#Me Too:ಅರ್ಜುನ್ ಗೆ ರಾಜೇಶ್ ಸರ್ಟಿಫಿಕೆಟ್ :ಶೃತಿ ಮೇಲೆ ಮಾನನಷ್ಟ ಹಾಕೋದು ಬಾಕಿ ಇದೆ

ದೇಶಾದ್ಯಂತ ಬಿರುಗಾಳಿಯಾಗಿ ಅಬ್ಬರಿಸುತ್ತಿರುವ #MeToo, ಚಂದನವನದಲ್ಲಿ ಸುಂಟರಗಾಳಿಯಾಗಿದೆ. ಸಂಗೀತಾ ಭಟ್ ಸಂಜನಾ ಗಲ್ರಾಣಿಯ ಬೆನ್ನಲ್ಲೇ ನಟಿ ಶೃತಿ ಹರಿಹರನ್ ಅರ್ಜುನ್ ಸರ್ಜಾ ವಿರುದ್ಧ #MeToo ಬಾಣ ಬಿಟ್ಟಿದ್ದಾರೆ.

ಈ ನಡುವೆ ಶೃತಿ ಹರಿಹರನ್ ಆರೋಪಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಭೇಷ್ ಅಂದರೆ, ಮತ್ತೆ ಕೆಲವರು ನಕಲಿಯೊಳಗಿನ ಅಸಲಿ ಬಿಚ್ಚಿಟ್ಟಿರಿ ನೀವು ಅಂದಿದ್ದಾರೆ.

ಇನ್ನು ಕೆಲವರು ಸಾಕ್ಷಿ ಕೇಳಿದ್ದಾರೆ. ಯಾವತ್ತೋ ನಡೆದ ಘಟನೆಯನ್ನು ಈಗ ಯಾಕೆ ಹೇಳಬೇಕಿತ್ತು ಎಂದು ಪ್ರಶ್ನಿಸಿದ್ದಾರೆ.
ಈ ನಡುವೆ ಖಾಸಗಿ ವಾಹಿನಿಯೊಂದಿಗೆ ಮಾತನಾಡಿರುವ ಹಿರಿಯ ನಟ ಹಾಗೂ ಅರ್ಜುನ್ ಸರ್ಜಾ ಅವರ ಮಾವ ರಾಜೇಶ್ ಶೃತಿ ವಿರುದ್ಧ ತಿರುಗಿ ಬಿದ್ದಿದ್ದಾರೆ.

ಅರ್ಜುನ್ ಸರ್ಜಾ ಏನಿದು – ಚಂದನವನದಲ್ಲಿ ಮತ್ತೊಂದು #MeToo ಘಾಟು

“ಅರ್ಜುನ್ ನನ್ನು ಹಲವಾರು ವರ್ಷಗಳಿಂದ ನೋಡುತ್ತಿದ್ದೇನೆ. ಸೌಂದರ್ಯ ಹಾಗೂ ಇನ್ನಿತರ ಕಲಾವಿದರ ಜೊತೆ ಅಭಿನಯಿಸಿದ್ದಾರೆ. ಯಾವತ್ತೂ ಯಾರೊಬ್ಬರೂ ಆರೋಪ ಮಾಡಲಿಲ್ಲ. ಈವರೆಗೂ ಅವರ ವಿರುದ್ಧ ಒಂದೂ ದೂರು ಇಲ್ಲ. ಆದರೆ ಈಗ Me Too ರೋಗ ಶುರುವಾಗಿದೆ. 8-10 ವರ್ಷದ ಹಿಂದಿನದ್ದನ್ನು ತೆಗೆದು ರಗಳೆ ಮಾಡುವುದು ಸರಿಯೇ? ಇದು ಸಿನಿಮಾ ರಂಗಕ್ಕೆ ಕೆಟ್ಟ ಹೆಸರು. ಸಿನಿಮಾ ಹಿರೋಗಳು ಕೆಟ್ಟವರು ಅಂತ ಆಪಾದನೆ ಮಾಡುವುದು ಯಾವ ನ್ಯಾಯ. ಹಿರೋಗಳೆಲ್ಲರೂ ಕೆಟ್ಟವರೇ ಎಂದು ಪ್ರಶ್ನಿಸಿದ್ದಾರೆ.

ಇವೆರೆಲ್ಲಾ ನಿನ್ನೆ-ಮೊನ್ನೆ ಬಂದ ನಟಿಯರು. ಇವರಿಗೆಲ್ಲ ಸರಿಯಾಗಿ ಕನ್ನಡ ಮಾತನಾಡಲು ಬರುವುದಿಲ್ಲ. ಅರ್ಜುನ್ ಮೇಲೆ ಏನು ಆಪಾದನೆ ಮಾಡೋದು. 8-10 ವರ್ಷದ ಹಿಂದಿನ ಕೇಸನ್ನು ಮೆಲುಕು ಹಾಕುವ ಇವರು ಅಗ್ಲೇ ಯಾಕೆ ತುಟಿ ಬಿಚ್ಚಲಿಲ್ಲ. ಇವಳ ಮೇಲೆ ಕೇಸ್ ಹಾಕಿ ಮಾನನಷ್ಟ ಮೊಕದ್ದಮೆ ಹೂಡಲು ಬಾಕಿಯಿದೆ ಎಂದು ಕಿಡಿ ಕಾರಿದರು

Advertisements

2 Comments on “#Me Too:ಅರ್ಜುನ್ ಗೆ ರಾಜೇಶ್ ಸರ್ಟಿಫಿಕೆಟ್ :ಶೃತಿ ಮೇಲೆ ಮಾನನಷ್ಟ ಹಾಕೋದು ಬಾಕಿ ಇದೆ

  1. Pingback: ಶೃತಿಯನ್ನು ಹಾಕಿಕೊಂಡು ಸಿನೆಮಾ ಮಾಡಿ ಮರ್ಯಾದೆ ಕಳೆದುಕೊಳ್ಳಬೇಡಿ – torrentspree

  2. Pingback: ಉಚಿತ ಒಳ ಉಡುಪು ಕೊಡಿ ಉಚಿತ ಬ್ಯೂಟಿಪಾರ್ಲರ್ ಭಾಗ್ಯ ಕರುಣಿಸಿ : ಮೋದಿಗೆ ಬಿಚ್ಚಮ್ಮ ಸಾವಂತ್ ಬೇಡಿಕೆ – torrentspree

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: