Advertisements

ಸರ್ಜಾ ಬಳಿ ದುಡ್ಡು, ಹೆಸರಿದೆ: ಶೃತಿ ಬೆನ್ನಿಗೆ ನಿಂತ ಸಂಯುಕ್ತಾ ಹೆಗ್ಡೆ

ನಟ ಅರ್ಜುನ್ ಸರ್ಜಾ ವಿರುದ್ಧ ಮೀಟೂ ಆರೋಪ ಮಾಡಿದ್ದ ಶೃತಿ ಹರಿಹರನ್ ಬೆನ್ನಿಗೆ ಶ್ರದ್ಧಾ ಶ್ರೀನಾಥ್ ಹಾಗೂ ರಾಗಿಣಿ ದ್ವಿವೇದಿ ನಿಂತ ಬೆನ್ನಲ್ಲೇ ಇದೀಗ ಮತ್ತೊಬ್ಬ ನಟಿ ಸಂಯುಕ್ತಾ ಹೆಗ್ಡೆ ಕೂಡ ಅವರಿಗೆ ಸಾಥ್ ನೀಡಿದ್ದಾರೆ.

ಹರಿಹರನ್ ಕಿರಿಕ್ ಹುಡುಗಿ ಸಂಯುಕ್ತಾ ಹೆಗ್ಡೆ ಬ್ಯಾಟ್ ಬೀಸಿದ್ದು, ಟ್ವೀಟ್ ಮೂಲಕ ಬೆಂಬಲ ವ್ಯಕ್ತಪಡಿಸಿರುವ ಸಂಯುಕ್ತಾ ಸರ್ಜಾ ಕುಟುಂಬದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮ್ಮ‌ ಚಿತ್ರರಂಗದಲ್ಲಿ ಹೆಣ್ಣು ಮಕ್ಕಳು ‌ಮುಂದೆ ಬಂದು ತಮಗಾದ ಅನ್ಯಾಯದ ಬಗ್ಗೆ ಮಾತನಾಡಲು ಭಯಪಡುತ್ತಾರೆ. ನಮ್ಮಂತ ನಟಿಯರು ಧೈರ್ಯವಾಗಿ ಮುಂದೆ ಬಂದು ಮಾತನಾಡಿದರೆ ಟೀಕೆ ಮತ್ತು ಟ್ರೋಲ್ಗೆ ಗುರಿಯಾಗುತ್ತೇವೆ. ಈಗ ಶ್ರುತಿ ಬಗ್ಗೆಯು ಎಲ್ಲ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಹೌದು ಸರ್ಜಾ ಅವರ ಕುಟುಂಬಕ್ಕೆ ಇತಿಹಾಸವಿದೆ. ಪವರ್ ಇದೆ ಹಾಗೂ ಹಣ ಬಲ ಇದೆ. ಹಾಗಂತ ಅವರಿಗೆ ಅಸಹ್ಯವಾಗಿ ನಡೆದಕೊಳ್ಳುವ ಅಧಿಕಾರ ಕೊಟ್ಟವರು ಯಾರು? ನಮ್ಮ ಚಿತ್ರರಂಗದಲ್ಲಿ ನಾವು ಈ ರೀತಿಯ ಹೋರಾಟದಲ್ಲಿ ಸೋಲುತ್ತೇವೆ. ಅನೇಕರು ಶ್ರುತಿ ಹೇಳಿದ ಮಾತನ್ನು ಸುಳ್ಳು ಎನ್ನುತ್ತಿದ್ದಾರೆ. ಬೇರೆ ಸ್ಥಳದಿಂದ ಬಂದು ಇಲ್ಲಿ ಭಾಷೆ ಕಲಿತು ಸುಳ್ಳು ಹೇಳುತ್ತಾರೆ ಎನ್ನುವ ಆರೋಪ ಮಾಡುತ್ತಾರೆ. ಇದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ನಾಯಕಿಯರಿಗೆ ಸಂಭಾವನೆಯಲ್ಲಂತೂ ಸಮಪಾಲು ಇಲ್ಲ. ಹಾಗಂತ ಈ ವಿಚಾರವನ್ನು ಪ್ರಶ್ನೆ ಮಾಡಬಾರದೇ? ತಪ್ಪನ್ನು ಪ್ರಶ್ನಿಸುವ ಹಕ್ಕು ಎಲ್ಲರಿಗೂ ಇದೆ. ನ್ಯಾಯಕ್ಕಾಗಿ ಹೋರಾಟ ಮಾಡಲೇ ಬೇಕು. ನಿಮ್ಮ ಮನೆ ಹಣ್ಮಕ್ಕಳಿಗೆ ಹೀಗಾಗಿದ್ದರೆ ಸುಮ್ಮನಿರುತ್ತೀರಾ ಅಂತ ಕಿರಿಕ್ ನಟಿ ಸಂಯುಕ್ತಾ ಹೆಗ್ಡೆ ಪ್ರಶ್ನಿಸಿದ್ದಾರೆ. ಎಂದು ಟೀಕಾ ಪ್ರಹಾರ ನಡೆಸಿದ್ದಾರೆ.

ನಟಿ ರಾಗಿಣಿ ಕೂಡ ಶೃತಿ ಹರಿಹರನ್ ಬೆನ್ನಿಗೆ ನಿಂತಿದ್ದು, ಮೀಟೂ ಅಭಿಯಾನದಿಂದ ಸಮಸ್ಯೆ ಹೇಳಿಕೊಳ್ಳುವುದು ಒಳ್ಳೆಯ ವಿಷಯ. ಅದನ್ನು ಕೆಲವರು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಆದರೆ ಶೃತಿ ಹರಿಹರನ್ ಒಳ್ಳೆ ಹುಡುಗಿ, ಅನಗತ್ಯವಾಗಿ ಹೇಳಿಕೊಳ್ಳಲ್ಲ. ಶೃತಿ ಅವರಿಗೆ ನಿಜವಾಗಿ ಅಂತಹ ಘಟನೆ ನಡೆದಿದ್ದರೆ ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು. ಮೀಟೂ ಅಭಿಯಾನವನ್ನು ಯಾರು ಕೂಡ ಸ್ವಾರ್ಥಕ್ಕೆ ಬಳಸುವುದು ಸರಿಯಲ್ಲ ಎಂದು ತಿಳಿಸಿದ ರಾಗಿಣಿ, ಪ್ರತಿ ದಿನ ಈ ಅಭಿಯಾನ ಹೆಚ್ಚಾಗುತ್ತಿದೆ. ಇದು ಕೇವಲ ಹುಡುಗಿಯರಿಗೆ ಮಾತ್ರವಲ್ಲ, ಹುಡುಗರಿಗೂ ಅನ್ವಯವಾಗುತ್ತದೆ. ಈ ಅಭಿಯಾನ ಆಗುತ್ತಿರುವುದು ನನಗೆ ಸಂತಸ ತಂದಿದೆ. ನಾನು ಮೀಟೂ ಪರವಾಗಿ ನಿಲ್ಲುತ್ತೇನೆ ಎಂದಿದ್ದಾರೆ.

Advertisements

Leave a Reply

%d bloggers like this: