Advertisements

ಬೆಂಗಳೂರಿನಲ್ಲಿ ಇನ್ಮುಂದೆ ಸಿಂಗಂ ಗರ್ಜನೆ – ಸಿಲಿಕಾನ್ ಸಿಟಿಗೆ ಅಣ್ಣಾ ಮಲೈ ಎಂಟ್ರಿ

ಸಿಎಂ ಕುಮಾರಸ್ವಾಮಿ ಮೇಲೆ ಅದ್ಯಾವ ಆರೋಪಗಳಿದ್ದರೂ, ಕೆಲವೊಂದು ಕೆಲಸದ ಕಾರಣಕ್ಕೆ ಅವರನ್ನು ಮೆಚ್ಚಲೇಬೇಕು.

ಜನತಾದರ್ಶನ ಅನ್ನುವ ಅದ್ಭುತ ಕಾರ್ಯಕ್ರಮ ನೋಡಿದರೆ, ಯಡಿಯೂರಪ್ಪ ಸಿಎಂ ಆಗಿರುವುದಕ್ಕಿಂತ ಕುಮಾರಸ್ವಾಮಿ ಸಿಎಂ ಆಗಿರುವುದೇ ಬೆಟರ್.

ಇನ್ನು ರೌಡಿಗಳ ಅಟ್ಟಹಾಸ ಹುಟ್ಟಡಗಿಸುವ ವಿಚಾರದಲ್ಲೂ ಕುಮಾರಸ್ವಾಮಿಯೇ ಬೆಟರ್ ಸಿಎಂ. ಈಗಾಗಲೇ ಅಲೋಕ್ ಕುಮಾರ್ ಮತ್ತು ಗಿರೀಶ್ ಅವರಂತಹ ಖಡಕ್ ಪೊಲೀಸ್ ಅಧಿಕಾರಿಗಳನ್ನು ಸಿಸಿಬಿಗೆ ಹಾಕಿ, ಬಡವರ ರಕ್ತ ಹೀರುತ್ತಿದ್ದ ದಂಧೆಕೋರರಿಗೆ ಬಿಸಿ ಮುಟ್ಟಿಸಿದ್ದಾರೆ.

ಖಾಕಿ ನೆರಳಿನಲ್ಲೇ ನಡೆಯುತ್ತಿದ್ದ ರೌಡಿಗಳ ಅಟ್ಟಹಾಸಕ್ಕೆ ಬ್ರೇಕ್ ಬಿದ್ದಿದೆ. ಪೊಲೀಸರಿಗೆ ಮನವಿ ಮಾಡಿದ್ರೆ ಸ್ಪಂದಿಸುತ್ತಾರೆ ಅನ್ನುವ ವಿಶ್ವಾಸ ಬಂದಿದೆ. ಉದಯ್ ಗೌಡ, ಚಂದನವನದ ಫೈನಾನ್ಶಿಯರ್ ಕಪಾಲಿ ಮೋಹನ್ ಸೇರಿದಂತೆ ಅನೇಕರ ಹೆಡೆ ಮುರಿ ಕಟ್ಟುವ ಕೆಲಸ ನಡೆದಿದೆ.

ಈ ನಡುವೆ ಭೂ ಮಾಫಿಯಾ ಮಟ್ಟ ಹಾಕಲು ಬೆಂಗಳೂರು ದಕ್ಷಿಣ ಡಿಸಿಪಿಯಾಗಿ ಅಣ್ಣಾ ಮಲೈ ಅವರನ್ನು ನೇಮಿಸಲಾಗಿದೆ. ಚಿಕ್ಕಮಗಳೂರಿನಿಂದ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಚಿಕ್ಕಮಗಳೂರು ಎಸ್ಪಿಯಾಗಿ ಹರೀಶ್ ಪಾಂಡೆ ಅವರನ್ನು ವರ್ಗಾಯಿಸಿಲಾಗಿದೆ.

ಇನ್ನುಳಿದಂತೆ ಬೆಂಗಳೂರು ಪೂರ್ವ ವಿಭಾಗದ ಡಿಸಿಪಿಯಾಗಿ ರಾಹುಲ್ ಕುಮಾರ್, ಬೆಂಗಳೂರು ವಿಭಾಗದ ಹೆಚ್ಚುವರಿ ಸಂಚಾರ ಆಯುಕ್ತರಾಗಿ ಹರಿಶೇಖರನ್, ಕೆಎಸ್‍ಆರ್‍ಪಿ 1ನೇ ಬೆಟಾಲಿಯನ್ ಕಮಾಂಡೆಂಟ್‍ಗೆ ಅಜಯ್ ಹಿಲೋರಿ ಅವರನ್ನು ವರ್ಗಾವಣೆ ಮಾಡಲಾಗಿದೆ.

ಒಂದು ಕಡೆ ರವಿ ಡಿ ಚೆನ್ನಣ್ಣನವರ್ ಬೆಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆಗಾಗಿ ಶ್ರಮಿಸುತ್ತಿದ್ದಾರೆ, ಮತ್ತೊಂದು ಕಡೆ ಸಿಸಿಬಿ ರೌಡಿಗಳ ಹೆಡೆ ಮುರಿ ಕಟ್ಟುತ್ತಿದೆ. ಇನ್ನೊಂದು ಕಡೆ ಅಣ್ಣಾ ಮಲೈ ಆಗಮನ…ಮೀಸೆ ತಿರುವುತ್ತಿದ್ದ ರೌಡಿಗಳು, ಖಾಕಿ ಖಾದಿ ನೆರಳಿನಲ್ಲಿ ದರ್ಬಾರು ಮಾಡುತ್ತಿದ್ದವರು ರಾಜ್ಯ ಬಿಡುವುದೇ ಬೆಟರ್.

Advertisements

One Comment on “ಬೆಂಗಳೂರಿನಲ್ಲಿ ಇನ್ಮುಂದೆ ಸಿಂಗಂ ಗರ್ಜನೆ – ಸಿಲಿಕಾನ್ ಸಿಟಿಗೆ ಅಣ್ಣಾ ಮಲೈ ಎಂಟ್ರಿ

Leave a Reply

%d bloggers like this: