ಧೃವ ಸರ್ಜಾರೊಂದಿಗೆ ಅವಕಾಶ ಸಿಕ್ಕಿಲ್ಲ ಎಂದು #MeToo ಬಾಣ ಹೂಡಿದರೇ… ಶೃತಿ ಹರಿಹರನ್…?

ಚಂದನವನದಲ್ಲಿ ಎದ್ದಿರುವ #MeToo ಆಂದೋಲನವನ್ನು ಹೊಸಕಿ ಹಾಕುವ ಕೆಲಸ ನಡೆಯುತ್ತಿದೆಯೇ.. ಇಲ್ಲ ಅನ್ನುವಂತಿಲ್ಲ. ಆಂದೋಲನದಲ್ಲಿ ಬರಬಾರದ ಮುಖಗಳು ಪ್ರವೇಶ ಮಾಡಿರುವುದರಿಂದ ಹೋರಾಟ ಹಾದಿ ತಪ್ಪುತ್ತಿದೆ.

ಪ್ರಕಾಶ್ ರೈ ಮತ್ತು ಚೇತನ್ ಎಂಟ್ರಿಯಿಂದ ಹೋರಾಟ ರಾಜಕೀಯ ಬಣ್ಣದೊಂದಿಗೆ ಹೊಳೆಯಲಾರಂಭಿಸಿದೆ. ಬಣ್ಣ ಬಳಿದರೋ, ಬಣ್ಣ ಬಯಲಾಯ್ತೋ ಗೊತ್ತಿಲ್ಲ.

ಈ ನಡುವೆ ನಟ ಅರ್ಜುನ್ ಸರ್ಜಾ ವಿರುದ್ಧ ಮಾಡಿರುವ ಮೀಟೂ ಆರೋಪ ಹಿಂದೆ ಹಳೆಯ ದ್ವೇಷ ಇದೆ ಎಂದು ಫೀಲ್ಮ್ ಚೇಂಬರ್ ಕಾರ್ಯದರ್ಶಿ ಭಾಮಾ ಹರೀಶ್ ಆರೋಪಿಸಿದ್ದಾರೆ.

bama1

ಖಾಸಗಿ ವಾಹಿನಿಯೊಂದರ ಚರ್ಚಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು, ಚೇಂಬರ್ ಗೆ ಲಭಿಸಿರುವ ಮಾಹಿತಿಗಳ ಪ್ರಕಾರ ನಟಿ ಶೃತಿ ಹರಿಹರನ್ ಅವರು ಅರ್ಜುನ್ ಸರ್ಜಾ ಅವರ ಅಳಿಯ ಧೃವ ಸರ್ಜಾರೊಂದಿಗೆ ನಟಿಸುವ ಅವಕಾಶ ನೀಡಲು ಮನವಿ ಮಾಡಿದ್ದರು.

ಈ ವೇಳೆ ಅವರ ಜೋಡಿ ಹಾಗೂ ವಯಸ್ಸಿನ ಹೊಂದಾಣಿಕೆ ಕಾರಣ ನೀಡಿ ಅರ್ಜುನ್ ಸರ್ಜಾ ಅವರು ಶೃತಿ ಅವರ ಮನವಿಯನ್ನು ನಿರಾಕರಿಸಿದ್ದರು. ಅಂದಿನ ದ್ವೇಷ ದೊಡ್ಡದಾಗಿ ಇಂದು ಮೀಟೂವರೆಗೂ ಬಂದಿದೆ ಎಂದು ಆರೋಪಿಸಿದ್ದಾರೆ.

Sruthi-Arjun

ದ್ವೇಷದಿಂದ ಆರೋಪ ಮಾಡಿದ್ದಾರೆ. ಇದು ಸರಿಯಲ್ಲ. ಇಲ್ಲ ಸಲ್ಲದ ಆರೋಪ ಮಾಡುವುದು ಉತ್ತಮ ಬೆಳವಣಿಗೆ ಅಲ್ಲ ಎಂದಿರುವ ಭಾಮಾ ಹರೀಶ್ ದೊಡ್ಡದೊಂದು ಬಾಂಬ್ ಸಿಡಿಸಿದ್ದಾರೆ.

ಬೇರೆ ಯಾರಾದರೂ ಈ ಮಾತು ಹೇಳಿದ್ರೆ ತೇಲಿಸಿ ಬಿಡಬಹುದಿತ್ತು. ಹೇಳಿರುವುದು ಫಿಲ್ಮ್ ಚೇಂಬರ್ ಕಾರ್ಯದರ್ಶಿ, ಹೀಗಾಗಿ ಆರೋಪವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಿದೆ.

ಜೊತೆಗೆ ಸರ್ಜಾ ವಿರುದ್ಧ ಆರೋಪ ಬಂದ ವೇಳೆ ಧೃವ ಸರ್ಜಾ ಅಬ್ಬರಿಸಿದ ರೀತಿಯೂ ಇದಕ್ಕೆ ಪುಷ್ಟಿ ನೀಡಿದೆ.

ಈಗಾಗಲೇ 10 ಲಕ್ಷದ ವಿಚಾರಕ್ಕೆ ಸಂಬಂಧಿಸಿದಂತೆ ಚೇತನ್ ಮತ್ತು ಅರ್ಜುನ್ ಸರ್ಜಾ ನಡುವೆ ಭಿನ್ನಾಭಿಪ್ರಾಯ ಮೂಡಿತ್ತು. ಹೀಗಾಗಿ ಚೇತನ್ ಆಂದೋಲನದ ಲಾಭ ಪಡೆದುಕೊಳ್ಳುತ್ತಿದ್ದಾರೆ ಅನ್ನುವ ಆರೋಪ ಈಗಗಾಲೇ ಕೇಳಿ ಬಂದಿದೆ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: