Advertisements

ಅದೊಂದು ಕೆಲಸಕ್ಕೆ TV9 ಗೆ RGV ನೀಡಿದ್ದು 1 ಲಕ್ಷ

ಶನಿವಾರ ವಿಡಿಯೋ ಜೊತೆಗೆ ಟ್ವೀಟ್ ಮಾಡಿದ್ದ ರಾಮ್ ಗೋಪಾಲ್ ವರ್ಮಾ, ಚಂದ್ರಬಾಬು ನಾಯ್ಡು ರನ್ನು ಹೋಲುವ ವ್ಯಕ್ತಿಯನ್ನ ಹುಡುಕಿಕೊಟ್ಟವರಿಗೆ ಒಂದು ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದರು.

ಚಂದ್ರಬಾಬು ನಾಯ್ಡು ರಂತೆಯೇ ಕಾಣುವ ಹೋಟೆಲ್ ನಲ್ಲಿ ಕೆಲಸ ಮಾಡುವ ವ್ಯಕ್ತಿಯ ವಿಡಿಯೋ ಟ್ವಿಟ್ಟರ್ ನಲ್ಲಿ ಅಪ್ ಲೋಡ್ ಕೂಡಾ ಮಾಡಿದ್ದರು.

ಹೋಟೆಲ್ ಒಂದರಲ್ಲಿ ವೈಟರ್ ಬಗ್ಗೆ ಕಾಂಟ್ಯಾಕ್ಟ್ ಡೀಟೇಲ್ಸ್ ಕೊಟ್ಟವರಿಗೆ ಒಂದು ಲಕ್ಷ ರೂಪಾಯಿ ಕೊಡುತ್ತೇನೆ ಎಂದು ಭರವಸೆ ಕೊಟ್ಟಿದ್ದರು.

ಇದಾದ ಕೆಲವೇ ಹೊತ್ತಿನಲ್ಲಿ ಮತ್ತೊಂದು ಟ್ವೀಟ್ ಮಾಡಿದ ವರ್ಮಾ, ಚಂದ್ರಬಾಬು ನಾಯ್ಡು ರನ್ನೇ ಹೋಲುವ ವ್ಯಕ್ತಿಯ ಬಗ್ಗೆ ಮಾಹಿತಿ ಸಿಕ್ಕಿದೆ. ಹೀಗಾಗಿ, ಮಾಹಿತಿ ನೀಡಿದ ಟಿವಿ9 ಸಿಬ್ಬಂದಿಗೆ ರಾಮ್ ಗೋಪಾಲ್ ವರ್ಮಾ ಒಂದು ಲಕ್ಷ ರೂಪಾಯಿ ಕೊಡಲು ಮುಂದಾಗಿದ್ದಾರೆ.

ಆರ್.ಜಿ.ವಿ ಗೆ ಫಾರ್ವರ್ಡ್ ಆಗಿ ಬಂದ ವಿಡಿಯೋವನ್ನು ಟ್ವೀಟ್ ಮಾಡಿದ ತಕ್ಷಣ ಸಾಕಷ್ಟು ಮಂದಿ ನಾಯ್ಡು ಅವರನ್ನು ಹೋಲುವ ವ್ಯಕ್ತಿಗಾಗಿ ಜನ ಹುಡುಕಾಟ ನಡೆಸಿದ್ದರು. ಆದರೆ ಗೆದ್ದಿದ್ದು ಮಾತ್ರ ಟಿವಿ9 ನಲ್ಲಿ ಕೆಲಸ ಮಾಡುವ ರೋಹಿತ್ ಮುತ್ಯಾಲ.

ವ್ಯಕ್ತಿಯನ್ನು ಟ್ರೇಸ್ ಮಾಡಿರುವುದಕ್ಕೆ ಧನ್ಯವಾದ ಹೇಳಿರುವ ಆರ್.ಜಿ.ವಿ ,ಲಕ್ಷ್ಮೀಸ್ ಎನ್.ಟಿ.ಆರ್ ಚಿತ್ರಕ್ಕೆ ಚಂದ್ರಬಾಬು ನಾಯ್ಡುರನ್ನ ಉಡುಗೊರೆಯಾಗಿ ನೀಡಿದ ರೋಹಿತ್ ಅವರಿಗೆ ಧನ್ಯವಾದಗಳು. ಚಿತ್ರದ ಆರಂಭದಲ್ಲಿ ನಿಮಗೆ ನಾನು ಕೃತಜ್ಞತೆಯನ್ನು ಅರ್ಪಿಸುತ್ತೇನೆ.

ಸದ್ಯಕ್ಕೆ ನಿಮ್ಮ ಅಕೌಂಟ್ ಡೀಟೇಲ್ಸ್ ನ ನನಗೆ ಕಳುಹಿಸಿ. ನಿಮ್ಮ ಒಂದು ಲಕ್ಷ ರೂಪಾಯಿಯನ್ನು ನಾನು ಕಳುಹಿಸುವೆ ಎಂದಿದ್ದಾರೆ.
ಹಾಗಾದರೆ ಮತ್ತೊಬ್ಬ ಚಂದ್ರಬಾಬು ನಾಯ್ಡುವನ್ನು ಹುಡುಕಲು ಕಾರಣವೇನು ಅಂದರೆ ಚಿತ್ರದಲ್ಲಿ ಲಕ್ಷ್ಮಿ ಪಾರ್ವತಿ ಹಾಗೂ ಎನ್.ಟಿ.ಆರ್ ಸಂಬಂಧದಲ್ಲಿ ಚಂದ್ರಬಾಬು ನಾಯ್ಡು ಪಾತ್ರ ಪ್ರಮುಖವಾದದ್ದು” ಹೀಗಾಗಿ ಇವರನ್ನೇ ಹೋಲುವ ವ್ಯಕ್ತಿ ನನಗೆ ತುರ್ತಾಗಿ ಬೇಕಾಗಿತ್ತು ಅಂದಿದ್ದಾರೆ.

ಲಕ್ಷ್ಮೀಸ್ ಎನ್.ಟಿ.ಆರ್’ ಚಿತ್ರದ ಫಸ್ಟ್ ಲುಕ್ ಈಗಾಗಲೇ ಬಿಡುಗಡೆಯಾಗಿದೆ. ಎನ್.ಟಿ.ಆರ್ ಮತ್ತು ಅವರ ಎರಡನೇ ಪತ್ನಿ ಲಕ್ಷ್ಮಿ ಪಾರ್ವತಿ ಅವರ ನಡುವಿನ ಸಂಬಂಧದ ಕುರಿತು ಈ ಸಿನಿಮಾ ಹೆಣೆಯಲಾಗುತ್ತದೆಯಂತೆ.

Advertisements

Leave a Reply

%d bloggers like this: