Advertisements

12 ವರ್ಷದ ಹಿಂದೆ : #MeToo ಹುಟ್ಟಿದ್ದು ಹೇಗೆ ಗೊತ್ತಾ…?

#MeToo ದೇಶದಲ್ಲಿ ಇದೀಗ ಸುಂಟರಗಾಳಿಯಾಗಿದೆ. ಆಂದೋಲನ ಇದೀಗ ಚಳವಳಿಯಾಗಿ ಮಾರ್ಪಟ್ಟಿದೆ. ನಮ್ಮ ಹೆಸರೆಲ್ಲಿ ಟ್ಯಾಗ್ ಲೈನ್ ನಲ್ಲಿ ಸಿಲುಕಿಕೊಳ್ಳುತ್ತದೋ ಎಂದು ಹಲವಾರು ಸೆಲೆಬ್ರೆಟಿಗಳು ಜೀವ ಕೈಯಲ್ಲಿ ಹಿಡಿದುಕೊಳ್ಳುವಂತೆ ಮಾಡಿದ್ದು ಸುಳ್ಳಲ್ಲ.

ಅನ್ಯಾಯಕ್ಕೆ ಒಳಗಾದವರಿಗೆ ಕಾನೂನು ಹೋರಾಟ ಮಾಡಲು ಸಾಧ್ಯವಿಲ್ಲದವರಿಗೆ ಒಂದಿಷ್ಟು ನೆಮ್ಮದಿಯನ್ನು ಈ ಆಂದೋಲನ ತಂದುಕೊಟ್ಟಿದೆ ಅನ್ನುವುದು ಸುಳ್ಳಲ್ಲ.

ಹಾಗಾದರೆ #Me Too ಆಂದೋಲನ ಹುಟ್ಟಿದ್ದು ಹೇಗೆ ಎಂದು ಹುಡುಕುತ್ತಾ ಹೋದರೆ ಇದು 2006ರಲ್ಲಿ ಪ್ರಾರಂಭವಾದ ಹೋರಾಟ.ಇದನ್ನು ಪ್ರಾರಂಭಿಸಿದವರು ಟರನಾ ಬರ್ಕ್

ಯಾರಿವರು ಟರನಾ ಬರ್ಕ್ .?
• ಟರಾನಾ ಬುರ್ಕ್ ಆಫ್ರಿಕನ್ ಮೂಲದ ಅಮೆರಿಕನ್ ಮಹಿಳೆ. ನ್ಯೂಯಾರ್ಕ್ನ ನಾಗರಿಕ ಹಕ್ಕುಗಳ ಹೋರಾಟಗಾರ್ತಿಯಾಗಿ ಇವರು ಗುರುತಿಸಿಕೊಂಡಿದ್ದಾರೆ.
• ಪ್ರಸ್ತುತ ನ್ಯೂಯಾರ್ಕ್ನ ಬ್ರುಕ್ಲಿನ್ ಮೂಲದ ‘ಲಿಂಗ ಸಮಾನತೆಗಾಗಿ ಹೆಣ್ಣುಮಕ್ಕಳು’ ಎಂಬ ಸಂಸ್ಥೆಯಲ್ಲಿ ಸದ್ಯ ಟರಾನ್ ಬುರ್ಕ್ ಅವರು ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

#MeToo ಹುಟ್ಟಿದ್ಯಾಕೆ ಆರಂಭವಾಗಿದ್ದು ಹೇಗೆ?

ಜಸ್ಟ್ ಬಿ ಇನ್ ಕಾರ್ಪೋರೇಷನ್ ಎನ್ನುವ ಸಂಸ್ಥೆಯಲ್ಲಿ ಬರ್ಕ್ ಉದ್ಯೋಗಿಯಾಗಿದ್ದ ವೇಳೆ 2003 ರಲ್ಲಿ “ಮೈ ಸ್ಪೇಸ್” ನಲ್ಲಿ ಬರ್ಕ್ ಮೊದಲ ಬಾರಿಗೆ “ಮೀಟೂ” ಎನ್ನುವ ಪದಪುಂಜವನ್ನು ಸೃಷ್ಟಿಸಿದ್ದರು. ಕಪ್ಪು ವರ್ಣದ ಮಹಿಳೆಯರ ಕಲ್ಯಾಣ ಯೋಜನೆ ಪ್ರಾರಂಭಿಸಿದ್ದ ಬರ್ಕ್ ಬಳಿ ಬಂದ ಬಾಲಕಿಯೊಬ್ಬಳು ತಾಯಿಯ ಸ್ನೇಹಿತನೊಬ್ಬ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದಾನೆ ಎಂದು ಆರೋಪಿಸಿದಾಗ ಈ ಚಳವಳಿಯನ್ನು ಹುಟ್ಟು ಹಾಕಿದ್ದರು.

  •  ಲೈಂಗಿಕ ದಾಸ್ಯಕ್ಕೊಳಗಾದ ಕೆಳ ಸ್ತರದ ಹೆಣ್ಣು ಮಕ್ಕಳ ಪರವಾಗಿ ಹೋರಾಡಲೆಂದು ಟರಾನಾ ಬರ್ಕ್ 2003ರಲ್ಲಿ Just Be Inc. ಎಂಬ ಸಂಸ್ಥೆ ಆರಂಭಿಸಿದ್ದರು. ಅದರ ಮೂಲಕ ‘myspace’ ಎಂಬ ವೆಬ್ ಪೋರ್ಟಲ್ನಲ್ಲಿ ಹೆಣ್ಣು ಮಕ್ಕಳ ಸಮಸ್ಯೆ ಆಲಿಸುವ, ಅವರಿಗೆ ಸಾಂತ್ವನ ಹೇಳುವ, ಅವರಿಗೆ ಕಾನೂನು ನೆರವು ಕಲ್ಪಿಸುವ ಕಾರ್ಯಕ್ರಮ (ಯೂತ್ ಕ್ಯಾಂಪ್ ) ನಡೆಸುತ್ತಿದ್ದರು. ಟರಾನಾ ಅವರು ಅಪ್ರಾಪ್ತ, ಸಂತ್ರಸ್ತ ಹೆಣ್ಣುಮಕ್ಕಳ ಯೋಗಕ್ಷೇಮಕ್ಕಾಗಿ ಯೋಜನೆಗಳನ್ನು ಹಾಕಿಕೊಳ್ಳಲು ಆರಂಭಿಸಿದರು.
  •  ಹೆಣ್ಣು ಮಕ್ಕಳ ಸಮಸ್ಯೆಗಳನ್ನು ಆಲಿಸುತ್ತಿದ್ದ ಟರಾನಾ ಅವರಿಗೆ ಒಂದು ಬಾರಿ ಅಪ್ರಾಪ್ತ ಬಾಲಕಿಯೊಬ್ಬಳು ತನ್ನ ತಾಯಿಯ ಪ್ರಿಯಕರ ನೀಡಿದ ಲೈಂಗಿಕ ದೌರ್ಜನ್ಯದ ವೃತ್ತಾಂತ ಹೇಳಿಕೊಂಡಿದ್ದಳು. ಈ ಸನ್ನಿವೇಶ ಟರಾನಾ ಅವರನ್ನು ಮನ ಕಲಕಿತ್ತು. ಸದ್ಯ ಜನಪ್ರಿಯ ಗೊಂಡಿರುವ MeToo ಅಭಿಯಾನ ಹುಟ್ಟಿಕೊಂಡಿದ್ದು ಅಂದೇ.
  • ಕಷ್ಟ ಹೇಳಿಕೊಳ್ಳಲು ಬಂದ ಹೆಣ್ಣು ಮಕ್ಕಳನ್ನು ಸಂತೈಸಲು ಬಳಸಿದ ಪದ MeToo
  •  ಲೈಂಗಿಕ ತೃಷೆಗೆ ನಲುಗಿದ ಆ ಅಪ್ರಾಪ್ತ ಹೆಣ್ಣು ಮಗಳು ತನ್ನ ಸಮಸ್ಯೆ ಹೇಳಿಕೊಳ್ಳುತ್ತಿದ್ದಾಗ ಆಕೆಯನ್ನು ಸಂತೈಸಲು ಟರಾನಾ ಬರ್ಕ್ ಬಳಸಿದ ಪದವೇ MeToo

 ಟರಾನಾ ಬರ್ಕ್ ಅವರು ತಾವು ಹೋದ ಕಡೆಗಳಲ್ಲೆಲ್ಲ MeToo ಎಂಬ ಪದ ಬಳಸಲಾರಂಭಿಸಿದರು. ನೀವು ಒಂಟಿಯಲ್ಲ. ಇದು ನನಗೂ ಸಂಭವಿಸಿದ ಸಮಸ್ಯೆ ಎಂದು ಹೇಳಿಕೊಳ್ಳಲಾರಂಭಿಸಿದರು. ಇದು ಸಂತ್ರಸ್ತರಿಗೆ ಧೈರ್ಯ ತುಂಬುವ ಮಾತಾಗಿತ್ತು..
ಆದರೆ ಟರಾನಾ ಬರ್ಕ್ ಅವರ ಸಂದೇಶಕ್ಕೆ ಸಿಗದ ವ್ಯಾಪಕತೆ ನಟಿ ಅಲಿಸ್ಸ ಮಿಲಾನೊ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಉಲ್ಲೇಖ ಮಾಡುವುದರೊಂದಿಗೆ ಹೆಚ್ಚು ಪ್ರವರ್ಧಮಾನಕ್ಕೆ ಬಂತು. 2017ರಲ್ಲಿ ಅಲಿಸ್ಸ ಮಿಲಾನೊ ಮಾಡಿದ ಟ್ವೀಟ್ ನಂತರ MeToo ಜಗತ್ತಿನಾದ್ಯಂತ ಪ್ರಖ್ಯಾತಿ ಪಡೆದುಕೊಂಡಿದೆ.

  •  ದೌರ್ಜನ್ಯಕ್ಕೊಳಗಾದ ಹೆಣ್ಣು ಮಕ್ಕಳ ಪರ ಹೋರಾಡಿದ, ಕಲ್ಯಾಣ ಕಾರ್ಯಕ್ರಮಗಳ ಕೈಗೊಂಡ ಟರಾನಾ ಅವರು 2017ರಲ್ಲಿ ‘ಟೈಮ್ ವರ್ಷದ ವ್ಯಕ್ತಿ ಪ್ರಶಸ್ತಿಗೆ’ ಪಾತ್ರರಾಗಿದ್ದಾರೆ.

ಒಟ್ಟಾರೆ ಐತಿಹಾಸಿಕ ಚಳುವಳಿ ಸುಮಾರು 12 ವರ್ಷಗಳ ಹಿಂದೆ ಪ್ರಾರಂಭವಾದರೂ, ಇದು ಕೇವಲ ಎರಡು ವರ್ಷಗಳ ಹಿಂದೆ ಪ್ರಸಿದ್ಧವಾಯಿತು. ಈಗ, ಇದು ಬದಲಾವಣೆಯ ಸಮಯವಾಗಿದ್ದು ಈ ಭರವಸೆಯ ನುಡಿಗಟ್ಟನ್ನು ಲೈಂಗಿಕ ಕಿರುಕುಳದ ವಿರುದ್ಧ ತಮ್ಮ ದುಃಖವನ್ನು ಹಂಚಿಕೊಳ್ಳಲು ಪ್ರಪಂಚದಾದ್ಯಂತ ಮಹಿಳೆಯರು ಬಳಸುತ್ತಿದ್ದಾರೆ.

Advertisements

Leave a Reply

%d bloggers like this: