Advertisements

ಶೃತಿ ಹರಿಹರನ್ ಬಗ್ಗೆ ಅರ್ಜುನ್ ಸರ್ಜಾ ತಾಯಿ ಸಿಡಿಸಿದ ಬಾಂಬ್….!

#Me too ಬಿರುಗಾಳಿ ಚಂದನವನದಲ್ಲಿ ಸುಂಟರಗಾಳಿಯಾಗಿದೆ. ತಪ್ಪು ಮಾಡಿದವರು ಯಾರು..? ಯಾರು ತಪ್ಪು ಮಾಡಿಲ್ಲ ಒಂದೂ ಅರ್ಥವಾಗುತ್ತಿಲ್ಲ. ಕನಿಷ್ಠ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದರೆ ತನಿಖೆಯ ಮೂಲಕವಾದರೂ ಸತ್ಯ ಗೊತ್ತಾಗುತ್ತಿತ್ತು. ಆದರೆ ಇಲ್ಲಿ ಬರೀ ಮಾತಿನ ಸಮರ. ಪರ ವಿರೋಧ ಬ್ಯಾಟಿಂಗ್ ನಡೆಯುತ್ತಿದೆ.

ಈ ನಡುವೆ ಅರ್ಜುನ್ ಅವರ ತಾಯಿ ಲಕ್ಷ್ಮಿ ದೇವಮ್ಮ ಮಾತನಾಡಿದ್ದು, ಖಾಸಗಿ ವಾಹಿನಿಯೊಂದರ ಸ್ಟುಡಿಯೋದಲ್ಲಿ ಮಾತನಾಡಿದ ಅವರು ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ಅವುಗಳು ಹೀಗಿವೆ

ಆಟೋದಲ್ಲಿ ನಮ್ಮ ಮನೆಗೆ ಆಕೆ ಬಂದಿದ್ಯಾಕೆ..?

ವಿಸ್ಮಯ ಸಿನಿಮಾ ಮುಗಿದಿತ್ತು. ಅರ್ಜುನ್ ಸರ್ಜಾ ಅವತ್ತು ಮದ್ರಾಸ್ ಗೆ ಹೋಗಿದ್ದ. ಆ ವೇಳೆ ಶ್ರುತಿ ಆಟೋದಲ್ಲಿ ನಮ್ಮ ಮನೆಗೆ ಬಂದಿದ್ದರು. ನಾನು ಬಾಗಿಲಿನಲ್ಲಿ ನಿಂತಿದ್ದೆ. ಅರ್ಜುನ್ ಸರ್ಜಾ ಸರ್ ಇದ್ದರಾ ಎಂದು ಕೇಳಿದ್ರು. ಅವರಿಲ್ಲ ನೀವು ಯಾರಮ್ಮ ಅಂದೆ. ನನ್ನ ಹೆಸರು ಶ್ರುತಿ ಹರಿಹರನ್, ನಾನು ಅವರ ಜೊತೆಯಲ್ಲಿ ಒಂದು ಸಿನಿಮಾ ಮಾಡಿದ್ದೇನೆ ಅಂದರು. ಆ ದಿನ ಅವರು ನಮ್ಮ ಮನೆಗೆ ಯಾಕೆ ಬಂದ್ಲು. ಬಂದಿಲ್ಲ ಎಂದು ನನ್ನ ಮುಂದೆ ಬಂದು ಆಕೆ ಹೇಳಲಿ.

ಕೆಟ್ಟ ಸ್ಪರ್ಶ ಅಂದರೇನು..?

ನನ್ನ ಮಗ ಡೈರೆಕ್ಟರ್, ನಿಮಾರ್ಪಕ, ದೃಶ್ಯ,ನಟನೆ ಚೆನ್ನಾಗಿ ಬಂದಿಲ್ಲ ಅಂದ್ರೆ ಹೇಳಿಕೊಡ್ತಾನೆ. ಅದು ಅವನ ಕರ್ತವ್ಯ.ಅದನ್ನ ಹೀಗೆ,ಈಗ ತಪ್ಪು ಅಂದ್ರೆ ಸರಿನಾ’? ಪಕ್ಕಾ ಅನುಭವವಾಗಿರುವುದರಿಂದ ಕೆಟ್ಟ ಸ್ಪರ್ಶ ಯಾವುದು, ಒಳ್ಳೆಯ ಸ್ಪರ್ಶ ಯಾವುದು ಅಂತ ಆಕೆಗೆ ಗೊತ್ತಿದೆ.

ಮಗನ ಕಾಲಿಗೆ ಬಿದ್ದು ಕ್ಷಮೆ ಕೇಳಲೇಬೇಕು…

ಯಾವುದೇ ಕಾರಣಕ್ಕೂ ನನ್ನ ಮಗ ಕ್ಷಮೆ ಕೇಳಲ್ಲ. ನಮ್ಮ ಮನೆಯಲ್ಲಿ ಎಲ್ಲರೂ ಒಂದೇ. ನನ್ನ ಮಗನ ಮರ್ಯಾದೆ ಕಳೆದಿದ್ದಾಳೆ. ಯಾರೇ  ಬಿಟ್ಟರೂ ನಾನಂತೂ ಬಿಡಲ್ಲ, ನನ್ನ ಮಗನ ಕಾಲಿಗೆ ಬಿದ್ದು ಕ್ಷಮಾಪಣೆ ಕೇಳಬೇಕು’

ಪ್ರಕಾಶ್ ರೈ ಏನು ಸಾಚಾ..?

ಪ್ರಕಾಶ್ ರೈ ಜೀವನದಲ್ಲೇ ಯಾವುದೂ ಸರಿಯಿಲ್ಲ. ಮೂರ್ನಾಲ್ಕು ಪತ್ನಿಯರನ್ನು ಬಿಟ್ಟಿದ್ದಾರೆ. ಅಂತಹ ವ್ಯಕ್ತಿ ನನ್ನ ಮಗನ ಮೇಲೆ ಆರೋಪ ಮಾಡ್ತಿದ್ದಾರೆ. ಮೊದಲು ಅವರ ವ್ಯಕ್ತಿತ್ವ ನೋಡಿಕೊಳ್ಳಲಿ’

Advertisements

One Comment on “ಶೃತಿ ಹರಿಹರನ್ ಬಗ್ಗೆ ಅರ್ಜುನ್ ಸರ್ಜಾ ತಾಯಿ ಸಿಡಿಸಿದ ಬಾಂಬ್….!

  1. Pingback: ಅಪರೇಷನ್ ಸಂಕ್ರಾಂತಿ : ಕಾಂಗ್ರೆಸ್ ಮನೆಯಲ್ಲಿ ಬೆಂಕಿ : ಕುಮಾರಸ್ವಾಮಿ ಫುಲ್ ಕೂಲ್ – torrentspree

Leave a Reply

%d bloggers like this: