ಫೇಸ್ ಬುಕ್ ನಲ್ಲಿ ಫೋಟೋ ನೋಡಿ ಮುಳ್ಳಯ್ಯನಗಿರಿಗೆ ಹೋದವರ ಕಥೆ ಏನಾಯ್ತು..?

ಮುಳ್ಳಯ್ಯನಗಿರಿ ಮತ್ತು ಬಾಬಾ ಬುಡನ್ ಗಿರಿ ಬೆಟ್ಟ ಪ್ರದೇಶದಲ್ಲಿ ಪ್ರತಿ 12 ವರ್ಷಗಳಿಗೊಮ್ಮೆ ಒಂದು ಹೂವು ಅರಳುತ್ತದೆ,  ಪ್ರಕೃತಿಪ್ರಿಯರನ್ನು ಕಣ್ಣರಳಿಸಿ ಬರಸೆಳೆಯುವ ಈ ಹೂವಿಗೆ ಕುರಿಂಜಿ ಅಥವಾ ನೀಲಕುರಿಂಜಿ ಹೂವು ಎಂದು ಹೆಸರು.ಈ ವರ್ಷ ಹೂವು ಅರಳದೆ ಇರುವುದು ಪ್ರವಾಸಿಗರಿಗೆ ನಿರಾಶೆಯನ್ನುಂಟುಮಾಡಿದೆ.

ಈ ಹಿಂದೆ 2006ರಲ್ಲಿ ಈ ಹೂವು ಅರಳಿ ನಿಂತಾಗ ಇಡೀ ಬೆಟ್ಟ ನೀಲಿ ಮತ್ತು ನೇರಳೆ ಬಣ್ಣಕ್ಕೆ ತಿರುಗಿತ್ತು. ಹೀಗಾಗಿ ಈ ವರ್ಷ ಅಂದರೆ 2018ರಲ್ಲಿ ಹೂ ಅರಳುತ್ತದೆ ಎಂದು ಪ್ರಕೃತಿ ಪ್ರಿಯರು ಕಾದಿದ್ದರು.

ಈ ನಡುವೆ ಕಳೆದ ಬಾರಿಯ ಫೋಟೋ ಗಳನ್ನು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದರು.

ಇದನ್ನು ನಂಬಿಕೊಂಡು ದೂರದೂರುಗಳಿಂದ ವಾರಾಂತ್ಯಗಳಲ್ಲಿ ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ, ಬಾಬಾ ಬುಡನ್ ಗಿರಿ ಮತ್ತು ಸೀತಾಲಯನಗಿರಿಗೆ ಹೋದವರಿಗೆ ಸಿಕ್ಕಿದ್ದು ನೀಲಿ ಹೂವಲ್ಲ ನಿರಾಶೆ.

ಅದ್ಯಾಕೋ ಈ ಬಾರಿ ನೀಲಕುರಿಂಜಿಯ ಸುಳಿವಿಲ್ಲ. ಆದರೆ ಮುಂದಿನ ತಿಂಗಳು ಅರಳುವ ಸಾಧ್ಯತೆ ಇದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: