ಕನ್ನಡದ ಕೋಟ್ಯಧಿಪತಿಯನ್ನು ಸುವರ್ಣದಿಂದ ಕಿತ್ತುಕೊಂಡ ಕಲರ್ಸ್ ವಾಹಿನಿ

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕನ್ನಡ ಕೋಟ್ಯಧಿಪತಿ ಕಾರ್ಯಕ್ರಮ ಇನ್ಮುಂದೆ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವುದು ಅನುಮಾನ ಅನ್ನುವ ಸುದ್ದಿ ಬಂದಿದೆ.

ಈ ಹಿಂದೆ ಕನ್ನಡ ಕೋಟ್ಯಧಿಪತಿಯ ಸೀಸನ್ 1, ಸೀಸನ್ 2 ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಿತ್ತು. ಆಗ ಅದನ್ನು ಪುನೀತ್ ರಾಜ್ ಕುಮಾರ್ ನಿರೂಪಿಸಿದ್ದರು.

3ನೇ ಸೀಸನ್ ಕೂಡಾ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಯ್ತು, ಅದನ್ನು ರಮೇಶ್ ಅರವಿಂದ್ ನಡೆಸಿಕೊಟ್ಟಿದ್ದರು.

ಇದೀಗ ಕನ್ನಡದ ಕೋಟ್ಯಧಿಪತಿ ಸೀಸನ್ 4 ಪ್ರಸಾರದ ಹಕ್ಕನ್ನು ಕಲರ್ಸ್ ಕನ್ನಡ ಪಡೆದುಕೊಂಡಿದೆ ಎನ್ನಲಾಗಿದೆ. ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮದ ಹಕ್ಕು ಬಿಗ್ ಸಿನರ್ಜಿ ಸಂಸ್ಥೆಯ ಬಳಿಯಲ್ಲಿದೆ. ಹೀಗಾಗಿ ದೊಡ್ಡ ಮೊತ್ತಕ್ಕೆ ಬಿಡ್ ಮಾಡಿರುವ ಕಲರ್ಸ್ ವಾಹಿನಿ, ಕನ್ನಡದ ಕೋಟ್ಯಧಿಪತಿ ಸೀಸನ್ 4 ಪ್ರಸಾರದ ಹಕ್ಕನ್ನು ಸ್ಟಾರ್ ಸುವರ್ಣದಿಂದ ಪಡೆದುಕೊಂಡಿದೆ.

ಇನ್ನು ಈ ರಿಯಾಲಿಟಿ ಶೋ ನಡೆಸಿಕೊಡಲು ಕಲರ್ಸ್ ಕನ್ನಡ ವಾಹಿನಿಯು ಪುನೀತ್ ರಾಜ್‌ಕುಮಾರ್ ಜೊತೆಗೆ ಈಗಾಗಲೇ ಒಪ್ಪಂದ ಮಾಡಿಕೊಂಡಿದೆ. ಕಳೆದ ವರ್ಷ ಪುನೀತ್ ಕಲರ್ಸ್ ವಾಹಿನಿಗೆ ‘ಫ್ಯಾಮಿಲಿ ಪವರ್’ ಕಾರ್ಯಕ್ರಮ ನಡೆಸಿಕೊಟ್ಟಿದ್ದರು.

ಬಿಗ್ ಬಾಸ್ ರಿಯಾಲಿಟಿ ಶೋ ಕೂಡಾ ಹೀಗೆ ಆಗಿತ್ತು. ಸೀಸನ್ 1 ಹಕ್ಕು ಪಡೆದುಕೊಂಡಿದ್ದು ಕಲರ್ಸ್, ಸೀಸನ್ ಎರಡನ್ನು ಸ್ಟಾರ್ ಸುವರ್ಣ ಪಡೆಯಿತು. ಆದರೆ ನಂತರದ ಎಲ್ಲಾ ಸೀಸನ್ ಗಳು ಕಲರ್ಸ್ ವಾಹಿನಿ ಪಾಲಾಗಿದೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: