Advertisements

#MeToo – ಚಂದನವನದ ಬಣ್ಣ ಬಿಚ್ಚಿಟ್ಟು, ಚಿತ್ರರಂಗಕ್ಕೆ ಗುಡ್ ಬೈ ಅಂದ ಸಂಗೀತಾ ಭಟ್

ದೇಶಾದ್ಯಂತ ಸುಂಟರಗಾಳಿಗಿಂತ ವೇಗವಾಗಿ ಬೀಸುತ್ತಿರುವ #MeToo ಅಭಿಯಾನ ಚಂದನವನಕ್ಕೂ ಎಂಟ್ರಿ ಕೊಟ್ಟಿದೆ.
“ಪ್ರೀತಿ ಗೀತಿ ಇತ್ಯಾದಿ”, “ಎರಡನೇ ಸಲ” ಸೇರಿ ಹಲವು ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ನಟಿ ಸಂಗೀತಾ ಭಟ್ ಚಿತ್ರರಂಗದಲ್ಲಿ ತನಗಾದ ಕೆಟ್ಟ ಅನುಭವವನ್ನು ವಿವರಿಸಿದ್ದು, ತಾವು ಚಿತ್ರರಂಗವನ್ನು ತೊರೆಯುವ ನಿರ್ಧಾರ ಪ್ರಕಟಿಸಿದ್ದಾರೆ.

ಚಂದನವನದಲ್ಲಿ ತಮಗಾದ ಅನುಭವಗಳನ್ನು ಮೂರು ಪುಟಗಳ ವಿವರಣೆ ನೀಡಿ ಚಿತ್ರರಂಗಕ್ಕೆ ಗುಡ್ ಬೈ ಎಂದಿದ್ದಾರೆ.
ತಮ್ಮ ಹದಿನೈದನೇ ವಯಸ್ಸಿನಿಂದ ಇಲ್ಲಿಯವರೆಗೆ ತಾವು ಅನುಭವಿಸಿದ ಲೈಂಗಿಕ ಕಿರುಕುಳ, ದೌರ್ಜನ್ಯದ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿವರವಾಗಿ ಹಂಚಿಕೊಂಡಿದ್ದಾರೆ.

ಹತ್ತನೇ ತರಗತಿಯಲ್ಲಿದ್ದಾಗ ಸಂಗೀತಾ ತಂದೆ ತೀರಿ ಹೋಗಿದ್ದು ಆ ಬಳಿಕ ಹೊಟ್ಟೆಪಾಡಿಗಾಗಿ ಚಿತ್ರರಂಗದತ್ತ ಆಗಮಿಸಿದ್ದು, ಬಳಿಕ ಎದುರಿಸಿದ್ದ ಕರಾಳ ಅನುಭವ, ನಿರ್ದೇಶಕ, ನಟ ಸೇರಿ ಚಿತ್ರ ತಂಡ ನೀಡಿದ ಕಿರುಕುಳವನ್ನು ಪತ್ರದಲ್ಲಿ ವಿವರಿಸಿದ್ದಾರೆ.
ನಾನು ಎಷ್ಟೋ ಚಿತ್ರಗಳಲ್ಲಿ ಅಭಿನಯಿಸಿದ್ದು ಆ ಚಿತ್ರಗಳು ತೆರೆಗೆ ಬರಲೇ ಇಲ್ಲ, ಹೀಗಾಗಿ ಆ ಚಿತ್ರಕ್ಕಾಗಿನ ನನ್ನ ಸಂಭಾವನೆ ಇನ್ನೂ ದೊರಕಿಲ್ಲ ಎಂದು ನಟಿ ನೋವು ತೋಡಿಕೊಂಡಿದ್ದಾರೆ.

ನಾನು ಇದಾಗಲೇ ಚಿತ್ರರಂಗದಿಂದ ದೂರವಾಗಿದ್ದು ಯಾವುದೇ ರೀತಿಯ ಪ್ರಚಾರ ಅಥವಾ ಮತ್ತೆ ಅವಕಾಶ ಸಿಗದಿರಬಹುದೆನ್ನುವ ಕಾರಣಕ್ಕೆ ಇವನ್ನೆಲ್ಲ ಬಹಿರಂಗವಾಗಿ ಹೇಳಿಕೊಳ್ಳುತ್ತಿಲ್ಲ.

ನನ್ನ ಮನಸ್ಸಿನಲ್ಲಿರುವ ಸಂಕಟವನ್ನು ಹೆಚ್ಚು ಸಮಯ ಅದುಮಿಕೊಳ್ಳಲು ನನಗೆ ಸಾಧ್ಯವಾಗದ ಕಾರಣ ಎಲ್ಲವನ್ನೂ ಇಲ್ಲಿ ಬರೆದಿದ್ದೇನೆ” ಎಂದು ಅವರು ಹೇಳಿದ್ದಾರೆ.

https://www.facebook.com/plugins/post.php?href=https%3A%2F%2Fwww.facebook.com%2FSangeetha.sihi%2Fposts%2F1045805585606347&width=500

Advertisements

Leave a Reply

%d bloggers like this: