Advertisements

ನಾಯಿ ಎಂದು ತಂದವನಿಗೆ ಆಮೇಲೆ ಗೊತ್ತಾಗಿದು ಅದು ಇಲಿಯೆಂದು….!

ಈ ಚೈನಾ ಮಂದಿ ಅಸಲಿಯ ಕಲೆಗೆ ಹೊಡೆದಂತೆ ನಕಲಿಯನ್ನು ಸೃಷ್ಟಿಸುವುದರಲ್ಲಿ ಎತ್ತಿದ ಕೈ ಹೊಂದಿದ್ದಾರೆ. ಅದ್ಯಾವುದೇ ವಸ್ತು ವಿಶ್ವದ ಮಾರುಕಟ್ಟೆಗೆ ಬರಲಿ ಸ್ಪರ್ಧಿ ಅನ್ನುವಂತೆ ಚೀನಾ ಪ್ರಾಡಕ್ಟ್ ಪಕ್ಕದಲ್ಲೇ ಮರು ದಿನ ಬಿದ್ದಿರುತ್ತದೆ.

ಇನ್ನು ಕೆಲ ತಿಂಗಳ ಹಿಂದೆ ಅದ್ಯಾವುದೋ ಪ್ರಾಣಿಗೆ ಮತ್ತೊಂದು ಪ್ರಾಣಿಯ ಬಣ್ಣ ಬಳಿದು ವಂಚಿಸಿದ ಬುದ್ದಿವಂತರು ಇದಿದ್ದು ಚೀನಾದಲ್ಲೇ..ಪ್ಲಾಸ್ಟಿಕ್ ಪೆಂಗ್ವಿನ್ ಗಳನ್ನು ಮೃಗಾಲಯದಲ್ಲಿಟ್ಟು ಕಾಸು ಮಾಡಿದವರು ಇದೇ ಚೀನಾದ ಬುದ್ದಿವಂತರು.
ಇದೀಗ ಇದೇ ಚೀನಾ ದೇಶದ ಪ್ರಜೆಯೊಬ್ಬ ಭರ್ಜರಿಯಾಗಿ ಮೋಸ ಹೋಗಿರುವ ಸುದ್ದಿ ಬಂದಿದೆ.

ಚೀನಾದ ವ್ಯಕ್ತಿಯೊಬ್ಬ ಅಪರೂಪದ ನಾಯಿಯೊಂದನ್ನು ಮನೆಗೆ ತೆಗದುಕೊಂಡು ಬಂದಿದ್ದ.ಆದರೆ ದಿನ ಕಳೆದಂತೆ ತಂದ ನಾಯಿಯಲ್ಲಿ ಬೆಳವಣಿಗೆ ಕಾಣಿಸಿಕೊಳ್ಳಲಿಲ್ಲ. ಕೂದಲು ಬೆಳೆಯುವ ಲಕ್ಷಣವೂ ಗೋಚರಿಸಲಿಲ್ಲ. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಇದ್ಯಾವ ಪ್ರಾಣಿ ಎಂದು ಪ್ರಶ್ನಿಸಿದ್ದಾರೆ.

ಬಂದ ಉತ್ತರ ನೋಡಿ ಚೀನಾ ವ್ಯಕ್ತಿಯ ಹೃದಯ ಬಡಿತ ನಿಲ್ಲುವುದೊಂದು ಬಾಕಿ ಇತ್ತು. ಯಾಕೆಂದರೆ ಅದು ನಾಯಿಯಲ್ಲ ಬದಲಾಗಿ ಇಲಿಯಾಗಿತ್ತು.

ಚೀನಾದ ದಕ್ಷಿಣ ಭಾಗದಲ್ಲಿ ಕಾಣಿಸಿಕೊಳ್ಳುವ ಈ ಇಲಿ, ಉಳಿದ ಇಲಿಗಳಿಂದ ಭಿನ್ನವಾಗಿ ಕಾಣಿಸಿಕೊಳ್ಳುತ್ತದೆ. ಬಿದಿರನ್ನು ತಿಂದು ಬದುಕುವ ಕಾರಣದಿಂದ ಇದನ್ನು ಬ್ಯಾಂಬೋ Rat ಎಂದು ಕರೆಯುತ್ತಾರೆ ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.

ಇನ್ನು ಈ ಕುರಿತಂತೆ ಬಕ್ರ ಆದ ವ್ಯಕ್ತಿಯೇ ತನ್ನ ಬ್ಲಾಗ್ ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದು, “ ಅದು ಸಪ್ಟೆಂಬರ್ ತಿಂಗಳು, ತಾನು ಗೆಳೆಯನ ಮನೆಗೆ ಹೋಗಿದ್ದೆ. ಅದು ಪರ್ವತಗಳಿಂದ ಕೂಡಿದ ಹಳ್ಳಿಯಾಗಿತ್ತು. ಅದೇ ವೇಳೆ ಗೆಳೆಯನ ಮನೆಯ ಬಾಗಿಲ ಸಮೀಪ ಪುಟಾಣಿ ನಾಯಿ ಮರಿಯೊಂದನ್ನು ನೋಡಿದೆ. ಅಷ್ಟು ಹೊತ್ತಿಗೆ ಕತ್ತಲಾಗಿದ್ದ ಕಾರಣ ನನ್ನ ಗೆಳೆಯ ನಾಯಿಯನ್ನು ಸರಿಯಾಗಿ ಗಮನಿಸಲಿಲ್ಲ.

ಆದರೆ ಕೆಲ ದಿನಗಳ ಬಳಿಕ ನೋಡಿದರೆ ಏನೋ ಎಡವಟ್ಟಾಗಿದೆ ಅನ್ನುವ ಸಂಶಯ ಬಂದಿದೆ. ಕೂದಲು ಬೆಳೆಯಲಿಲ್ಲ, ನಾಯಿಯಂತೆ ಓಡಾಡಲಿಲ್ಲ, ಹೀಗಾಗಿ ನೆಟ್ಟಿಗರಲ್ಲಿ ಪ್ರಶ್ನಿಸಿದ್ದೇನೆ, ಉತ್ತರ ಸಿಕ್ಕಿದೆ ಅಂದಿದ್ದಾರೆ.

Advertisements

Leave a Reply

%d bloggers like this: