Advertisements

ಸರ್ಜಾ ಮೇಲೆ #MeToo ವಿಷ ಬಾಣ :ತಾರಾ,ಸುಧಾರಾಣಿ ಆಯ್ತು ಇದೀಗ ಖುಷ್ಬೂ ಸರದಿ

ಅರ್ಜುನ್ ಸರ್ಜಾ ವಿರುದ್ಧ ಕೇಳಿ ಬಂದಿರುವ #MeToo ಆರೋಪ ಇದೀಗ ಚಂದನವನದಲ್ಲಿ ಬಿರುಗಾಳಿ ಎಬ್ಬಿಸಿದೆ. ದುರಂತ ಅದರೆ ನ್ಯೂಸ್ ಚಾನೆಲ್ ಗಳ ಸ್ಟುಡಿಯೋದಲ್ಲಿ ಶೃತಿ ಆರೋಪದ ಬಗ್ಗೆ ಚರ್ವಿತ ಚರ್ವಣ ಚರ್ಚೆಯಾಗುತ್ತಿದೆ. ನಿಜಕ್ಕೂ ನ್ಯಾಯ ಸಿಗಬೇಕಾದರೆ, ಪೊಲೀಸ್ ಮತ್ತು ನ್ಯಾಯಾಲಯದಲ್ಲಿ ವಾದ ಪ್ರತಿವಾದ ನಡೆಯಬೇಕಾಗಿದೆ. ಚಾನೆಲ್ ಗಳಲ್ಲಿ ಚರ್ಚೆಯಾದರೆ ಯಾರಿಗೆ ನ್ಯಾಯ ಸಿಗಲು ಸಾಧ್ಯ.?

ದೂರು ದಾಖಲಾಗದಿದ್ದರೆ, ಪ್ರಕರಣಕ್ಕೆ ತಾರ್ಕಿಕ ಅಂತ್ಯ ಸಿಗಲು ಸಾಧ್ಯವೇ. ಇದನ್ನು ಎಲ್ಲರೂ ಯೋಚನೆ ಮಾಡಬೇಕಾಗಿದೆ.

ಈ ನಡುವೆ ಅರ್ಜುನ್ ಪರ ಬ್ಯಾಟಿಂಗ್ ಮಾಡಿರುವ ಖುಷ್ಬೂ,ಇಡೀ ಜಗತ್ತೇ ಅರ್ಜುನ್ ಸರ್ಜಾರತ್ತ ಬೊಟ್ಟು ಮಾಡಿದರೂ ನಾನು ನಂಬುವುದಿಲ್ಲ ಎಂದು ಹೇಳಿದ್ದಾರೆ.

ಅರ್ಜುನ್ ಸರ್ಜಾರನ್ನು ನಾನು 34 ವರ್ಷಗಳಿಂದಲೂ ನೋಡಿದ್ದೇನೆ. ನನ್ನ ಮೊದಲ ಚಿತ್ರದ ಹೀರೋ ಅರ್ಜುನ್. ಮೊದಲ ಬಾರಿಗೆ ನನ್ನನ್ನು ರಕ್ಷಣೆ ಮಾಡಿದ್ದ ಹೀರೋ ಅವರು. ಅವರು ಎಂದಿಗೂ ಅಸಭ್ಯವಾಗಿ ವರ್ತಿಸಿಲ್ಲ. ಸರ್ಜಾ ವಿರುದ್ಧ ಈ ರೀತಿಯ ಆರೋಪ ಕೇಳಿ ನನಗೆ ಅಚ್ಚರಿಯಾಯಿತು. ಕನ್ನಡ, ತೆಲುಗು ಮತ್ತು ತಮಿಳು ಭಾಷೆಯ ಸಿನಿಮಾಗಳಲ್ಲಿ ಇಬ್ಬರೂ ಒಟ್ಟಾಗಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದೇವೆ.

ಸರ್ಜಾ ಮೇಲಿನ ಆರೋಪ ಅವರ ಎರಡು ಹೆಣ್ಣು ಮಕ್ಕಳ ಮೇಲೆ ಎಂತಹ ಪರಿಣಾಮ ಬೀರಿರುತ್ತದೆ ಎಂದು ನನಗೆ ತಿಳಿದಿದೆ. ನಾನು ಗ್ಯಾರೆಂಟಿ ಕೊಡುತ್ತೇನೆ. ಅರ್ಜುನ್ ಎಂದಿಗೂ ಯಾರೊಂದಿಗೂ ಆ ರೀತಿ ನಡೆದುಕೊಂಡಿರುವುದಿಲ್ಲ. ಇಡೀ ಜಗತ್ತೇ ಅವರತ್ತ ಕೈ ತೋರಿದರೂ ನಾನು ನಂಬುವುದಿಲ್ಲ. ಅವರ ಪರ ನಾನು ಮಾತನಾಡಲಿಲ್ಲ ಅಂದ್ರೆ ನನಗೆ ಶೇಮ್ ಅಗುತ್ತದೆ. ಅವರ ಕುಟುಂಬದಂತೆಯೇ ನಾನು ಅವರನ್ನು ನಂಬುತ್ತೇನೆ. ನಾನು ನಿನ್ನ ಪರ ಇದ್ದೇನೆ ಎಂದು ನಟ ಅರ್ಜುನ್‌ ಸರ್ಜಾಗೆ ಬೆಂಬಲ ನೀಡಿದ್ದಾರೆ.

ಈ ನಡುವೆ ಹಿರಿಯ ನಟಿ ಸುಧಾರಾಣಿ ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿ, ಶೃತಿ ಅವರು ಮಾಡಿರುವ ಆರೋಪ ಎಷ್ಟು ಸತ್ಯ ಎಂಬುದು ನನಗೆ ಗೊತ್ತಿಲ್ಲ. ನಾನು ಅರ್ಜುನ್ ಸರ್ಜಾ ಅವರ ಜೊತೆ ಹಲವು ವರ್ಷಗಳಿಂದ ಕೆಲಸ ಮಾಡಿದ್ದೇನೆ. ಅವರು ನನಗೆ ಒಳ್ಳೆಯ ಸ್ನೇಹಿತ, ನನಗೆ ಅವರಿಂದ ಯಾವುದೇ ರೀತಿಯ ಅನುಭವವಾಗಿಲ್ಲ. ಇದೇ ಮೊದಲ ಬಾರಿಗೆ ಈ ರೀತಿ ಆರೋಪ ಕೇಳಿ ಬಂದಿದೆ ಎಂದಿದ್ದಾರೆ.

Advertisements

One Comment on “ಸರ್ಜಾ ಮೇಲೆ #MeToo ವಿಷ ಬಾಣ :ತಾರಾ,ಸುಧಾರಾಣಿ ಆಯ್ತು ಇದೀಗ ಖುಷ್ಬೂ ಸರದಿ

  1. ಅವರು .ಸುಮಾರು 150 ಚಿತ್ರದಲಿ .ಬಾಲಿವುಡ್ ಟಾಲಿ ಸಾಂಡಲ್ ಮಲೆಯಾಳಿ ನಟಿಯರ ನಟಿಸಿ ಯಾವತ್ ಒಂದ್ ಕೆಟ್ಟ ಅಬಿಪ್ರಯ ಬಂದಿಲ್ಲ ಈವಾಗ ? ಇವೇಲ್ಲ ಸುಳ್

Leave a Reply

%d bloggers like this: