Advertisements

ವಿಮಾನದಿಂದ ಕೆಳಗೆ ಬಿದ್ದ ಗಗನ ಸಖಿ : ಆಸ್ಪತ್ರೆಗೆ ದಾಖಲು

ಟೇಕಾಫ್ ಗೆ ಸಿದ್ದವಾಗಿದ್ದ ವಿಮಾನದಿಂದ ಗಗನಸಖಿಯೊಬ್ಬರು ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ ಮುಂಜಾನೆ ನಡೆದಿದೆ.

ಮುಂಬೈನ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದೆಹಲಿಗೆ ಹಾರಲು ಸಿದ್ಧವಾಗಿದ್ದ ಏರ್ ಇಂಡಿಯಾ ವಿಮಾನ ಎಐ 864ದಲ್ಲಿ ಈ ಘಟನೆ ಬೆಳಗ್ಗೆ 7 ಗಂಟೆ ಹೊತ್ತಿಗೆ ನಡೆದಿದೆ.

ವಿಮಾನ ಇನ್ನೇನು ಟೇಕಾಫ್ ಗೆ ಸಿದ್ದವಾಗುವ ಸಲುವಾಗಿ ಚಾಲನೆಯಾಗುತ್ತಿದ್ದಂತೆಯೇ ವಿಮಾನದಲ್ಲಿದ್ದ ಸುಮಾರು 53 ವರ್ಷದ ಗಗನಸಖಿಯೊಬ್ಬರು ವಿಮಾನದ ಬಾಗಿಲು ಮುಚ್ಚಲು ಮುಂದಾಗಿದ್ದಾರೆ.

ಈ ವೇಳೆ ಅವರು ಆಯತಪ್ಪಿ ನೆಲಕ್ಕೆ ಬಿದ್ದಿದ್ದು, ಅವರಿಗೆ ಗಂಭೀರ ಗಾಯಗಳಾಗಿವೆ. ತಕ್ಷಣ ಸಹಾಯಕ್ಕೆ ಧಾವಿಸಿದ ವಿಮಾನ ನಿಲ್ದಾಣ ಸಿಬ್ಬಂದಿ, ತುರ್ತು ವಾಹನ ಮೂಲಕ ನಾನಾವತಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಘಟನೆಯನ್ನು ಏರ್ ಇಂಡಿಯಾ ವಕ್ತಾರರು ಒಪ್ಪಿಕೊಂಡಿದ್ದು, “In an unfortunate incident, one of our cabin crew (members), Harsha Lobo, fell down on the tarmac from the Boeing-777 aircraft door while closing it. She sustained injuries to her legs and has been taken to the Nanavati Hospital for further treatment” ಎಂದು ಹೇಳಿಕೆ ಕೊಟ್ಟಿದ್ದಾರೆ.

ಘಟನೆ ನಂತರ ತಡವಾಗಿ ಪ್ರಯಾಣ ಬೆಳೆಸಿದ ವಿಮಾನ ದೆಹಲಿಯಲ್ಲಿ ಲ್ಯಾಂಡ್ ಆಗಿದೆ.

Advertisements

Leave a Reply

%d bloggers like this: