ಮಧ್ಯರಾತ್ರಿ ಕಾರ್ಯಾಚರಣೆ : ಮಧು ಕೈಗೆ ಭಿ ಪಾರಂ ಸಿಕ್ಕಾಗ ಮುಂಜಾನೆ 4 ಗಂಟೆ

ಕಾಂಗ್ರೆಸ್ ಶಸ್ತ್ರ ತ್ಯಾಗ ಮಾಡಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರ ಉಪಚುನಾವಣೆಯಲ್ಲಿ ಜೆಡಿಎಸ್ ಅದೃಷ್ಟ ಪರೀಕ್ಷೆಗೆ ಮುಂದಾಗಿದೆ.

ಯಡಿಯೂರಪ್ಪ ಪುತ್ರನನ್ನು ಸೋಲಿಸಿದರೆ, ಯಡಿಯೂರಪ್ಪರನ್ನು ರಾಜಕೀಯ ಅಖಾಡದಲ್ಲಿ ಮಣ್ಣು ಮುಕ್ಕಿಸಿದಂತಾಗುತ್ತದೆ. ಅದರಿಂದ ಆಗುವ ಲಾಭಗಳನ್ನು ಊಹಿಸಲು ಸಾಧ್ಯವಿಲ್ಲ ಎಂದು ಅರಿತಿರುವ ದೊಡ್ಡ ಗೌಡರು ದೊಡ್ಡ ದಾಳವನ್ನೇ ಉರುಳಿಸಿದ್ದಾರೆ.

ಹಾಗಂತ ಇಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸುವುದು ದೇವೇಗೌಡರಿಗೆ ಸುಲಭವಾಗಿತ್ತು ಅಂದುಕೊಂಡರೆ ಸುಳ್ಳು. ಕಾಂಗ್ರೆಸ್ ಇಲ್ಲಿ ಅಭ್ಯರ್ಥಿಗಾಗಿ ಹೇಗೆ ಹುಡುಕಾಟ ನಡೆಸಿತ್ತೋ ಅದೇ ರೀತಿ ಜೆಡಿಎಸ್ ಕೂಡಾ ಸೂಕ್ತ ಅಭ್ಯರ್ಥಿಗಾಗಿ ಹುಡುಕಾಟ ನಡೆಸಿತ್ತು.

ಕೊನೆಗೆ ಸಿಕ್ಕಿದ್ದು ಮಧು ಬಂಗಾರಪ್ಪ.ಆದರೆ ಅಷ್ಟು ಹೊತ್ತಿಗೆ, ಕಳೆದ ಸೋಲಿನ ನೋವಿನಿಂದ ಹೊರ ಬರಲಾಗದೇ ಒದ್ದಾಡುತ್ತಿರುವ ಮಧು ಬಂಗಾರಪ್ಪ ಚುನಾವಣೆಯ ಉಸಾಬರಿಯೇ ಬೇಡವೆಂದು ವಿದೇಶಕ್ಕೆ ತೆರಳಿದ್ದರು.

ಮಧು ಬಂಗಾರಪ್ಪ ಅವರನ್ನು ಸಂಪರ್ಕಿಸಲು ಕಳೆದ ಮೂರ್ನಾಲ್ಕು ದಿನಗಳಿಂದ ಜೆಡಿಎಸ್ ನಾಯಕರು ಪ್ರಯತ್ನಿಸಿದ್ದರು. ಕೊನೆಗೆ ಸಿಎಂ ಕುಮಾರಸ್ವಾಮಿ ಕರೆ ಮಾಡಿ ಮನವೊಲಿಸಿದ ಬಳಿಕ ಭಾನುವಾರ ತಡರಾತ್ರಿ ಮಧು ವಿದೇಶ ಪ್ರವಾಸದಿಂದ ಬೆಂಗಳೂರಿಗೆ ಮರಳಿದ್ದಾರೆ.

ಇತ್ತ ಮಂಗಳೂರು ಪ್ರವಾಸದಿಂದ ಮರಳಿದ ಸಿಎಂ ಕುಮಾರಸ್ವಾಮಿ, ಮಧು ಬಂಗಾರಪ್ಪ ಅವರಿಗಾಗಿ ನಿದ್ದೆ ಬಿಟ್ಟು ಕಾದು ಕುಳಿತಿದ್ದರು.

ಮಧು ಅವರನ್ನು ವಿಮಾನ ನಿಲ್ದಾಣದಿಂದ ನೇರವಾಗಿ ತಮ್ಮ ಮನೆಗೆ ಕರೆಸಿಕೊಂಡ ಸಿಎಂ, ಮಧು ಬಂಗಾರಪ್ಪ ಅವರ ಆತ್ಮೀಯ ಸಂಬಂಧಿಗಳ ಸಮ್ಮುಖದಲ್ಲಿ ಮನವೊಲಿಸಿದ್ದಾರೆ. ಉಪಚುನಾವಣೆಯಲ್ಲಿ ಸ್ಪರ್ಧಿಸಿ ರಾಜಕೀಯ ಭವಿಷ್ಯ ಕಂಡುಕೊಂಡ ಚಲುವರಾಯಸ್ವಾಮಿ, ಸಿ.ಎಸ್‌.ಪುಟ್ಟರಾಜು ಹಾಗೂ ದೇವೇಗೌಡರ ಉದಾಹರಣೆಗಳನ್ನೂ ನೀಡಲಾಗಿದೆ.

ಕಾಂಗ್ರೆಸ್‌ ನಾಯಕರೂ ಸಾಥ್‌ ನೀಡುತ್ತಿರುವುದರಿಂದ ಗೆಲವು ನಿಮ್ಮದೇ, ಯಡಿಯೂರಪ್ಪ ಅವರನ್ನು ಸೋಲಿಸಿದ ಹಿರಿಮೆ ನಿಮ್ಮ ಪಾಲಿಗೆ ಬರುತ್ತದೆ ಎಂದು ವಿಶ್ವಾಸ ತುಂಬಲಾಗಿದೆ.

ನಂತರ ತಡರಾತ್ರಿ 2.30ಕ್ಕೆ ಪದ್ಮನಾಭನಗರದಲ್ಲಿರುವ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರ ನಿವಾಸಕ್ಕೆ ಮಧು ಬಂಗಾರಪ್ಪ ಅವರನ್ನು ಖುದ್ದು ಸಿಎಂ ಕುಮಾರಸ್ವಾಮಿ ಕರೆದೊಯ್ದರು. ಅಲ್ಲಿ ಮತ್ತಷ್ಟು ಮಾತುಕತೆ ಬಳಿಕ, ದೇವೇಗೌಡರು ಮಧು ಅವರಿಗೆ ‘ಬಿ’ ಫಾರಂ ನೀಡುವಷ್ಟು ಹೊತ್ತಿಗೆ ಮುಂಜಾನೆ 4 ಗಂಟೆ ಕಳೆದಿತ್ತು.

ಮಧು ಬಂಗಾರಪ್ಪ ಬಿ ಫಾರಂ ಪಡೆದು ಸದಾಶಿವನಗರದ ತಮ್ಮ ಮನೆಯ ಹೊಸ್ತಿಲು ದಾಟುವಷ್ಟು ಹೊತ್ತಿಗೆ ಸಿಲಿಕಾನ್ ಸಿಟಿಯಲ್ಲಿ ಸೂರ್ಯ ಇಣುಕಿದ್ದ.

Advertisements

One Comment on “ಮಧ್ಯರಾತ್ರಿ ಕಾರ್ಯಾಚರಣೆ : ಮಧು ಕೈಗೆ ಭಿ ಪಾರಂ ಸಿಕ್ಕಾಗ ಮುಂಜಾನೆ 4 ಗಂಟೆ

  1. Pingback: ಸಂಸತ್ತಿಗೆ ಹೋಗಲು ನಿಖಿಲ್ – ಪ್ರಜ್ವಲ್ ದೇವೇಗೌಡರಿಗೆ ಊರುಗೋಲು….! – torrentspree

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: