Advertisements

#MeToo….. ಟಗರು ಪುಟ್ಟಿ ಹೇಳಿದ್ದೇನು..?

ಇದೀಗ ಸಾಮಾಜಿಕ ಜಾಲತಾಣದಲ್ಲಿ #MeToo ಸುಂಟರಗಾಳಿ ಬೀಸುತ್ತಿದೆ. ತಪ್ಪು ಮಾಡಿದ್ದಾರೆಯೋ ಇಲ್ಲವೋ, ಬಲಿಪಶುಗಳು ಯಾರು ಅನ್ನುವುದೇ ಅರ್ಥವಾಗುತ್ತಿಲ್ಲ.

ಈ ನಡುವೆ #MeToo ಬಗ್ಗೆ ಚಂದನವನದ ಚೆಂದದ ನಟಿ ಮಾನ್ವಿತಾ ಮಾತನಾಡಿದ್ದಾರೆ.

ತಾರಕಾಸುರ ಸಿನಿಮಾದ ಆಡಿಯೋ ಲಾಂಚ್ ವೇಳೆ ಈ ಬಗ್ಗೆ ಪ್ರಸ್ತಾಪಿಸಿರುವ ಅವರು ಹುಡುಗ ನೋಡಿದ ತಕ್ಷಣ, ರೇಗಿಸಿದ ತಕ್ಷಣ ಅದನ್ನು ಲೈಂಗಿಕ ಕಿರುಕುಳ ಅಂತ ಹೇಳಬೇಡಿ. ಕೆಲವರು ಸುಮ್ಮನೆ ಪ್ರಚಾರಕ್ಕೋಸರ ಆರೋಪ ಮಾಡಬಾರದು ಎಂದು ಹುಡುಗಿಯರ ಬಳಿ ಮನವಿ ಮಾಡಿಕೊಂಡಿದ್ದಾರೆ.

ನಾನು ಹೃದಯ ಪೂರ್ವಕವಾಗಿ ಹೇಳುತ್ತೇನೆ. ನೊಂದ ಹೆಣ್ಣು ಮಕ್ಕಳಿಗೆ ನ್ಯಾಯ ಸಿಗಬೇಕು. ತಪ್ಪು ಮಾಡಿದ ಗಂಡು ಮಕ್ಕಳಿಗೆ ಶಿಕ್ಷೆ ಆಗಬೇಕು. ಆದರೆ ಗಂಡಸರ ಬಗ್ಗೆ ಯಾರೂ ಸುಮ್ಮಸುಮ್ಮನೆ ಆರೋಪ ಮಾಡಬಾರದು ಎಂದು ಮಾನ್ವಿತಾ ಹೇಳಿದ್ದಾರೆ

Advertisements

Leave a Reply

%d bloggers like this: