Advertisements

#MeToo:ಲೈಂಗಿಕ ಕಿರುಕುಳ ಆರೋಪಕ್ಕೆ ರಘು ದೀಕ್ಷಿತ್ ಪ್ರತಿಕ್ರಿಯೆ

ತನ್ನ ಮೇಲೆ ಬಂದಿರುವ ಲೈಂಗಿಕ ಕಿರುಕುಳದ ಆರೋಪಕ್ಕೆ ರಘು ದೀಕ್ಷಿತ್ ಪ್ರತಿಕ್ರಿಯಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಸಂಬಂಧ ಬರೆದುಕೊಂಡಿರುವ ಅವರು,

“ನನ್ನ ವಿರುದ್ಧ ಆರೋಪಿಸಿರುವ ಅನಾಮಿಕರಿಗೆ ನನ್ನ ಪ್ರತಿಕ್ರಿಯೆ ಇಲ್ಲಿದೆ. ನನ್ನ ಕಡೆಯಿಂದ ಏನೇ ತಪ್ಪಾಗಿದ್ದರೂ ಕ್ಷಮೆ ಇರಲಿ. ನನ್ನ ಬಗ್ಗೆ ನನಗೆ ಸಂಪೂರ್ಣ ನಂಬಿಕೆ ಇದೆ. ನಾನು ಚಿನ್ಮಯಿ ವಿರುದ್ಧ ಆಕ್ರಮಣ ಮಾಡಲು ಹೋಗಿಲ್ಲ. ನಾನು ಪ್ರಾಮಾಣಿಕವಾಗಿದ್ದೇನೆ ಎಂಬರ್ಥದಲ್ಲಿ ಸುದೀರ್ಘ ಪತ್ರ ಬರೆದಿದ್ದಾರೆ.

ನನ್ನ ವಿರುದ್ಧ ಮಾಡಿರುವ ಆರೋಪಗಳ ಬಗ್ಗೆ ನನಗೆ “ತೀವ್ರ ಅರಿವಿದೆ”. ಇದೊಂದು ತಿಳಿವಳಿಕೆಯಿಲ್ಲದ ತಪ್ಪು ನಿರ್ಣಯ.

ಪರಭಕ್ಷಕ ಪಟ್ಟ – ರಘು ದೀಕ್ಷಿತ್ ವಿರುದ್ಧ ತೂರಿ ಬಂತು #MeToo ಅಭಿಯಾನ

ಪ್ರತಿಯೊಬ್ಬರೂ ಚಿನ್ಮಯಿ ವಿರುದ್ಧ ದಾಳಿ ನಡೆಸುತ್ತಿದ್ದಾರೆ. ದಯವಿಟ್ಟು ನಿಲ್ಲಿಸಿ. ಚಿನ್ಮಯಿ ಒಳ್ಳೆಯವರು. ಬೇರೆಯವರ ಪರ ಅವರು ಧ್ವನಿ ಎತ್ತುತ್ತಿದ್ದಾರೆ. ಈ ಹಿಂದೆ ಅವರ ಜೊತೆ ಮಾತನಾಡಿದಾಗ ತುಂಬಾ ಚೆನ್ನಾಗಿ ಮಾತನಾಡಿದ್ದರು.

ಹೈದರಾಬಾದ್‌ನಲ್ಲಿ ಕಾನ್ಸರ್ಟ್‌ನಲ್ಲಿ ನನ್ನ ಜೊತೆ ಪಾಲ್ಗೊಂಡಿದ್ದರು. ಅವರ ಮನೆಗೆ ಊಟಕ್ಕೂ ಆಹ್ವಾನಿಸಿದ್ದರು.
ಚಿನ್ಮಯಿ ಹೇಳಿರುವ ವ್ಯಕ್ತಿಗೆ ನಾನು ಈ ಹಿಂದೆಯೇ ಅವರು ಬಯಸಿದಂತೆ ಸಾರ್ವಜನಿಕವಾಗಿ ಮಾತ್ರವಲ್ಲದೆ, ಖಾಸಗಿಯಾಗಿ ಕ್ಷಮೆ ಕೋರಿದ್ದೆ. ಮತ್ತೊಮ್ಮೆ ಕೇಳುತ್ತೇನೆ.

ಆ ಘಟನೆ ಹೇಗೋ ನಡೆದು ಹೋಯಿತು. ಆದರೆ ಅವರು ವಿವರಿಸಿದಂತೆ ಅಲ್ಲ. ರೆಕಾರ್ಡಿಂಗ್ ಬಳಿಕ ಒಂದು ಹಗ್ ಕೊಟ್ಟಿದ್ದೆ. ಅದೇ ರೀತಿ ಚುಂಬಿಸಲು ಪ್ರಯತ್ನಿಸಿದೆ. ಆದರೆ ಅವರು ತಡೆದ ಕಾರಣ ಆ ರೀತಿ ಮಾಡಲಾಗಲಿಲ್ಲ. ಬಳಿಕ ನಾನು ಸ್ಟುಡಿಯೋದಿಂದ ಹೊರಟು ಹೋದೆ. ನನ್ನ ವರ್ತನೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಇದಕ್ಕೆ ನಾನು ಕ್ಷಮೆ ಕೋರಿದ್ದೆ ಎಂದು ರಘು ದೀಕ್ಷಿತ್ ಹೇಳಿದ್ದಾರೆ.

 

Advertisements

Leave a Reply

%d bloggers like this: