Advertisements

ಶಿವಣ್ಣ – ಸುದೀಪ್ ಪಾಲಿಗೆ ಪ್ರೇಮ್ ನಿಜವಾದ ವಿಲನ್

ಬಹು ನಿರೀಕ್ಷೆಯ ದಿ ವಿಲನ್ ಚಿತ್ರ ತೆರೆಗೆ ಬಂದಿದೆ. ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ನಡುವೆ ಟ್ವೀಟರ್ ನಲ್ಲಿ ಪ್ರೇಮ್ ಅವರನ್ನು ಜನ ಹೊಗಳುತ್ತಾರೆ ಅಂದುಕೊಂಡಿದ್ದು ಸುಳ್ಳಾಗಿದೆ. ಚಿತ್ರ ಪ್ರೇಮಿಗಳು ಪ್ರೇಮ್ ಮೇಲೆ ಸಿಕ್ಕಾಪಟ್ಟೆ ಗರಂ ಆಗಿದ್ದಾರೆ.

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ಅವರ ಇಮೇಜ್ ನ್ನು ಜೋಗಿ ಪ್ರೇಮ್ ಡ್ಯಾಮೇಜ್ ಮಾಡಿದ್ದಾರೆ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿಹಾಯ್ದಿದ್ದಾರೆ.

ಪ್ರೇಮ್ ಕೇವಲ ಗಿಮಿಕ್ ಮತ್ತು ಬಿಲ್ಡಪ್ ಗಳಿಂದ ಇಬ್ಬರು ಹಿರೋಗಳ ಇಮೇಜ್ ಅನ್ನು ಕೊಲೆ ಮಾಡಿದ್ದಾರೆ. ಹೇಳಿಕೊಳ್ಳುವಂಥದ್ದೂ ಚಿತ್ರದಲ್ಲಿ ಏನೂ ಇಲ್ಲ. ಸಮಯ ವ್ಯರ್ಥ ಎಂದೆಲ್ಲಾ ಕಿಡಿ ಕಾರಿದ್ದಾರೆ.

Capture

ಮತ್ತೆ ಕೆಲವರು ಕಿಚ್ಚ ಸುದೀಪ್ ಮತ್ತು ಶಿವಣ್ಣ ಎಂಟ್ರಿ ಸೂಪರ್ ಆಗಿದೆ. ಚಿತ್ರ ಈ ವರ್ಷದ ಟಾಪ್ ಸಿನಿಮಾಗಳ ಪಟ್ಟಿಗೆ ವಿಲನ್ ಸೇರುತ್ತದೆ. ಟಗರು ಚಿತ್ರದಂತೆ ಇದು ಮುನ್ನುಗ್ಗಲಿದೆ ಎಂದು ಅಭಿಮಾನಿಗಳು ಹೇಳಿದ್ದಾರೆ.

ಇನ್ನೊಂದು ಕಡೆ  ಚಿತ್ರದ ಹೆಸರಿನಲ್ಲಿ ಬೆಂಗಳೂರಿನ ಮಲ್ಟಿಫ್ಲೆಕ್ಸ್ ಗಳು ಸುಲಿಗೆ ಮಾಡುತ್ತಿವೆ ಎಂಬ ಆರೋಪ ಕೂಡಾ ಕೇಳಿಬಂದಿದೆ.

 

 

Advertisements

Leave a Reply

%d bloggers like this: