Advertisements

ಅರ್ಜುನ್ ಸರ್ಜಾ ಏನಿದು – ಚಂದನವನದಲ್ಲಿ ಮತ್ತೊಂದು #MeToo ಘಾಟು

#Me Too ಘಾಟು ಇದೀಗ ಜೋರಾಗಿದೆ. ಮುಖವಾಡದೊಳಗಿನ ಮುಖಗಳು ಅನಾವರಣವಾಗುತ್ತಿದೆ. ಹಿರೋ ಮುಖವಾಡ ಹಾಕಿಕೊಂಡಿರುವ ವಿಲನ್ ಗಳು ಯಾರು ಅನ್ನುವುದು ಬಯಲಾಗುತ್ತಿದೆ. ಇದೀಗ ಶೃತಿ ಹರಿಹರನ್ ಸರದಿ.

ಅಂಜನೇಯನ ಪರಮಭಕ್ತನಾಗಿರುವ ಅರ್ಜುನ್ ಸರ್ಜಾ ವಿರುದ್ಧ ಶೃತಿ ಹರಿಹರನ್ ಬಾಂಬ್ ಸಿಡಿಸಿದ್ದಾರೆ. ಆದರೆ ಈ ಆರೋಪದ ಬಗ್ಗೆ ತಡವಾಗಿ ಯಾಕೆ ತುಟಿ ಬಿಚ್ಚಿದರೂ ಗೊತ್ತಿಲ್ಲ. ಕಾಸ್ಟಿಂಗ್ ಕೌಚ್ ಬಗ್ಗೆ ತಡವಾಗಿ ಮಾತನಾಡಿ ಸುದ್ದಿಯಾಗಿದ್ದರು ಶೃತಿ ಹರಿಹರನ್.

ಹಾಗಾದರೆ ಶೃತಿ ಹರಿಹರನ್ ಹೇಳಿದ್ದೇನು..?

#MeToo ಅಭಿಯಾನದಲ್ಲಿ ತನ್ನ ಕಥೆಯನ್ನು ಹಂಚಿಕೊಂಡ ಗಾಯಕಿ ಚಿನ್ಮಯಿಗೆ ಎಷ್ಟು ಧೈರ್ಯವಿದೆಯಲ್ಲ ಎಂದು ಯೋಚಿಸುತ್ತಿದ್ದೆ. ಯಾಕೆಂದರೆ ಒಂದಿಬ್ಬರು ವ್ಯಕ್ತಿಗಳ ಹೆಸರನ್ನು ಹೇಳಿದ ಕಾರಣಕ್ಕೆ ಅವಳು ಎದುರಿಸುತ್ತಿರುವ ಕಿರಿಕಿರಿಗಳು,ಪ್ರಶ್ನೆಗಳು ಬಂತು….. ಎಂದು ಮಾತು ಮುಂದುವರಿಸಿದ ಅವರು

“ ಕಳೆದ ವರ್ಷ ನಾನೊಂದು ಸಿನಿಮಾ ಮಾಡಿದೆ.ಅದರ ಹೆಸರು ವಿಸ್ಮಯ, ಆ ಸಿನಿಮಾದಲ್ಲಿ ನನ್ನ ಸಹನಟರಾಗಿ ಅರ್ಜುನ್ ಸರ್ಜಾ ಅವರು ಅಭಿನಯಿಸುತ್ತಿದ್ದರು.

ವಿಸ್ಮಯ ಸಿನಿಮಾಗೂ ಮುನ್ನ ನಾನು ಹಲವು ಸಿನಿಮಾಗಳಲ್ಲಿ ಅಭಿನಯಸಿದ್ದೇನೆ. ತುಂಬಾ ನಟರ ಜೊತೆಗೆ ಕೆಲಸ ಮಾಡಿದ್ದೇನೆ. ಇಂದಿಗೂ ಬೇರೆ ನಟರೊಂದಿಗೆ ನಟಿಸುವಾಗ ಯಾವ ತೊಂದರೆಯೂ ಆಗಿಲ್ಲ. ನಾವೆಲ್ಲ ಪರಸ್ಪರ ಗೌರವದಿಂದ ನಡೆದುಕೊಳ್ಳುತ್ತಿದ್ದೆವು.

ನಾಯಕ ನಾಯಕಿ ಪ್ರಣಯದ ದೃಶ್ಯಗಳನ್ನು ಚಿತ್ರೀಕರಿಸುವಾಗ ಬಹು ಸೂಕ್ಷ್ಮವಾದ ಗಡಿ ರೇಖೆ ಇರುತ್ತದೆ.ಆ ಸೂಕ್ಷ್ಮವಾದ ಗಡಿಯನ್ನು ದಾಟಿದರೆ ಹೆಣ್ಣಿಗೆ Uncomfortable ಆಗಲು ಶುರುವಾಗುತ್ತದೆ.

ವಿಸ್ಮಯ ಚಿತ್ರೀಕರಣ ಸಂದರ್ಭದಲ್ಲಿ ಅರ್ಜುನ್ ಸರ್ಜಾ ಗಡಿರೇಖೆಯನ್ನು ದಾಟಿದ್ದರು.

ಚಿತ್ರಕ್ಕಾಗಿ ನಾನು ಮತ್ತು ಅರ್ಜುನ್ ಸರ್ಜಾ ರಿಹರ್ಸಲ್ ನಡೆಸುತ್ತಿದ್ದೆವು. ಆದ ಅರ್ಜುನ್ ಸರ್ಜಾ..ಇನ್ನೊಂದು ಚೂರು ಹೀಗೆ ರಿಹರ್ಸಲ್ ಮಾಡಬಹುದಲ್ವಾ..ಎಂದು ನನ್ನನ್ನು ಜೋರಾಗಿ ತಬ್ಬಿಕೊಂಡರು.

ಆ ಅಪ್ಪುಗೆಯಿಂದ ನಾನು ಒಮ್ಮೆಲೆ ತಬ್ಬಿಬ್ಬಾದೆ.ಅವರ ಆ ವರ್ತನೆ ತುಂಬಾ ಅಸಹಜವಾಗಿತ್ತು. ತಕ್ಷಣ ನಾನು ನಿರ್ದೇಶಕರದ್ದಲ್ಲಿಗೆ ಹೋಗಿ ನಾನು ರಿಹರ್ಸಲ್ ಗೆ ಬರುವುದಿಲ್ಲ. ಬರೀ ಶೂಟಿಂಗ್ ಗೆ ಅಷ್ಟೇ ನನ್ನನ್ನು ಕರೆಯಿರಿ ಎಂದು ಹೇಳಿ ಬಂದು ಕ್ಯಾರವಾನ್ ಗೆ ಬಂದು ಬಿಟ್ಟೆ.

ಅಂದಿನಿಂದ ನಾನು ಕೇವಲ ಶೂಟಿಂಗ್ ಗೆ ಹೋಗಿ ನಟಿಸಿ ಬರುತ್ತಿದ್ದೆ.ನನ್ನ ಪ್ರತಿಭಟನೆಯಿಂದ ಅರ್ಜುನ್ ಸರ್ಜಾ ವಿಚಲಿತರಾದಂತೆ ಅನ್ನಿಸಲಿಲ್ಲ. ಆದಾದ ಮೇಲೆ ಅವರು ನನ್ನ ಜೊತೆ ಮಾತನಾಡುವಾಗ ಬಳಸಿದ ಭಾಷೆಯೂ ಸಭ್ಯವಾಗಿರಲಿಲ್ಲ.

ಮತ್ತೆ ಮತ್ತೆ ಡಿನ್ನರ್ ಕರೆಯುತ್ತಿದ್ದರು. ರೆಸಾರ್ಟ್ ಗೆ ಹೋಗೋಣ ಬಾ ಅನ್ನುತ್ತಿದ್ದರು. ನಾನು ಅವರ ಕಣ್ಣಿನಲ್ಲಿ ಕಣ್ಣನಿಟ್ಟು, ಇಲ್ಲ ನಾನು ಬರುವುದಿಲ್ಲ ಎಂದು ಹೇಳಿದೆ. ಅದನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ.

ನೋ ಎಂದರೆ ನೋ ಅನ್ನುವುದರ ಅರ್ಥವೇ ಅವರಿಗೆ ಆಗುತ್ತಿಲ್ಲವಲ್ಲ ಎಂದು ನನಗೆ ನಿಜವಾಗಿ ಅಚ್ಚರಿಯಾಯ್ತು”

ವಿಸ್ಮಯ ಚಿತ್ರದ ಬಿಡುಗಡೆ ಸಂದರ್ಭದಲ್ಲಿ ಶೃತಿ ಹರಿಹರನ್ ಈ ಬಾಂಬ್ ಸಿಡಿಸದಿರಲು ಕಾರಣವೇನು ಅನ್ನುವುದೇ ಯಕ್ಷ ಪ್ರಶ್ನೆ. ಒಂದು ವೇಳೆ ಅರ್ಜುನ್ ಸರ್ಜಾ ಜೊತೆಗೆ ನಟಿಸಿದ ಇತರ ನಾಯಕಿಯರು ಅನುಭವ ಬಿಚ್ಚಿಟ್ಟರೆ ಸತ್ಯ ಹೊರಬರಲಿದೆ.

https://www.facebook.com/plugins/post.php?href=https%3A%2F%2Fwww.facebook.com%2Fsruthiharihariharanofficial%2Fposts%2F2305678486344942&width=500

Advertisements

One Comment on “ಅರ್ಜುನ್ ಸರ್ಜಾ ಏನಿದು – ಚಂದನವನದಲ್ಲಿ ಮತ್ತೊಂದು #MeToo ಘಾಟು

  1. Pingback: #Me Too:ಅರ್ಜುನ್ ಗೆ ರಾಜೇಶ್ ಸರ್ಟಿಫಿಕೆಟ್ :ಶೃತಿ ಮೇಲೆ ಮಾನನಷ್ಟ ಹಾಕೋದು ಬಾಕಿ ಇದೆ – torrentspree

Leave a Reply

%d bloggers like this: