Advertisements

ವಿಡಿಯೋ :ನ್ಯಾಯಾಧೀಶರ ಹೆಂಡತಿ, ಮಗನ ಮೇಲೆ ಗುಂಡು ಹಾರಿಸಿದ ಗನ್ ಮ್ಯಾನ್

ನ್ಯಾಯಾಧೀಶರೊಬ್ಬರ ಹೆಂಡತಿ ಹಾಗೂ ಮಗನ ಅವರ ಸರ್ಕಾರಿ ಗನ್ ಮ್ಯಾನ್ ಗುಂಡು ಹಾರಿಸಿ ಕೊಲ್ಲಲು ಯತ್ನಿಸಿದ ಘಟನೆ ಶನಿವಾರ ಗುರುಗ್ರಾಮದಲ್ಲಿ ನಡೆದಿದೆ.

ಸೆಕ್ಟರ್ 49ರ ಜನನಿಬಿಡ ಮಾರುಕಟ್ಟೆ ಪ್ರದೇಶದಲ್ಲೇ ಗನ್ ಮ್ಯಾನ್ ಮಹಿಪಾಲ್, ಕಾರಿನಲ್ಲಿದ್ದ ನ್ಯಾಯಾಧೀಶರ ಹೆಂಡತಿ ಹಾಗೂ ಮಗನ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಬಳಿಕ ಸದಾರ್ ಪೊಲೀಸ್ ಠಾಣೆಗೆ ತೆರಳಿ ಅಲ್ಲಿಯೂ ಗುಂಡು ಹಾರಿಸಿದ್ದಾನೆ. ನಂತರ ತಪ್ಪಿಸಿಕೊಳ್ಳಲು ಯತ್ನಿಸಿದ ಮಹಿಪಾಲ್ ನಲ್ಲಿ ಠಾಣಾ ಅಧಿಕಾರಿ ಹಿಡಿದು ವಶಕ್ಕೆ ಪಡೆದಿದ್ದಾರೆ.

ಗುಂಡಿನ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡ ತಾಯಿ, ಮಗನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮಗನ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಕಳೆದ ಒಂದೂವರೆ ವರ್ಷದಿಂದ ನ್ಯಾಯಾಧೀಶರ ಗನ್ ಮ್ಯಾನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಮಹಿಪಾಲ್ ಯಾವ ಉದ್ಧೇಶದಿಂದ ಈ ದಾಳಿ ನಡೆಸಿದ್ದಾರೆ ಎಂಬುದರ ಕುರಿತು ತನಿಖೆ ನಡೆಸುತ್ತಿದ್ದಾರೆ.

ಗುಂಡು ಹಾರಿಸಿದ ನಂತರದ ಘಟನೆಗಳನ್ನು ಸ್ಥಳೀಯರು ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದು ವೈರಲ್ ಆಗಿದೆ.

Advertisements

Leave a Reply

%d bloggers like this: