Advertisements

ಜೆಡಿಎಸ್ ರಾಜ್ಯಾಧ್ಯಕ್ಷರಿಗೆ ದೇವೇಗೌಡರಿಂದ ಸಿಕ್ತು ಆಯುಧ ಪೂಜೆ ಗಿಫ್ಟ್ …

ಜೆಡಿಎಸ್​ ರಾಜ್ಯಾಧ್ಯಕ್ಷರಾಗಿರುವ ಹುಣಸೂರು ಶಾಸಕ ಹೆಚ್​.ವಿಶ್ವನಾಥ್​ ಅವರಿಗೆ ಪಕ್ಷ ಸಂಘಟನಾ ಕಾರ್ಯಕ್ಕಾಗಿ ಆಯುಧ ಪೂಜೆಯಂದು ದೇವೇಗೌಡರು ಭರ್ಜರಿ ಗಿಫ್ಟ್ ಕೊಟ್ಟಿದ್ದಾರೆ.

ಮುಂಬರುವ ಉಪಚುನಾವಣೆ ಮತ್ತು ಲೋಕಸಭೆ ಚುನಾವಣೆಯ ಸಿದ್ದತೆ ಸಲುವಾಗಿ ಅವರಿಗೆ ಹೊಸ ಇನ್ನೋವಾ ಕ್ರಿಸ್ಟಾ ಕಾರು ನೀಡಲಾಗಿದೆ.

ಪದ ಸಂಘಟನೆ ಸಲುವಾಗಿ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಬೇಕಾಗಿದೆ. ಹೀಗಾಗಿ  ಹೊಸ ಕಾರು ಬೇಕು ಎಂದು ರಾಷ್ಟ್ರಾಧ್ಯಕ್ಷರೂ ಆಗಿರುವ ಮಾಜಿ ಪ್ರಧಾನಿ ದೇವೇಗೌಡರಿಗೆ ಮನವಿ ಮಾಡಿದ್ದರು.

ಕಳೆದ ತಿಂಗಳು ಹಾಸನದಲ್ಲಿ ನಡೆದ ಜೆಡಿಎಸ್​ನ ಶಾಸಕಾಂಗ ಸಭೆಯಲ್ಲಿ ಕಾರು ಖರೀದಿಸುವ ಪ್ರಸ್ತಾವವನ್ನು ದೇವೇಗೌಡರು ಪಕ್ಷದ ಶಾಸಕರೆದುರು ಇಟ್ಟಿದ್ದರು. ಟೊಯೊಟಾ ಫಾರ್ಚುನರ್​ ಕಾರು ಖರೀದಿಸಲು ದೇವೇಗೌಡರು ಬಯಸಿದ್ದರು.

ಇದಕ್ಕಾಗಿ ಕೈಲಾದಷ್ಟು ಆರ್ಥಿಕ ನೆರವು ನೀಡಬೇಕಾಗಿ ಶಾಸಕರಲ್ಲಿ ಮನವಿ ಮಾಡಿದ್ದರು.

ಈ ನಡುವೆ ಫಾರ್ಚೂನರ್ ನಿರ್ವಹಣೆ ವೆಚ್ಚದಾಯಕ ಎಂದು ವಿಶ್ವನಾಥ್​ ಸಭೆಯಲ್ಲಿ ತಿಳಿಸಿದ್ದರು. ಹೀಗಾಗಿ ಅವರ ಇಷ್ಟದಂತೆ ಫಾರ್ಚುನರ್​ಗಿಂತಲೂ ಕಡಿಮೆ ಮೌಲ್ಯದ ಟೊಯೋಟಾ ಕ್ರಿಸ್ಟಾ ಕಾರನ್ನು ಆಯುಧ ಪೂಜೆಗೆ ಮುನ್ನಾ ದಿನ ​ ನೀಡಲಾಗಿದೆ.

JDS-Car

ವಿಶೇಷ ಅಂದರೆ ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ಪಕ್ಷದ ರಾಜ್ಯಾಧ್ಯಕ್ಷರಿಗೆ ಪಕ್ಷದಿಂದಲೇ ಕಾರು ಕೊಡುವ ಸಂಪ್ರದಾಯವಿದೆ. ಆದರೆ ಜೆಡಿಎಸ್ ನಲ್ಲಿ ಈ ಸಂಪ್ರದಾಯವಿರಲಿಲ್ಲ. ಈಗ ಜೆಡಿಎಸ್ ಕೂಡಾ ಈ ಸಂಪ್ರದಾಯವನ್ನು ಪ್ರಾರಂಭಿಸಿದೆ.

Advertisements

Leave a Reply

%d bloggers like this: