Advertisements

ಪಾಸ್ ಗಾಗಿ ಕೈಯೊಡ್ಡುತ್ತಿದ್ದ ಯಶ್ ದಸರಾ ವೇದಿಕೆಯಲ್ಲಿ ಹೇಳಿದ್ದೇನು..?

ನಾಡು ದಸರಾ ಹಬ್ಬದ ಸಂಭ್ರಮದಲ್ಲಿದೆ. ಅದರಲ್ಲೂ ಮೈಸೂರಿನ ಸಂಭ್ರಮವನ್ನು ಹೇಳುವುದೇ ಬೇಡ. ಅಂಬಾರಿ ಮೇಲೆ ಸಾಗಿ ಬರುವ ನಾಡದೇವಿಯ ದರ್ಶನಕ್ಕೆ ನಾಡಿನ ಜನತೆ ಕಾಯುತ್ತಿದ್ದಾರೆ.

ಈ ನಡುವೆ ಯುವ ದಸರಾ ವೇದಿಕೆಯಲ್ಲಿ ನಟ ಯಶ್ ತಮ್ಮ ಬಾಲ್ಯದ ದಿನಗಳಿಗೆ ಜಾರಿದ್ದಾರೆ.

ಯಶ್ ಮಂಡ್ಯ ಮೈಸೂರು ಎಂದು ಓಡಾಡುತ್ತಿದ್ದ ಸಂದರ್ಭದಲ್ಲಿ ಯುವ ದಸರಾದ ಪಾಸ್ ಗಾಗಿ ಪರದಾಡುತ್ತಿದ್ದರಂತೆ. ಸಿಕ್ಕ ಸಿಕ್ಕವರ ಬಳಿ ಪಾಸ್ ಗಾಗಿ ಕೈಯೊಡ್ಡುತ್ತಿದ್ದರು. ಆದರೆ ಇಂದು ಅದೇ ಯುವ ದಸರಾ ವೇದಿಕೆಯನ್ನು ಹತ್ತಿ ಮಿಂಚಿದ್ದಾರೆ.

ಯುವ ದಸರಾದ ಕಡೆಯ ದಿನದ ಸ್ಯಾಂಡಲ್ ವುಡ್ ನೈಟ್ಸ್ ಕಾರ್ಯಕ್ರಮಕ್ಕೆ ಆಗಮಿಸಿದ್ದ ಯಶ್ ತಾನು ಹುಡುಗನಾಗಿದ್ದ ದಿನಗಳತ್ತ ಬೆಳಕು ಚೆಲ್ಲಿದರು.

“ಹುಡುಗನಾಗಿದ್ದಾಗ ಯುವ ದಸರಾದ ಪಾಸ್ ಬೇಕು ಎನ್ನುತ್ತಿದ್ದ ನಾನು, ಇಂದು ಅದೇ ವೇದಿಕೆ ಮೇಲೆ ನಿಂತಿದ್ದೇನೆ. ಇದಕ್ಕೆಲ್ಲಾ ನಿಮ್ಮ ಪ್ರೀತಿ ಪ್ರೋತ್ಸಾಹವೇ ಕಾರಣ ಎಂದು ರಾಕಿಂಗ್ ಸ್ಟಾರ್ ಯಶ್ ಮೈಸೂರಿನ ಯುವ ದಸರಾ ಕಾರ್ಯಕ್ರಮದಲ್ಲಿ ತಮ್ಮ ಹಳೆಯ ಕಾಲದ ನೆನಪುಗಳನ್ನು ಹಂಚಿಕೊಂಡಿದ್ದಾರೆ.

ಇದೆಲ್ಲಾ ಸಾಧ್ಯವಾಗಿದ್ದು ನಿಮ್ಮ ಪ್ರೀತಿ ಹಾಗೂ ಪ್ರೋತ್ಸಾಹದಿಂದ. ನಾನು ಮೈಸೂರಿಗೆ ಬಂದರೆ ನನ್ನ ಹಳೆಯ ನೆನಪುಗಳು ಕಣ್ಣ ಮುಂದೆ ಬರುತ್ತವೆ ಎಂದು ತಮ್ಮ ಅಭಿಮಾನಿಗಳನ್ನು ನೆನಪಿಸಿಕೊಂಡರು.

Advertisements

Leave a Reply

%d bloggers like this: