Advertisements

ಕೆ.ಎಲ್. ರಾಹುಲ್ ವಿರುದ್ಧ ಸಿಡಿದೆದ್ದ ಕ್ರಿಕೆಟ್ ಅಭಿಮಾನಿಗಳು

ಟೀಂ ಇಂಡಿಯಾದ ಆರಂಭಿಕ ಆಟಗಾರ ಕೆ.ಎಲ್. ರಾಹುಲ್ ಅವರು ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ 4 ರನ್ ಳಿಗೆ ಔಟಾದರು. ರಾಹುಲ್ ಔಟಾಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಅವರ ವಿರುದ್ಧ ಟೀಕೆಯ ಸುರಿಮಳೆಯಾಗಿದೆ.

ವೆಸ್ಟ್ ಇಂಡೀಸ್ ವಿರುದ್ಧದ ರಾಜ್ಕೋಟ್ ಪಂದ್ಯದಲ್ಲಿ ರಾಹುಲ್ ಶೂನ್ಯಕ್ಕೆ ಔಟಾಗಿದ್ದರು. ಇಂಗ್ಲೆಂಡ್ ಪ್ರವಾಸದಲ್ಲೂ ಮೊದಲ ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ ರಾಹುಲ್ರಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಮೂಡಿಬಂದಿರಲಿಲ್ಲ. ಆದರೆ ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯದಲ್ಲಿ ಶತಕ ಗಳಿಸಿದ್ದರು. ಆದರೆ ತವರಿನಲ್ಲಿ ರಾಹುಲ್ ಉತ್ತಮ ಪ್ರದರ್ಶನ ನೀಡಲು ವಿಫಲರಾಗಿದ್ದಾರೆ.

ಇನ್ನೊಂದೆಡೆ ರಾಜ್ಕೋಟ್ ನಲ್ಲಿ ಟೆಸ್ಟ್ ಗೆ ಪಾದಾರ್ಪಣೆ ಮಾಡಿದ್ದ ಪೃಥ್ವಿ ಷಾ ಮೊದಲ ಪಂದ್ಯದಲ್ಲೇ ಶತಕ ಗಳಿಸಿ ಮಿಂಚಿದ್ದರು. ಹೈದರಾಬಾದ್ ಟೆಸ್ಟ್ ನಲ್ಲೂ  ಆಕರ್ಷಕ ಆಟವಾಡಿದ ಪೃಥ್ವಿ ಷಾ 70 ರನ್ ಗಳಿಸಿ ಔಟಾದರು.

ರಾಹುಲ್ ಕಳಪೆ ಫಾರ್ಮ್ ಹೈದರಾಬಾದ್ ಟೆಸ್ಟ್ ನಲ್ಲೂ ಮುಂದುವರಿದಿರುವುದರಿಂದ ಕ್ರಿಕೆಟ್ ಅಭಿಮಾನಿಗಳು ಕೆರಳಿ ಕೆಂಡವಾಗಿದ್ದಾರೆ.

 

 

 

 

 

Advertisements

Leave a Reply

%d bloggers like this: