Advertisements

ಸುವರ್ಣದಲ್ಲಿ ಸುದೀಪ್ :  ಶೆಟ್ರ ಜೊತೆಗಿನ ಚರ್ಚೆಯಲ್ಲಿ ಸುದೀಪ್ ಡಲ್ ಆಗಿದ್ದು ಯಾಕೆ ಗೊತ್ತಾ..?

ಬಹು ನಿರೀಕ್ಷೆಯ ದಿ ವಿಲನ್ ಚಿತ್ರಕ್ಕೆ ಅದ್ದೂರಿ ಸ್ವಾಗತ ಸಿಕ್ಕಿದೆ. ಪತ್ರಿಕೆಗಳಲ್ಲಿ, ಟವಿಗಳಲ್ಲಿ ವಿಮರ್ಶೆ ಏನೇ ಬಂದರು, ಜನ ಮಾತ್ರ ಅದ್ಭುತವಾಗಿ ಸ್ವೀಕರಿಸಿದ್ದಾರೆ.

ಕಥೆ ಆಮೇಲೆ ಮೊದಲು ಶಿವಣ್ಣ ಹಾಗೂ ಕಿಚ್ಚನನ್ನು ನೋಡಬೇಕು ಎಂದು ಅಭಿಮಾನಿಗಳು ಚಿತ್ರಮಂದಿರದತ್ತ ಓಡಿದ್ದಾರೆ.

ರೆಸ್ಪಾನ್ ನೋಡಿದ್ರೆ ಹಾಕಿರುವ ಬಂಡವಾಳದ ಗಡಿ ದಾಟಿ ದೂರ ಹೋಗುವುದಂತು ಖಂಡಿತಾ.

ಈ ನಡುವೆ ವಿಲನ್ ಚಿತ್ರದ ಪ್ರಚಾರ ಸಲುವಾಗಿ ವಿಲನ್ ಟೀಂ ಸುವರ್ಣ ವಾಹಿನಿಯ ಸ್ಟುಡಿಯೋಗೆ ಬಂದಿತ್ತು.

ಕರ್ನಾಟಕದ ಖಡಕ್ಕ್ ಸುದ್ದಿ ವಾಚಕ ಜಯಪ್ರಕಾಶ್ ಶೆಟ್ಟಿ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು. ಆದರೆ ಅದ್ಯಾಕೋ ಸುದೀಪ್ ಎಂದಿನಂತೆ ಉತ್ಸಾಹದಿಂದ ಇರಲೇ ಇಲ್ಲ. ಪಕ್ಕದಲ್ಲಿದ್ದ ನೀರಿನ ಬಾಟಲ್ ಅನ್ನು ಪದೇ ಪದೇ ಕಣ್ಣಿಗೆ ಒತ್ತಿಕೊಳ್ಳುತ್ತಿದ್ದರು.

ಶೆಟ್ರು ಕೇಳಿದ ಪ್ರಶ್ನೆಗಳಿಗೆ ನಿರೀಕ್ಷೆ ಉತ್ತರಗಳು ಬರುತ್ತಿರಲಿಲ್ಲ. ನೋಡಿದ ವೀಕ್ಷಕರಂತು ಕಿಚ್ಚಣ್ಣ ಯಾಕೆ ಡಲ್ ಎಂದು ಗೊಣಗಿದ್ದು ಸುಳ್ಳಲ್ಲ.

2

ಆದರೆ ಯಾವಾಗ ಶೆಟ್ರು ಸುದೀಪ್ ಅವರನ್ನು ಶಿವಣ್ಣ ಡ್ಯಾನ್ಸ್ ಮಾಡಿಸಬೇಕು ಎಂದು ಬಯಸಿದರೋ, ಆಗ ಗೊತ್ತಾಗಿದ್ದು, ಸುದೀಪ್ ಕೆಲಸದ ಒತ್ತಡದಿಂದ ಬಳಲುತ್ತಿದ್ದಾರೆ, ಹೈದರಬಾದ್, ಬೆಂಗಳೂರು ಓಡಾಟದಿಂದ ಅವರು ತುಂಬಾ ಬಳಲಿದ್ದಾರೆ. ತಲೆ ನೋವಿನಿಂದ ಒದ್ದಾಡುತ್ತಿದ್ದಾರೆ. ಕಮಿಟ್ ಮೆಂಟ್ ಅನ್ನುವ ಕಾರಣದಿಂದ ಸ್ಟುಡಿಯೋಗೆ ಬಂದಿದ್ದಾರೆ ಎಂದು.

ಜೊತೆಗೆ ಅವರು ವಿಲನ್ ಬಿಡುಗಡೆ ದಿನವೇ ಮದುವೆಯ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದಾರೆ. ಪ್ರಿಯಾ ಮತ್ತು ಕುಟುಂಬ ಸದಸ್ಯರೊಂದಿಗೆ ಡಿನ್ನರ್ ಪಾರ್ಟಿಗೆ ಬೇರೆ ಹೋಗಬೇಕಾಗಿದೆ ಅನ್ನುವ ಸತ್ಯವನ್ನು ಶಿವಣ್ಣ ಈ ವೇಳೆ ಬಹಿರಂಗಪಡಿಸಿದರು.

ಏನಿವೇ ತಲೆ ಸಿಡಿಯುತ್ತಿದ್ದರೂ ಚಿತ್ರ ಸಕ್ಸಸ್ ಕಾಣಬೇಕು ಅನ್ನುವ ಕಾರಣಕ್ಕೆ ಚಿತ್ರದ ಪ್ರಮೋಷನ್ ಗೆ ಬಂದ ಕಿಚ್ಚನ ಕಮಿಟ್ಮೆಂಟ್ ಮೆಚ್ಚಲೇಬೇಕು.

ಜೊತೆಗೆ ಮದುವೆ ವಾರ್ಷಿಕೋತ್ಸವ ದಿನವೂ ಕಿಚ್ಚ ಕೆಲಸ ಮಾಡುತ್ತಿದ್ದಾರೆ ಅದು ಅವರಿಗೆ ಕೆಲಸದ ಮೇಲಿರುವ ಪ್ರೀತಿಯೇ ಅನ್ನಬೇಕು. ಇನ್ನೊಂದು ದಿನ ಕಳೆದರೆ ಬಿಗ್ ಬಾಸ್ ಕೂಡಾ ಕಿಚ್ಚನ ಹೆಗಲ ಮೇಲೆ ಕೂರಲಿದೆ.

Advertisements

Leave a Reply

%d bloggers like this: