Advertisements

ಬೆಂಗಳೂರಿಗೆ ಎಂಟ್ರಿ ಕೊಟ್ಟ ಅಣ್ಣಾಮಲೈ ಮೊದಲ ದಿನ ಮಾಡಿದ್ದೇನು ಗೊತ್ತಾ..?

ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿಯಾಗಿ ಅಣ್ಣಾಮಲೈ ಅವರು ಇಂದು ಅಧಿಕಾರ ಸ್ವೀಕಾರ ಮಾಡಿದ್ದಾರೆ.
ಖಡಕ್ ಆಫೀಸರ್ ಅಂತಾ ಫೇಮಸ್ ಆಗಿರುವ ಅಣ್ಣಾಮಲೈ,ನಿರ್ಗಮಿತ ಡಿಸಿಪಿ ಡಾ. ಶರಣಪ್ಪ ಎಸ್.ಡಿ. ಅವರಿಂದ ದಂಡ ಸ್ವೀಕರಿಸಿದರು.

ಇದಕ್ಕೂ ಮುನ್ನ ಅಣ್ಣಾಮಲೈ ತಮ್ಮ ಅಧಿಕಾರ ವ್ಯಾಪ್ತಿಯನ್ನು, ಏರಿಯಾವನ್ನು ಪರಿಚಯ ಮಾಡಿಕೊಂಡರ. ಅಧಿಕಾರ ಸ್ವೀಕರಿಸಿದ ನಂತರ ಎಲ್ಲಾ ಠಾಣೆಗಳಿಗೆ ತೆರಳಿ ಸಿಬ್ಬಂದಿ ಜೊತೆ ಮಾತುಕತೆ ನಡೆಸಿದ್ದಾರೆ.

ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಎಲ್ಲಾ ಠಾಣೆಗಳಿಗೆ ತೆರಳಿದ ಅಧಿಕಾರಿಗಳು ಬೆರಳೆಣಿಕೆ ಮಂದಿ ಅನ್ನುವುದು ಇಲ್ಲಿ ಗಮನಾರ್ಹ.

ರಾಮನಗರ, ಉಡುಪಿ, ಚಿಕ್ಕಮಗಳೂರಿನಲ್ಲಿ ಸೇವೆ ಸಲ್ಲಿಸಿದ್ದ ಅಣ್ಣಾ ಮಲೈ ಕಾಫಿನಾಡಿನಲ್ಲಿ ಖಡಕ್ ಅಧಿಕಾರಿಯಾಗಿ ಜನಪ್ರಿಯತೆ ಪಡೆದಿದ್ದರು. ನಕ್ಸಲ್,ಮಟ್ಕಾ ದಂಧೆ ಸೇರಿದಂತೆ ಅನೇಕ ಸಮಾಜಘಾತುಕ ಶಕ್ತಿಗಳನ್ನು ಹೊಸಕಿ ಹಾಕಿದ ಖ್ಯಾತಿ ಇವರದ್ದು. ದತ್ತಪೀಠ ವಿವಾದ ತಾರಕಕ್ಕೇರಿದಾಗ ಲಾಠಿ ಹಿಡಿದು ಕಾನೂನು ಸುವ್ಯವಸ್ಥೆ ಕಾಪಾಡಿದ ಹಿರಿಮೆ ಇವರದ್ದು.

ಒಂದೆಡೆ ರೌಡಿಗಳ ಚಳಿ ಬಿಡಿಸಿದ್ರೆ ಮತ್ತೊಂದು ಕಡೆ, ತಮ್ಮ ಇಲಾಖೆ ಸಿಬ್ಬಂದಿ ಮೇಲೂ ಕಟ್ಟು ನಿಟ್ಟಿನ ನಿಯಮಗಳನ್ನು ಜಾರಿಗೆ ತಂದಿದ್ದರು. ಹೊಟ್ಟೆ ಹೊತ್ತ ಅಧಿಕಾರಿಗಳ ತೂಕ ಕರಗಿಸಲು ವರ್ಗಾವಣೆ ಆಫರ್ ಕೊಟ್ಟು, ತಮ್ಮ ಕೈ ಕೆಳಗಿನ ಸಿಬ್ಬಂದಿಯನ್ನು ಫಿಟ್ ಆಗಿಸಿದ್ದರು.

ಈವರೆಗಿನ ತಮ್ಮ ಸೇವಾವಧಿಯಲ್ಲಿ ಬೆಂಗಳೂರಿಗೆ ಮೊದಲ ಬಾರಿಗೆ ಅಣ್ಣಾಮಲೈ ಎಂಟ್ರಿ ಕೊಟ್ಟಿದ್ದಾರೆ.
ಈಗಾಗಲೇ ತಮ್ಮ ಸಬ್ ಡಿವಿಶನ್ ಬಗ್ಗೆ ಪರಿಚಯ ಮಾಡಿಕೊಂಡಿರುವ ಅಣ್ಣಾಮಲೈ, ಮಾಧ್ಯಮದವರ ವಾಟ್ಸಾಪ್ ಗ್ರೂಪ್ ನಲ್ಲಿ ನನ್ನ ನಂಬರ್ ಸೇರಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.

ಜನರಿಗಾಗಿ ನೀವು ನಮಗೆ ಸಹಕಾರ ಕೊಡಿ, ನಿಮಗೆ ನಾವು ಸಹಕಾರ ಕೊಡುತ್ತೇವೆ. ಟಿವಿಯಲ್ಲಿ ಬರುವಷ್ಟು ದೊಡ್ಡ ಮನುಷ್ಯ ನಾನಲ್ಲ. ಹಾಗಂತ ಸುದ್ದಿ ವಾಹಿನಿಗಳ ಕ್ಯಾಮಾರ ಬೈಟ್ ಅಗತ್ಯ ಇತ್ತು ಅಂದರೆ ಖಂಡಿತಾ ಕೊಡುತ್ತೇನೆ ಅನ್ನುವ ಮೂಲಕ, ದಕ್ಷಿಣ ವಿಭಾಗದಲ್ಲಿ ತಮ್ಮ ಕಾರ್ಯ ಪ್ರಾರಂಭಿಸಿದ್ದಾರೆ.

ನಾನು ಈಗ ಮಗುವಾಗಿದ್ದೇನೆ. ಮಗು ಹುಟ್ಟಿದ್ದಾಗ ಹೇಗೆ ಇರುತ್ತೋ ಹಾಗಿದ್ದೇನೆ. ಬೆಂಗಳೂರು ಬಗ್ಗೆ ನನಗೆ ಏನೂ ಗೊತ್ತಿಲ್ಲ. ಸಿಟಿಯ ಏರಿಯಾಗಳ ಹೆಸರು ಕೂಡಾ ಗೊತ್ತಿಲ್ಲ. ಒಂದು ವಾರದಲ್ಲಿ ಎಲ್ಲಾ ತಿಳಿದುಕೊಳ್ಳುತ್ತೇನೆ ಎಂದು ಮುಗ್ದವಾಗಿ ಹೇಳಿದ್ದಾರೆ.

ಆದರೆ ಅಣ್ಣಾ, ಬೆಂಗಳೂರಿಗೆ ಬರುವಾಗ ಹೋಮ್ ವರ್ಕ್ ಮಾಡಿ ಬಂದಿದ್ದಾರೆ ಅನ್ನುವುದು ಪಕ್ಕಾ. ಬೆಂಗಳೂರಿನಲ್ಲಿ ಸುದ್ದಿಗಳು ಪೊಲೀಸರಿಗೆ ತಲುಪುವ ಮುನ್ನ ವರದಿಗಾರರಿಗೆ ತಲುಪುತ್ತದೆ ಅನ್ನುವ ಅರಿವು ಅವರಿಗಿದೆ. ಅದರಲ್ಲೂ ಅಪರಾಧ ಸುದ್ದಿಗಳು ಪೊಲೀಸರ ಕಿವಿಗೆ ಬೀಳುವ ಮುನ್ನ, ಟಿವಿಗಳಲ್ಲಿ Breaking news  ಆಗಿರುತ್ತದೆ. ಹೀಗಾಗಿಯೇ ಎಲ್ಲಿಂದ ಕೆಲಸ ಪ್ರಾರಂಭಿಸಬೇಕು. ಯಾರ ವಿಶ್ವಾಸವಿಟ್ಟುಕೊಳ್ಳಬೇಕು ಎಂದು ಅರಿತು, ಸಿಲಿಕಾನ್ ಸಿಟಿಗೆ ಎಂಟ್ರಿ ಕೊಟ್ಟಿದ್ದಾರೆ. ಗುಡ್ ಲಕ್ ಸಾರ್.

Advertisements

One Comment on “ಬೆಂಗಳೂರಿಗೆ ಎಂಟ್ರಿ ಕೊಟ್ಟ ಅಣ್ಣಾಮಲೈ ಮೊದಲ ದಿನ ಮಾಡಿದ್ದೇನು ಗೊತ್ತಾ..?

  1. Pingback: ಪೇದೆ ಅಮಾನತು : ಬಂದ ಮೂರೇ ದಿನಕ್ಕೆ ಖದರ್ ತೋರಿದ ಅಣ್ಣಾಮಲೈ – torrentspree

Leave a Reply

%d bloggers like this: