Advertisements

ಗೂಡ್ಸ್ ಲಾರಿ ಕದ್ದ 14 ರ ಬಾಲಕ : ಡೀಸಲ್ ಖಾಲಿಯಾಗಿಲ್ಲ ಅಂದರೆ ಕಥೆಯೇ ಬೇರೆ

ಗೂಡ್ಸ್‌ ಲಾರಿಯಲ್ಲಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದ 14ರ ಬಾಲಕನೋರ್ವ ಹರಿಯಾಣದ ಪಲ್ವಾಲ್‌ ನಿಂದ ಟ್ರಕ್‌ ಅನ್ನು ಕದ್ದು 138 ಕಿ.ಮೀ. ದೂರ ಚಲಾಯಿಸಿಕೊಂಡು ಹೋಗಿ ಬಳಿಕ ಡೀಸಲ್ ಖಾಲಿಯಾಗಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಪಲ್ವಾಲ್‌ ನಿಂದ ಟ್ರಕ್ ಅನ್ನು ಅಪಹರಿಸಿದ್ದ ಬಾಲಕ ಎರಡು ದಿನದಲ್ಲಿ 138 ಕಿ.ಮೀ. ದೂರ ಟ್ರಕ್ ಚಲಾಯಿಸಿ ಉತ್ತರ ಪ್ರದೇಶದ ಹತ್ರಾಸ್‌ಗೆ ತಲುಪಿದ್ದಾನೆ. ಅಲ್ಲಿ ತಲುಪುತ್ತಲೇ ಲಾರಿಯಲ್ಲಿದ್ದ ಡೀಸೆಲ್ ಖಾಲಿಯಾಗಿದೆ.

ಡೀಸೆಲ್ ಖಾಲಿಯಾಗಿದ್ದ ಸಂದರ್ಭ ಆತ ಸ್ಪೇರ್ ಟೈರ್ ಅನ್ನು ಮಾರಾಟ ಮಾಡಿ ಹಣ ಹೊಂದಿಸಲು ಯತ್ನಿಸುತ್ತಿದ್ದ
ಅಷ್ಟು ಹೊತ್ತಿಗೆ ಲಾರಿ ಕಳುವು ಕುರಿತಂತೆ ಚಾಲಕ ಮುನ್ನಾ ಪಲ್ವಾಲ್ ಪೊಲೀಸರಿಗೆ ದೂರು ಕೊಟ್ಟಿದ್ದಾನೆ. ತಕ್ಷಣ ಕಾರ್ಯಾಚರಣೆಗೆ ಇಳಿದ ಪೊಲೀಸರಿಗೆ ಕ್ಲೀನರ್ ಸಿಕ್ಕಿ ಬಿದ್ದಿದ್ದಾನೆ.

ಇಟಾ ಮೂಲದವನಾದ ಬಾಲಕ ತಿಂಗಳಿಗೆ 5000 ರೂ. ಕೂಲಿಗೆ ಟ್ರಕ್ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದ. ಆದರೆ ಅದು ಆತನ ಕುಟುಂಬದ ನಿರ್ವಹಣೆಗೆ ಸಾಕಾಗುತ್ತಿರಲಿಲ್ಲ. ಬಾಲಕನ ತಂದೆ ತೀರಿಕೊಂಡಿದ್ದು, ತಾಯಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ.

ಹೀಗಾಗಿ ಬಾಲಕ ಲಾರಿಯನ್ನು ಕದ್ದು, ಅದರಲ್ಲಿದ್ದ 14 ಲಕ್ಷ ರೂ. ಮೌಲ್ಯದ ರೆಫ್ರೀಜರೇಟರ್ ಲೋಡ್‌ ಅನ್ನು ಮಾರಾಟ ಮಾಡಿ ಅದರಿಂದ ಹಣ ಗಳಿಸುವ ಉದ್ದೇಶ ಹೊಂದಿದ್ದ ಎಂದು ತಿಳಿದು ಬಂದಿದೆ.

Advertisements

Leave a Reply

%d bloggers like this: