Advertisements

ರಿಷಭ್ ಶೆಟ್ಟಿಯ ಬೆನ್ನಲ್ಲೇ ಸರ್ಕಾರಿ ಶಾಲೆ ದತ್ತು ಪಡೆಯಲು ಮುಂದಾದ ಪ್ರಣೀತಾ ಸುಭಾಷ್

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು, ಕೊಡುಗೆ ರಾಮಣ್ಣ ರೈ ಚಿತ್ರ ನಿರ್ಮಿಸಿ, ಗೆಲುವಿನ ನಗೆ ಬೀರಿರುವ ರಿಷಭ್ ಶೆಟ್ಟಿ, ಚಿತ್ರ ಚಿತ್ರೀಕರಣಗೊಂಡ ಶಾಲೆಯನ್ನೇ ದತ್ತು ಪಡೆಯಲು ನಿರ್ಧರಿಸಿದ್ದಾರೆ.

ಇದೇ ತಿಂಗಳ 18 ರಂದು ಇದರ ಎಲ್ಲಾ ಕಾರ್ಯಗಳಿಗೆ ಅಂತಿಮ ಸ್ಪರ್ಶ ಸಿಗಲಿದೆ. ಈ ನಡುವೆ ಕನ್ನಡ ನಟಿ ಪ್ರಣೀತಾ ಸುಬಾಷ್ ಸರ್ಕಾರಿ ಶಾಲೆಯೊಂದನ್ನು ದತ್ತು ಪಡೆದಿದ್ದಾರೆ.

ಹಾಸನ ಜಿಲ್ಲೆಯಲ್ಲಿನ ಸರ್ಕಾರಿ ಶಾಲೆಯನ್ನು ದತ್ತು ಪಡೆದಿರುವ ಪ್ರಣೀತಾ ಅದರ ಮೂಲಸೌಕರ್ಯ ಅಭಿವೃದ್ದಿಗಾಗಿ ವೈಯುಕ್ತಿಕವಾಗಿ ಐದು ಲಕ್ಷ ರು. ನೀಡಿದ್ದಾರೆ.

ಶೂಟಿಂಗ್ ಗೆ ಜಾಗ ಕೊಟ್ಟ ಶಾಲೆಯನ್ನೇ ದತ್ತು ಪಡೆದ ರಿಷಬ್ ಶೆಟ್ಟಿ

ಇತ್ತೀಚೆಗೆ ಸರ್ಕಾರಿ ಶಾಲೆಯೊಂದಕ್ಕೆ ಭೇಟಿ ನೀಡಿದ್ದ ಸಮಯದಲ್ಲಿ ಅಲ್ಲಿನ ಅವ್ಯವಸ್ಥೆಗಳನ್ನು ನೋಡಿ ಬಹಳ ನೋವಾಗಿತ್ತು. ಹೀಗಾಗಿ ಶಾಲೆಯೊಂದನ್ನು ದತ್ತು ಸ್ವೀಕರಿಸುವ ನಿರ್ಧಾರಕ್ಕೆ ಬಂದಿದ್ದಾಗಿ ನಟಿ ಹೇಳಿದ್ದಾರೆ, ಅಲ್ಲದೆ ನಟಿ ಈ ಹಿಂದೆ “ಟೀಚ್ ಫಾರ್ ಚೇಂಜ್” ಆಂದೋಲನದಲ್ಲಿ ಭಾಗವಹಿಸಿದ್ದು ಆವೇಳೆ ಅನೇಕ ಸರ್ಕಾರಿ ಶಾಲೆಗಳಿಗೆ ಭೇಟಿ ಕೊಟ್ಟಿದ್ದರು.ಈಗ ಸರ್ಕಾರಿ ಶಾಲೆ ಉಳಿಸಿ ಆದೋಲನ ಸಮಿತಿಯ ಕೆಲಸಕ್ಕೆ ನಟಿ ಕೈಜೋಡಿಸಿ ಇತರರಿಗೆ ಮಾದರಿಯಾಗಿದ್ದಾರೆ.

21032833_874826192671698_3925038209915971270_n

ಸರ್ಕಾರಿ ಶಾಲೆ ಉಳಿಸಿ ಆಂದೋಲನ ಸಮಿತಿ ಅಧ್ಯಕ್ಷ ಅನಿಲ್ ಶೆಟ್ಟಿ ಮಾತನಾಡಿ ಮೂರು ತಿಂಗಳಿನಿಂದ ಆಂದೋಲನ ಪ್ರಾರಂಭವಾಗಿದೆ. ಸರ್ಕಾರಿ ಶಾಲೆಗಳಲ್ಲಿ ಕಲಿತು ಉನ್ನತ ಸ್ಥಾನ ಹೊಂದಿದ ವ್ಯಕ್ತಿಗಳಿಂದಲೇ ಆಯಾ ಶಾಲೆಗಳ ಅಭಿವೃದ್ದಿಗಾಗಿ ಯೋಜನೆ ತಯಾರಾಗುತ್ತಿದೆ.

ಇದೀಗ ಪ್ರಣೀತಾ ಸರ್ಕಾರಿ ಶಾಲೆ ದತ್ತು ಸ್ವೀಕಾರ ಮಾಡುತ್ತಿರುವುದು ಸಂತಸದ ವಿಚಾರವಾಗಿದೆ. ಇನ್ನಿಬ್ಬರು ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳು ಸಹ ಶಾಲೆ ದತ್ತು ಪಡೆಯಲು ಮುಂದಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

21032833_874826192671698_3925038209915971270_n

ಹಾಸನ ಜಿಲ್ಲೆಯಲ್ಲಿ ಮೂಲಸೌಲಭ್ಯವಿಲ್ಲದ ಮೂರು ಸರ್ಕಾರಿ ಶಾಲೆಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ ಒಂದರ ಅಭಿವೃದ್ದಿಗೆ ಪ್ರಣೀತಾ ನೀಡಿದ ಹಣ ಬಳಕೆಯಾಗಲಿದೆ ಎಂದು ಅನಿಲ್ ಶೆಟ್ಟಿ ಹೇಳಿದ್ದಾರೆ.

Advertisements

Leave a Reply

%d bloggers like this: