Advertisements

ಶೃತಿಯನ್ನು ಹಾಕಿಕೊಂಡು ಸಿನೆಮಾ ಮಾಡಿ ಮರ್ಯಾದೆ ಕಳೆದುಕೊಳ್ಳಬೇಡಿ

ಚಂದನವನದ ಮೂಗುತಿ ಸುಂದರಿ ಶೃತಿ ಹರಿಹರನ್, ಹಿರಿಯ ನಟ ಅರ್ಜುನ್ ಸರ್ಜಾ ವಿರುದ್ಧ ಮಾಡಿರುವ ಲೈಂಗಿಕ ಕಿರುಕುಳ ಆರೋಪದ ಬಗ್ಗೆ ಚಂದನವನದ ಹಿರಿಯ ನಿರ್ಮಾಪಕ ಸಾರಾ ಗೋವಿಂದು ಗರಂ ಆಗಿದ್ದಾರೆ.

“ ಶೃತಿ ಹರಿಹರನ್ ಗೆ ಮೆಂಟಲ್ ಅಪ್ ಸೆಟ್ ಆಗಿರುವ ಹಾಗಿದೆ. ಬಿಟ್ಟಿ ಪ್ರಚಾರಕ್ಕಾಗಿ ಆಕೆ ಹೀಗೆಲ್ಲಾ ಮಾಡುತ್ತಿದ್ದಾಳೆ. ಇದು ಮೊದಲೇನಲ್ಲ. ಈ ಹಿಂದೆಯೂ ಇದೇ ರೀತಿ ಡೈರೆಕ್ಟರ್ ಮೇಲೆ ಆರೋಪ ಮಾಡಿದ್ದಳು. ಚಿತ್ರರಂಗದಿಂದ ಪ್ರತಿಕ್ರಿಯೆ ಸಿಗುತ್ತಿಲ್ಲ ಹಾಗಾಗಿ ಹೀಗೆಲ್ಲಾ ಬಿಟ್ಟಿ ಪ್ರಚಾರ ಪಡೆಯುವುದಕ್ಕಾಗಿ ನಾಟಕ ಮಾಡುತ್ತಿದ್ದಾಳೆ” ಎಂದು ಸಾ.ರಾ.ಗೋವಿಂದು ತಿರುಗೇಟು ಕೊಟ್ಟಿದ್ದಾರೆ.

#Me Too:ಅರ್ಜುನ್ ಗೆ ರಾಜೇಶ್ ಸರ್ಟಿಫಿಕೆಟ್ :ಶೃತಿ ಮೇಲೆ ಮಾನನಷ್ಟ ಹಾಕೋದು ಬಾಕಿ ಇದೆ

ಅರ್ಜುನ್ ಸರ್ಜಾ ಅವರನ್ನು ತುಂಬಾ ದಿನದಿಂದ ನಾನು ನೋಡುತ್ತಿದ್ದೇನೆ. ಅವರು ಹಾಗೇನಾದರೂ ಮಾಡಬೇಕು ಅಂತಿದ್ರೆ ವಯಸ್ಸಿನಲ್ಲಿದ್ದಾಗಲೇ ಮಾಡಬಹುದುತ್ತು. ಈಗ ಮಾಡುವ ಅಗತ್ಯ ಇರಲಿಲ್ಲ. ಅವರ ಮಗಳನ್ನೇ ಹೀರೋಯಿನ್ ಆಗಿ ಮಾಡುತ್ತಿರುವಾಗ ಅವರಿಗೆ ಈ ರೀತಿಯ ಚಟಗಳು ಇರುವುದು ಒಪ್ಪಬಹುದಾದ ಮಾತಲ್ಲ.

ಶೃತಿ ಈ ಹಿಂದೆ ಕೂಡಾ ಕಾಸ್ಟಿಂಗ್ ಕೌಚ್ ವಿಷಯಕ್ಕೆ ನನಗೆ ಫೋನ್ ಮಾಡಿ ಸಾಫ್ಟ್ ಆಗಿ ಮಾತನಾಡಿ ಸಾಲ್ವ್ ಮಾಡ್ಕೊಡಿ ಅಂತ ನನ್ನ ಬಳಿ ರಿಕ್ವೆಸ್ಟ್ ಮಾಡಿಕೊಂಡಿದ್ಲು. ಇವಾಗ ಹೀಗೆ ಪತಿವ್ರತೆ ತರಹ ಮಾತನಾಡೋದು ಎಷ್ಟು ಸರಿ.

ಅರ್ಜುನ್ ಸರ್ಜಾ ಏನಿದು – ಚಂದನವನದಲ್ಲಿ ಮತ್ತೊಂದು #MeToo ಘಾಟು

ಅರ್ಜುನ್ ಸರ್ಜಾರಂತಹ ದೊಡ್ಡ ನಟನ ವಿರುದ್ಧ ಸುಳ್ಳು ನಾಟಕ ಆಡುತ್ತಿದ್ದಾಳೆ. ಹಾಗಾಗಿ ನಮ್ಮ ಇಂಡಸ್ಟ್ರಿಯ ಜನರಿಗೆ ನಾನು ಶೃತಿಯನ್ನು ಹಾಕಿಕೊಂಡು ಸಿನೆಮಾ ಮಾಡಿ ಮರ್ಯಾದೆ ಕಳೆದುಕೊಳ್ಳಬೇಡಿ ಎಂದು ಆಗ್ರಹಿಸುತ್ತೇನೆ ಎಂದಿದ್ದಾರೆ.

Advertisements

Leave a Reply

%d bloggers like this: