Advertisements

ಅಲ್ಲಿ ರೇಪ್ ಅನ್ನುವುದೇ ಇಲ್ಲ, ಎಲ್ಲವೂ ಒಪ್ಪಿಗೆ ಮೇಲೆ ನಡೆಯುತ್ತದೆ: ಶಿಲ್ಪಾ ಶಿಂಧೆ

#MeToo ಸುಂಟರಗಾಳಿ ಸಿಕ್ಕವರ ಮಾನ ಮರ್ಯಾದೆ ಬೀದಿಯಲ್ಲಿ ಹರಾಜಾಗುತ್ತಿದೆ. ದಿನಕ್ಕೆ ಹತ್ತಾರು ಮಂದಿ ಹ್ಯಾಶ್ ಟ್ಯಾಂಗ್ ಅಂದೋಲನದಲ್ಲಿ ಸಿಲುಕಿ ವಿಲ ವಿಲ ಒದ್ದಾಡುತ್ತಿದ್ದಾರೆ.

ಈ ನಡುವೆ ಬಿಗ್ ಬಾಸ್ 11ರ ವಿಜೇತೆ ಶಿಲ್ಪಾ ಶಿಂಧೆ ಉಲ್ಟಾ ಹೊಡೆದಿದ್ದಾರೆ. ”ಇಂಡಸ್ಟ್ರಿಯಲ್ಲಿ ರೇಪ್ ಅನ್ನುವಂಥದ್ದು ಇಲ್ಲ. ಇಬ್ಬರ ಮಧ್ಯೆ ನಡೆಯುವುದು ಪರಸ್ಪರ ಒಪ್ಪಿಗೆ ಮೇರೆಗೆ” ಎಂದಿದ್ದಾರೆ ನಟಿ ಶಿಲ್ಪಾ ಶಿಂಧೆ.

#MeToo….. ಟಗರು ಪುಟ್ಟಿ ಹೇಳಿದ್ದೇನು..?

ಘಟನೆ ನಡೆದಾಗ ಅದರ ಬಗ್ಗೆ ಮಾತನಾಡಬೇಕೇ ಹೊರತು ವರ್ಷಗಳು ಉರುಳಿದ ಬಳಿಕ ಮಾತನಾಡಿ ಯಾವುದೇ ಪ್ರಯೋಜನ ಇಲ್ಲ. ಇಂಡಸ್ಟ್ರಿ ಅಷ್ಟೊಂದು ಕೆಟ್ಟಿಲ್ಲ. ಹಾಗೇ ತುಂಬಾ ಚೆನ್ನಾಗಿದೆ ಅಂತಾನೂ ಇಲ್ಲ. ಇಂತಹ ಘಟನೆಗಳು ಎಲ್ಲೆಡೆ ಆಗುತ್ತೆ. ಎಲ್ಲರೂ ಯಾಕೆ ಚಿತ್ರರಂಗದ ಹೆಸರು ಹಾಳು ಮಾಡುತ್ತಿದ್ದಾರೆ ಅನ್ನೋದು ಅರ್ಥ ಆಗುತ್ತಿಲ್ಲ. ಎಲ್ಲರೂ ಕೆಟ್ಟವರಲ್ಲ” ಅಂತಾರೆ ನಟಿ ಶಿಲ್ಪಾ ಶಿಂಧೆ.

ಖಾಸಗಿ ವಾಹಿನಿಯೊಂದರ ಜೊತೆ ಮಾತನಾಡಿದ ಶಿಲ್ಪಾ ಶಿಂಧೆ “ಬಾಲಿವುಡ್‍ ನಲ್ಲಿ ರೇಪ್ ಎನ್ನುವುದೇ ಇಲ್ಲ. ಎಲ್ಲವೂ ಒಪ್ಪಂದ ಮೇರೆಗೆ ನಡೆಯುತ್ತವೆ. ಯಾರೂ ಯಾರನ್ನೂ ಒತ್ತಾಯದ ಮೇರೆಗೆ ಹಾಸಿಗೆಗೆ ಎಳೆದೊಯ್ಯಲು ಸಾಧ್ಯವಿಲ್ಲ ಅನ್ನುವುದು ಶಿಂಧೆ ಅಭಿಪ್ರಾಯ.

Advertisements

Leave a Reply

%d bloggers like this: