Advertisements

ನರ್ತಕಿ ಚಿತ್ರಮಂದಿರದಲ್ಲಿ ವಿಲನ್ ನೋಡುತ್ತಿದ್ದ ಪ್ರೇಮ್ ಅರ್ಧದಿಂದ ಎದ್ದು ಹೋಗಿದ್ಯಾಕೆ..?

ಶಿವಣ್ಣ ಮತ್ತು ಸುದೀಪ್ ಅಭಿನಯದ ಬಹುನಿರೀಕ್ಷೆಯ ದಿ ವಿಲನ್ ಚಿತ್ರ ತೆರೆ ಕಂಡಿದೆ. ನಿರೀಕ್ಷೆಯಂತೆ ಚಿತ್ರ ಪ್ರೇಮಿಗಳು ವಿಲನ್ ಯಾರೂ ಅನ್ನುವ ಕುತೂಹಲದಿಂದ ಚಿತ್ರರಂಗಕ್ಕೆ ಧಾವಿಸಿದ್ದಾರೆ.

ಈ ನಡುವೆ ವಿಲನ್ ಅನ್ನು ಜನ ಹೇಗೆ ಸ್ವೀಕರಿಸುತ್ತಾರೆ ಎಂದು ನಿರ್ದೇಶಕ ಪ್ರೇಮ್ ತುದಿಗಾಲಲ್ಲಿ ನಿಂತಿದ್ದಾರೆ. ಹಾಡುಗಳು ಈಗಾಗಲೇ ಸೂಪರ್ ಹಿಟ್ ಆಗಿದೆ. ಆದರೂ ಜನ ಏನು ಅನ್ನುತ್ತಾರ ಅನ್ನುವ ಭಯ ಅವರನ್ನು ಕಾಡುತ್ತಿದೆ.

ಹೀಗಾಗಿ ಚಿತ್ರ ಬಿಡುಗಡೆಯಾದ ಬೆನ್ನಲ್ಲೇ ಪ್ರೇಮ್ ಥಿಯೇಟರ್ ರೌಂಡ್ಸ್ ಶುರುವಿಟ್ಟುಕೊಂಡಿದ್ದಾರೆ.ಒಂದೆಡೆ ಶಿವಣ್ಣ ಮತ್ತು ಅವರ ಮನೆಯವರು ಚಿತ್ರ ನೋಡಿದ್ದಾರೆ. ಮತ್ತೊಂದು ಕಡೆ ಸುದೀಪ್ ಪತ್ನಿ ಪ್ರಿಯ ಕೂಡಾ ವಿಲನ್ ಯಾರು ಅನ್ನುವ ಕುತೂಹಲದಿಂದ ಚಿತ್ರಮಂದಿರಕ್ಕೆ ಬಂದಿದ್ದಾರೆ.

ಆದರೆ ನರ್ತಕಿ ಚಿತ್ರಮಂದಿರದಲ್ಲಿ ಅಭಿಮಾನಿಗಳೊಂದಿಗೆ ಸಿನಿಮಾ ನೋಡುತ್ತಿದ್ದ ನಿರ್ದೇಶಕ ಪ್ರೇಮ್ ಅರ್ಧದಿಂದ ಎದ್ದು ಹೋಗಿದ್ದಾರೆ. ತಾನೇ ನಿರ್ದೇಶನ ಮಾಡಿದ ಚಿತ್ರವನ್ನು ಅರ್ಧ ನೋಡುವುದು ಅಂದರೆ ಅರ್ಥವೇನು.

ಆದರೆ ವಿಷಯವೇ ಬೇರೆ. ನರ್ತಕಿ ಚಿತ್ರಮಂದಿರದಲ್ಲಿ ಆಡಿಯೋ ಕೈ ಕೊಟ್ಟಿದೆ. ಪ್ರೇಮ್ ನಿರೀಕ್ಷೆಯಂತೆ ಏಫೆಕ್ಟ್ ಅಲ್ಲಿ ಇರಲೇ ಇಲ್ಲ. ಇದರಿಂದ ಕಿರಿಕಿರಿಯಾದ ಪ್ರೇಮ್ ಚಿತ್ರಮಂದಿರ ಸೌಂಡ್ ಎಂಜಿನಿಯರ್ ನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ವರ್ಷಪೂರ್ತಿ ಕಷ್ಟ ಪಟ್ಟು ಸಿನಿಮಾ ಮಾಡುತ್ತೇವೆ. ವಿಶ್ವದ ಟಾಪ್ ಆಡಿಯೋ ಎಂಜಿನಿಯರ್ ಗಳನ್ನು ಬಳಸಿಕೊಂಡು ಚಿತ್ರ ನಿರ್ಮಿಸಿದ್ದೇವೆ. ಆ ಎಫೆಕ್ಟ್ ಜನರಿಗೆ ತಲುಪಿಲ್ಲ ಅಂದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.

ಒಂದು ಹಂತದಲ್ಲಿ ಚಿತ್ರ ಪ್ರದರ್ಶನ ನಿಲ್ಲಿಸುವಷ್ಟು ಮಟ್ಟಿಗೆ ಕೋಪ ಮಾಡಿಕೊಂಡಿದ್ದರು. ಆದರೆ ಹಾಗಾದರೆ ಶಿವಣ್ಣ ಮತ್ತು ಸುದೀಪ್ ಅಭಿಮಾನಿಗಳು ಸಿಟ್ಟಾಗುತ್ತಾರೆ ಎಂದು ನರ್ತಕಿ ಚಿತ್ರಮಂದಿರದಿಂದ ಹೊರಗೆ ಬಂದಿದ್ದಾರೆ.

ಹೊರಗೆ ಬಂದು ಮಾಧ್ಯಮಗಳ ಜೊತೆಗೆ ಮಾತನಾಡಿದ ಪ್ರೇಮ್ ನರ್ತಕಿ ಚಿತ್ರಮಂದಿರ ಮಾಲೀಕರ ವಿರುದ್ಧ  ಕೆಂಡ ಕಾರಿದ್ದಾರೆ.

Advertisements

Leave a Reply

%d bloggers like this: