Advertisements

ಹಲವು ಪ್ರಶ್ನೆ ಹುಟ್ಟುಹಾಕಿದ ದರ್ಶನ್ ಪತ್ನಿ ವಿಜಯಲಕ್ಷ್ಮಿ ಟ್ವೀಟ್

ಒಂದೆಡೆ #MeToo ಅಭಿಯಾನ ಮತ್ತೊಂದು ಕಡೆ ಶಬರಿಮಲೆಗೆ ಮಹಿಳೆಯ ಪ್ರವೇಶ ವಿವಾದ. ಈ ನಡುವೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮಾಡಿದ ಟ್ವೀಟ್ ಸಾವಿರ ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

ಮಹಿಳೆಯ ಮೇಲೆ ಕಿರುಕುಳ, ದೌರ್ಜನ್ಯ ನಡೆಯುತ್ತಿರುವ ಇಂತಹ ಸಮಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪತ್ನಿ ಟ್ವೀಟ್ ಮಾಡಿದ್ದಾರೆ. ದಸರಾ ಹಬ್ಬದ ಪ್ರಯುಕ್ತ ಶುಭಕೋರಿರುವ ವಿಜಯಲಕ್ಷ್ಮಿ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.

”ಪ್ರತಿಯೊಬ್ಬ ಮಹಿಳೆಯೊಳಗೆ ‘ದುರ್ಗ’ ಇರ್ತಾಳೆ. ದೇಗುಲಕ್ಕೆ ಹೋಗಿ ದೇವಿಯ ಪೂಜಿಸುವ ಮೊದಲು ಮಹಿಳೆಯನ್ನ ಗೌರವಿಸುವುದನ್ನ ಕಲಿಯಿರಿ” ಎಂದು ಟ್ವೀಟ್ ಮಾಡಿದ್ದಾರೆ.

2018-10-17_23-46-37

ಹಬ್ಬದ ಪ್ರಯುಕ್ತ ಶುಭಕೋರಿದ್ದರೂ, ಸದ್ಯದ ಬೆಳವಣಿಗಳಿಗೆ ಸೂಕ್ತವಾಗಿದೆ ಎನ್ನುವುದು ನೆಟ್ಟಿಗರ ಅಭಿಪ್ರಾಯ. ಇನ್ನು ದರ್ಶನ್ ಪತ್ನಿಯ ಈ ಟ್ವೀಟ್ ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದು, ಇದು ನಿಜ ಎನ್ನುತ್ತಿದ್ದಾರೆ.

Advertisements

One Comment on “ಹಲವು ಪ್ರಶ್ನೆ ಹುಟ್ಟುಹಾಕಿದ ದರ್ಶನ್ ಪತ್ನಿ ವಿಜಯಲಕ್ಷ್ಮಿ ಟ್ವೀಟ್

  1. Pingback: ನಾಗಮಂಡಲ ಖ್ಯಾತಿಯ ವಿಜಯಲಕ್ಷ್ಮಿ ಸಹಾಯಕ್ಕೆ ಕಿಚ್ಚ ಸುದೀಪ್ – torrentspree

Leave a Reply

%d bloggers like this: