Advertisements

ವೈಲ್ಡ್ ಕಾರ್ಡ್ ಸುಂದರಿ : ಸ್ಪ್ಲಿಟ್ಸ್ ವಿಲ್ಲಾ ಡೇಟಿಂಗ್ ಶೋನಲ್ಲೂ ಕಿರಿಕ್ ಮುಂದುವರಿಸಿದ ಸಂಯುಕ್ತಾ ಹೆಗ್ಡೆ

ಕನ್ನಡದ ಬಿಗ್ ಬಾಸ್ ಮನೆಯಲ್ಲಿ ಪ್ರತಿ ಸ್ಪರ್ಧಿಯಾಗಿದ್ದ ಸಮೀರ್ ಆಚಾರ್ಯ ಮೇಲೆ ಹಲ್ಲೆ ಮಾಡಿ ಕಿರಿಕ್ ಮಾಡಿದ್ದ ಕಿರಿಕ್ ಪಾರ್ಟಿ ಬೆಡಗಿ ಸಂಯುಕ್ತ ಹೆಗ್ಡೆ ಇದೀಗ ಬಾಲಿವುಡ್ ನಲ್ಲೂ ಕಿರಿಕ್ ಮಾಡಿ ಸುದ್ದಿಯಾಗಿದ್ದಾರೆ.

ಎಂಟಿವಿಯ `ಸ್ಪ್ಲಿಟ್ಸ್ ವಿಲ್ಲಾ’ ಡೇಟಿಂಗ್ ರಿಯಾಲಿಟಿ ಶೋನಲ್ಲಿ ಸಂಯುಕ್ತ ಇತರೇ ಸ್ಪರ್ಧಿಗಳೊಂದಿಗೆ ಕಿರಿಕ್ ಮಾಡಿಕೊಂಡಿದ್ದಾರೆ.
ವೈಲ್ಡ್ ಕಾರ್ಡ್ ನಲ್ಲಿ ಎಂಟ್ರಿಕೊಟ್ಟಿದ್ದ ಸಂಯುಕ್ತ ಹೆಗ್ಡೆ ಎಂಟ್ರಿ ಕೊಟ್ಟ ಒಂದೇ ದಿನಕ್ಕೆ ಇತರ ಸ್ಪರ್ಧಿಗಳ ಜತೆ ಜಗಳ ಮಾಡಿಕೊಂಡಿದ್ದಾರೆ.

ಈ ಕಾರ್ಯಕ್ರಮದಲ್ಲಿ ಸಿಂಬಾ ಹಾಗೂ ಮೈರಾ ನಡುವೆ ಲ್ವವಿಡವಿ ನಡೆಯುತ್ತಿತ್ತು. ಇದೀಗ ಸಂಯುಕ್ತ ಅವರ ಎಂಟ್ರಿಯಿಂದ ಸಿಂಬಾ ಕಣ್ಣು ಸಂಯುಕ್ತ ಕಡೆಗೆ ಜಾರಿದೆ. ಇದರಿಂದಾಗಿ ಮೈರಾ ಸಿಟ್ಟು ಮಾಡಿಕೊಂಡಿದ್ದಾರೆ.

samyuktha-kirik

ಇದೀಗ ಸಿಂಬಾ ಮತ್ತು ಸಂಯುಕ್ತ ನಡುವೆ ಸಂಥಿಂಗ್ ಸಂಥಿಂಗ್ ನಡೆಯುತ್ತಿದ್ದು, ಟೆಸ್ಟ್ ಯುವರ್ ಬಾಂಡ್ ಚಾಲೆಂಜ್‍ನಲ್ಲಿ ಸೋಲನ್ನು ಅನುಭವಿಸಿದ್ದರು. ಕಾರ್ಯಕ್ರಮಕ್ಕೆ ಎಂಟ್ರಿಕೊಟ್ಟ ಒಂದೇ ದಿನಕ್ಕೆ ಸಂಯುಕ್ತ ಹಲವು ಸ್ಪರ್ಧಿಗಳ ಕೆಂಗಣ್ಣಿಗೆ ಗುರಿಯಾಗಿದ್ದು, ಶೋನಿಂದ ಹೊರಬರುತ್ತಾರಾ ಇಲ್ಲ ಅಲ್ಲೇ ಉಳಿಯುತ್ತಾರಾ ಎಂಬುದು ಮುಂದಿನ ಎಪಿಸೋಡ್‍ನಲ್ಲಿ ಗೊತ್ತಾಗಲಿದೆ.

ಇದೇ ಅಲ್ಲದೆ ಸಂಯುಕ್ತ ಹೆಗ್ಡೆ ಹಾಗೂ ಮೈರಾ ಇಬ್ಬರು ಮಾತಿನ ಜಗಳ ಮಾಡಿ ಒಬ್ಬರನ್ನೊಬ್ಬರು ನಿಂದಿಸಿಕೊಂಡಿದ್ದಾರೆ.
ವಿಚಿತ್ರ ಅಂದರೆ ಬಿಗ್ ಬಾಸ್ ಮನೆಗೂ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟು ಸಂಯುಕ್ತಾ ಸಮೀರ್ ಆಚಾರ್ಯ ಮೇಲೆ ಹಲ್ಲೆ ಮಾಡಿದ್ದರು.

https://www.facebook.com/plugins/video.php?href=https%3A%2F%2Fwww.facebook.com%2Fmtvindia%2Fvideos%2F2188718738122121%2F&show_text=0&width=560

Advertisements

Leave a Reply

%d bloggers like this: