Advertisements

#MeToo ರವಿಚಂದ್ರನ್ ಅಸಲಿ ಮುಖ ಬಯಲು ಮಾಡಿದ ಖುಷ್ಬೂ….!

#MeToo ಸುಂಟರಗಾಳಿ ವೇಗ ಪಡೆದುಕೊಂಡಿದೆ. ಬೇರೆ ಚಿತ್ರರಂಗಕ್ಕೆ ಹೋಲಿಕೆ ಮಾಡಿದರೆ ಚಂದನವನ, ಚೆಂದವಾಗಿದೆಯೋ, ಯಾರೊಬ್ಬರು ಇನ್ನೂ ಟೈಪ್ ಮಾಡಲು ಪ್ರಾರಂಭಿಸಿಲ್ಲವೋ ಗೊತ್ತಿಲ್ಲ.

ಈ ನಡುವೆ ನಟಿ ಖುಷ್ಬೂ ಇದೇ ತಿಂಗಳ 12 ರಂದು ಟ್ವೀಟ್ ಮಾಡಿ #MeToo ಕುರಿತಂತೆ ಮಾತನಾಡಿದ್ದಾರೆ.

“ನನ್ನ 40 ವರ್ಷಗಳ ಸಿನಿಮಾ ಜೀವನದಲ್ಲಿ ಅಂತಹ ಸಂದರ್ಭ ಎದುರಾಗಲಿಲ್ಲ” ಎಂದು ಟ್ವೀಟ್ ಮಾಡಿದ್ದಾರೆ. ಖುಷ್ಬು ಟ್ವೀಟ್ ಮಾಡಿದ ತಕ್ಷಣ ಅನೇಕರು ರೀಟ್ವೀಟ್ ಮಾಡಿದ್ದಾರೆ.

ಆ ಪೈಕಿ ಲಕ್ಷ್ಮೀ ಅನ್ನುವವರು ನಟ ರವಿಚಂದ್ರನ್ ಹೆಸರು ಪ್ರಸ್ತಾಪಿಸಿ “ನೀವು ಸುಳ್ಳು ಹೇಳುತ್ತಿದ್ದೀರಾ ರವಿಚಂದ್ರನ್ ಅವರ ಜೊತೆ ಅಭಿನಯಿಸಿದ್ದೀರಾ, ಅವರು ಅಂದಿನ ಕಾಲದಲ್ಲಿ ಹೇಗಿದ್ದರು ಎಂದು ನಾನು ಊಹಿಸಬಲ್ಲೆ” ಅನ್ನುವ ಅರ್ಥ ಬರುವಂತೆ ಅಡ್ಡ ಗೋಡೆ ಮೇಲೆ ದೀಪವಿಟ್ಟು ರೀ ಟ್ವೀಟ್ ಮಾಡಿದ್ದಾರೆ.

ಇದರಿಂದ ಗರಂ ಆದ ಖುಷ್ಬೂ “ರವಿಚಂದ್ರನ್ ವ್ಯಕ್ತಿತ್ವ ಗೊತ್ತಿಲ್ಲದೆ ಪ್ರಚಾರಕ್ಕಾಗಿ ಏನೇನೊ ಮಾತನಾಡಬೇಡಿ. ನೀವು ಸಂತ್ರಸ್ತೆ ಅಲ್ಲ, ನಿಮ್ಮ ಬಳಿ ಯಾವುದೇ ಸಾಕ್ಷಿ ಇಲ್ಲದೇ ಈ ರೀತಿ ಮಾತನಾಡುವುದು ತಪ್ಪು.

ರವಿಚಂದ್ರನ್ ಎಂತಹವರು ಎಂದು ನನಗೆ ಗೊತ್ತು. ಇಂದು ನಮ್ಮ ತಾಯಿ ಬದುಕಿದರೆ ಅದಕ್ಕೆ ಅವರೇ ಕಾರಣ. ರವಿಚಂದ್ರನ್, ಅವರ ತಂದೆ ಎನ್. ವೀರಾಸ್ವಾಮಿ ಬಗ್ಗೆ ನಿನಗೆ ಗೊತ್ತಾ? ರವಿಚಂದ್ರನ್ ಬಹಳ ಒಳ್ಳೆ ಗುಣದವರು. ಎಲ್ಲರಿಗೂ ಒಳ್ಳೆ ಸ್ನೇಹಿತರಾಗಿದ್ದರು. ಅಂತಹವರ ಕುರಿತು ಬಾಯಿಗೆ ಬಂದಂತೆ ಮಾತಾಡಬೇಡ” ಅಂತ ಖುಷ್ಬೂ ಗರಂ ಆಗಿ ಉತ್ತರಿಸಿದ್ದಾರೆ.

Khushbu-Tweet1

Khushbu-Tweet2

Khushbu-Tweet3

Advertisements

Leave a Reply

%d bloggers like this: