇಳಲು ಒಳ್ಳೆ ಹುಡುಗ ನಿರ್ಧರಿಸಿದ್ದಾರೆ.

ಊರಿಗೆ ತೆರಳುವ ಅವರು ಕೃಷಿಯೊಂದಿಗೆ ಬದುಕು ಸಾಗಿಸಲು ಮುಂದಾಗಿದ್ದಾರೆ. ಇಷ್ಟು ದಿನಗಳ ಕಾಲ ಮನುಷ್ಯರ ತಲೆ ತಿನ್ನುತ್ತಿದ್ದ ಪ್ರಥಮ್, ಇನ್ಮುಂದೆ ಪ್ರಾಣಿ, ಗಿಡ ಮರಗಳೊಂದಿಗೆ ಮಾತನಾಡಬೇಕಾಗಿದೆ. ಊರಿನಲ್ಲೇ ನೆಲೆಯಾಗಬೇಕು ಅನ್ನುವ ಕಾರಣದಿಂದ ಈಗಾಗಲೇ ಬೆಂಗಳೂರಿನಿಂದ ಅರ್ಧದಷ್ಟು ಲಗೇಜ್ ಅನ್ನು ಅವರು ಸಾಗಿಸಿದ್ದಾರೆ. ಇನ್ನು ಕುರಿ ಖರೀದಿಸಿರುವ ಅವರು ಸಾಕಾಣಿಕೆ ಪ್ರಾರಂಭಿಸಿದ್ದಾರೆ.

ಇದರೊಂದಿಗೆ ತಮ್ಮ ತೋಟದಲ್ಲಿ ತೆಂಗಿನ ಗಿಡ ನೆಡಲು ನಿರ್ಧರಿಸಿರುವ ಅವರು ಒಂದಿಷ್ಟು ವರ್ಷಗಳಲ್ಲಿ ಕಾಸು ಸಂಪಾದಿಸುವ ಕನಸು ಹೊಂದಿದ್ದಾರೆ.

ಹಾಗಾದರೆ ಪ್ರಥಮ್ ಅದ್ಯಾಕೆ ಬೆಂಗಳೂರು ತೊರೆಯುವ ನಿರ್ಧರಿಸಿದರು. ಗೊತ್ತಿಲ್ಲ. ದೊಡ್ಡ ಮಟ್ಟದಲ್ಲಿ ಮನಸ್ಸಿಗೆ ಘಾಸಿ ಮಾಡಿಕೊಂಡ ಕಾರಣಕ್ಕೆ ಅವರು ಈ ನಿರ್ಧಾರಕ್ಕೆ ಬಂದಿದ್ದಾರೆ ಅನ್ನುವುದು ಸ್ಪಷ್ಟ.

ತಾವು ಊರಿಗೆ ಹೋಗುತ್ತಿರುವ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಪ್ರಥಮ್,”ಸಿನಿಮಾದಿಂದ ಜೀವನ ಕಟ್ಟಿಕೊಳ್ಳುವುದು ಕಷ್ಟ. ಕಷ್ಟ ಪಟ್ಟು ಸಿನಿಮಾ ಮಾಡಿದರೆ ಒಂದು ವಾರ ಓಡಿಸುವುದು ಕಷ್ಟ. ಹೀಗಾಗಿ ಬೆಂಗಳೂರು ಸಹವಾಸ ಸಾಕಾಗಿದೆ, ಒತ್ತಡ ಪೂರ್ವ ಜೀವನ ಹಿಂಸೆಯಾಗುತ್ತಿದೆ. ಬಹಳಷ್ಟು ಆಸೆ ಇಟ್ಟುಕೊಂಡು ಬೆಂಗಳೂರಿಗೆ ಬಂದೆ. ಏನಾದರೂ ಸಾಧಿಸಬೇಕು ಅನ್ನುವ ಹಂಬಲವಿತ್ತು. ಪರವಾಗಿಲ್ಲ ಒಂದಿಷ್ಟು ಸಾಧಿಸಿದ್ದೇನೆ” ಅಂದಿದ್ದಾರೆ.

ಆದರೆ ಚಿತ್ರರಂಗದ ಕೆಲವೊಂದು ವಿಷಯಗಳಿಂದ ಬೇಸರಗೊಂಡಿರುವ ಪ್ರಥಮ್, ಬಣ್ಣದ ಲೋಕದ ಚಟುವಟಿಕೆ ನಿಲ್ಲಿಸಲು ನಿರ್ಧರಿಸಿದ್ದಾರೆ.  ನಟ ಭಯಂಕರ ಪ್ರಥಮ್ ಅವರ ಕೊನೆ ಸಿನಿಮಾವಾಗಲಿದೆ.

ಬಿಗ್ ಬಾಸ್ ಗೆದ್ದ ಹಿರಿಮೆ ಮತ್ತು ಮೂರು ಸಿನಿಮಾದ ಗರಿಮೆಯೊಂದಿಗೆ ಪ್ರಥಮ್ ಊರಿಗೆ ಹಿಂತಿರುಗಲು ನಿರ್ಧರಿಸಿದ್ದಾರೆ.

ಹಾಗೇ ನೋಡುವುದಾದರೆ ಪ್ರಥಮ್ ಅನ್ನುವ ಹೆಸರು ಕರ್ನಾಟಕಕ್ಕೆ ಗೊತ್ತಿರಲಿಲ್ಲ. ಬಿಗ್ ಬಾಸ್ ಮನೆ ಮೂಲಕ ಮನೆ ಮಾತಾದ ಪ್ರಥಮ್ ಮನೆ ಮಗ ಎಂದು ಅನ್ನಿಸಿಕೊಂಡರು. ನೂರು ವರ್ಷ ಕಳೆದರೂ ಲಾರ್ಡ್ ಪ್ರಥಮ್ ಅನ್ನುವ ಪಾತ್ರವನ್ನು ಯಾರಿಂದಲೂ ಮರೆಯಲು ಸಾಧ್ಯವಿಲ್ಲ. ಖಂಡಿಸುತ್ತೇನೆ ಅನ್ನುವ ಡೈಲಾಗ್ ಅಳಿಸಲು ಸಾಧ್ಯವಿಲ್ಲ.

ಏನೇ, ಕೃಷಿ ರಂಗಕ್ಕೆ ಇಳಿಯುವ ಪ್ರಥಮ್ ಕೈ ಕೆಸರಾಗಲಿ, ಬಾಯಿ ಮೊಸರಾಗಲಿ ಅನ್ನುವುದೇ ನಮ್ಮ ಹಾರೈಕೆ. ಪ್ರಥಮ್ ಈ ನಿರ್ಧಾರ ಕೇಳಿದಾಗ ನೆನಪಾಗಿದ್ದು, ಹುಚ್ಚ ವೆಂಕಟ್ ಹಾಡಿರುವ ಈ ಹಾಡು…

Advertisements

One Comment on “ಚಿತ್ರರಂಗಕ್ಕೆ ಪ್ರಥಮ್ ಗುಡ್ ಬೈ …. ಬೆಂಗಳೂರಿನಿಂದ ಗಂಟು ಮೂಟೆ ಕಟ್ಟಲು ಕಾರಣ ಗೊತ್ತಾ….?

  1. Pingback: ದೇವೇಗೌಡರ ಆರೋಗ್ಯ ವಿಚಾರಿಸಿದ ಪ್ರಥಮ್ :ಒಳ್ಳೆ ಹುಡುಗನ ಕಂಡು ಮಾಜಿ ಪಿಎಂ ಹೇಳಿದ್ದೇನು..? – torrentspree

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: