Advertisements

ಶೃತಿ ಹರಿಹರನ್ ಅಂದ್ರೆ ಯಾರು…. ಸರೋಜಾ ದೇವಿ ಪ್ರಶ್ನೆ

ಚಂದನವನದ #MeToo ಅಭಿಯಾನ ಅದ್ಯಾಕೋ ಹಾದಿ ತಪ್ಪಿದಂತೆ ಕಾಣಿಸುತ್ತಿದೆ.ಶೃತಿ ಹರಿಹರನ್ ಬೆಂಬಲಕ್ಕೆ ನಿಂತವರು, ಚೇತನ್ ಮತ್ತು ಪ್ರಕಾಶ್ ರೈ ಆಂದೋಲನದಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆ ಸರ್ಜಾ ಪರ ವಾಲಿದ್ದಾರೆ.ಯಾಕೆ ಹೀಗಾಯ್ತು ಅನ್ನುವುದಕ್ಕೆ ಉತ್ತರವೇ ಇಲ್ಲದಂತಾಗಿದೆ.

ಈ ನಡುವೆ ಅಂಬರೀಶ್ ನೇತೃತ್ವದಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿ ಸಭೆ ನಡೆಸಲು ನಿರ್ಧರಿಸಿದೆ.ಪರಿಸ್ಥಿತಿ ನೋಡಿದರೆ ಸೌಹಾರ್ದಯುತವಾಗಿ ಸಮಸ್ಯೆ ಬಗೆ ಹರಿಯುವಂತೆ ಕಾಣಿಸುತ್ತಿದೆ.ಹಾಗಾದ್ರೆ ನಿಜಕ್ಕೂ ಅನ್ಯಾಯವಾದ ಹೆಣ್ಣು ಮಕ್ಕಳಿಗೆ ನ್ಯಾಯ ಎಲ್ಲಿದೆ ಅನ್ನುವ ಪ್ರಶ್ನೆಗೆ ಉತ್ತರವಿಲ್ಲ.

ಖಾಸಗಿ ವಾಹಿನಿಯೊಂದಿಗೆ ಮಾತನಾಡಿರುವ ಕನ್ನಡದ ಹಿರಿಯ ನಟಿ ಬಿ.ಸರೋಜಾ ದೇವಿ ಅರ್ಜುನ್ ಸರ್ಜಾ ಪರ ಬ್ಯಾಟ್ ಬೀಸಿದ್ದಾರೆ.

ಶೃತಿ ಯಾರು ಎಂದು ನನಗೆ ಗೊತ್ತಿಲ್ಲ. ಇತ್ತೀಚೆಗೆ ಅಂಬಿ ನಿನಗೆ ವಯಸ್ಸಾಯ್ತೋ ಚಿತ್ರದಲ್ಲಿ ಅವರನ್ನು ನೋಡಿದ್ದೇನೆ. ವೈಯುಕ್ತಿಕವಾಗಿ ಎಂದಿಗೂ ಭೇಟಿ ಮಾಡಿಲ್ಲ.

ಇನ್ನು ಸರ್ಜಾ ಅವರ ಕುಟುಂಬ ನನಗೆ ಚೆನ್ನಾಗಿ ಗೊತ್ತಿದೆ. ಅರ್ಜುನ್ ಸರ್ಜಾ ನನ್ನ ಜೊತೆ ಅಭಿನಯಸಿದ್ದಾರೆ.ಅವರು ಅಂತಾ ಸ್ವಭಾವದರಲ್ಲ.ಹೆಣ್ಣು ಮಕ್ಕಳಿಗೆ ಗೌರವ ಕೊಡುತ್ತಾರೆ.ಡಿನ್ನರ್ ಗೆ ಕರೆದಿದ್ದಾರೆ ಅಂದರೆ ನಂಬಲು ಸಾಧ್ಯವಿಲ್ಲ.  ಹೀಗಾಗಿ ಆಕೆ ಈ ರೀತಿ ಮಾತನಾಡುವುದು ಸರಿಯಲ್ಲ ಅಂದಿದ್ದಾರೆ.

ಈ ನಡುವೆ ಹಿರಿಯ ನಟಿ ತಾರಾ ಕೂಡಾ ಮಾತನಾಡಿದ್ದು, ಅರ್ಜುನ್​ ಸರ್ಜಾ ಅವರ ಜೊತೆಗೆ ನಾನು ‘ಪ್ರೇಮಾಗ್ನಿ’ ಸಿನಿಮಾದಲ್ಲಿ ನಟಿಸಿದ್ದೇನೆ. ಅವರು ಏನು ಎನ್ನುವುದು ನನಗೆ ಚೆನ್ನಾಗಿ ಗೊತ್ತು. ಅವರು ತುಂಬ ಒಳ್ಳೆಯ, ಸಭ್ಯ ಮನುಷ್ಯ.” ಎಂದು ನಟ ಅರ್ಜುನ್ ಸರ್ಜಾ ಪರ ನಟಿ ತಾರಾ ಬ್ಯಾಟಿಂಗ್ ಮಾಡಿದ್ದಾರೆ.

ಮೊದಲು ಹೀಗೆಲ್ಲ ಇರಲಿಲ್ಲ. ನಾವು ಸಂಬಂಧಗಳಿಗೆ ಬೆಲೆ ಕೊಡುತ್ತಿದ್ದೆವು. ನಾನಂತೂ ಹಲವು ಅತ್ಯಚಾರಾದ ದೃಶ್ಯಗಳಲ್ಲಿ ನಟಿಸಿದ್ದೇನೆ. ಒಂದು ದಿನವೂ ಕೆಟ್ಟ ಅನುಭವ ಆಗಿಲ್ಲ ಎಂದಿರುವ ತಾರ, ನನಗೆ ಶ್ರುತಿ ಹರಿಹರನ್​ ಬಗ್ಗೆ ಗೊತ್ತಿಲ್ಲ. ಅವರ ಜೊತೆ ನಟಿಸಿಯೂ ಇಲ್ಲ. ಮೀಟೂ ಒಂದು ಒಳ್ಳೆಯ ಅಭಿಯಾನ. ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು ಎಂದು ಹೇಳಿದ್ದಾರೆ.

Advertisements

Leave a Reply

%d bloggers like this: