Advertisements

ಪರಭಕ್ಷಕ ಪಟ್ಟ – ರಘು ದೀಕ್ಷಿತ್ ವಿರುದ್ಧ ತೂರಿ ಬಂತು #MeToo ಅಭಿಯಾನ

ಬಾಲಿವುಡ್ ನಟಿ ತನುಶ್ರಿ ದತ್ತ ಲೈಂಗಿಕಿ ಕಿರುಕುಳ ಆರೋಪದ ನಂತರ ಆರಂಭವಾದ #MeToo ಅಭಿಯಾನ ಈಗ ಚಂದನವನದಲ್ಲಿ ಕಿಡಿ ಹೊತ್ತಿಸಿದೆ., ಖ್ಯಾತ ತಮಿಳು ಗಾಯಕಿ ಚಿನ್ಮಯಿ ಶ್ರೀಪಾದ ಅವರು ಗಾಯಕ, ಸಂಗೀತ ನಿರ್ದೇಶಕ ರಘು ದೀಕ್ಷಿತ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಇಬ್ಬರು ಅನಾಮಿಕ ಮಹಿಳೆಯರು ರಘು ದೀಕ್ಷಿತ್ ವಿರುದ್ಧ ಮಾಡಿದ ಆರೋಪಗಳ ಎರಡು ಪತ್ರಗಳನ್ನು ಚಿನ್ಮಯಿ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ರಘು ದೀಕ್ಷಿತ್ ಪರಭಕ್ಷಕರಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಕೆಲವು ವರ್ಷಗಳ ಹಿಂದೆ ರೆಕಾರ್ಡಿಂಗ್‌ಗಾಗಿ ಅವರ ಸ್ಟುಡಿಯೋಗೆ ಆಹ್ವಾನಿಸಲಾಗಿತ್ತು. ಅವರ ಪತ್ನಿಗೆ ಹುಷಾರಿಲ್ಲ ಎಂದಿದ್ದರು. (ಮದುವೆಯಾದ ಎಲ್ಲಾ ಪುರುಷರಂತೆ). ಅವರ ಪತ್ನಿ ಒಳ್ಳೆಯರು. ಅವರು ಬಂದ ಕಾರಣ ರೆಕಾರ್ಡಿಂಗ್ ಕೆಲಸ ನಡೆಯಲಿಲ್ಲ.

ಕೆಲಸಕ್ಕಾಗಿ ಬಂದಿದ್ದೇನೆ ಎಂದು ಪತ್ನಿ ಬಳಿ ನಟಿಸುವಂತೆ ತಿಳಿಸಿದರು. ಈ ಬಗ್ಗೆ ಅವರ ಜತೆ ವಾಗ್ವಾದ ನಡೆಯಿತು. ಬಳಿಕ ಅವರ ಪತ್ನಿ ಬಂದು ಚೆನ್ನಾಗಿಯೇ ಮಾತನಾಡಿಕೊಂಡು ಹೊರಟು ಹೋದರು. ರೆಕಾರ್ಡಿಂಗ್ ಮುಗಿದ ಬಳಿಕ ಚೆಕ್‌ಗೆ ಸಹಿ ಹಾಕುವ ಸಂದರ್ಭದಲ್ಲಿ ನನ್ನನ್ನು ಹತ್ತಿರಕ್ಕೆ ಬರಸೆಳೆದು ಚುಂಬಿಸುವಂತೆ ಕೇಳಿದರು. ಬಳಿಕ ಬಾಗಿಲ ಬಳಿ ನನ್ನನ್ನು ಎತ್ತಿಕೊಳ್ಳಲು ಪ್ರಯತ್ನಿಸಿದರು, ನಾನಾಗ ಕೂಗುತ್ತಾ ಕೆಳಗೆ ಓಡಿ ಹೋದೆ. ಬಹಳಷ್ಟು ಹೆಣ್ಣುಮಕ್ಕಳು ಅವರ ಕೈಯಲ್ಲಿ ಇದೇ ರೀತಿ ಅನುಭವಿಸಿರುತ್ತಾರೆ ಎಂದು ನನಗೆ ಗೊತ್ತು. ಹೇಸಿಗೆ ಆಗುತ್ತದೆ. ನನ್ನ ಹೆಸರನ್ನು ಬಹಿರಂಗಪಡಿಸಲು ಇಚ್ಚಿಸಲ್ಲ. ನಿಜವಾಗಿ ನನಗೆ ಆ ಗಟ್ಸ್ ಇಲ್ಲ, ನಾನಿನ್ನೂ ಸಂಗೀತದಲ್ಲಿ ನೆಲೆನಿಲ್ಲುತ್ತಿದ್ದೇನೆ” ಎಂದು ಅನಾಮಿಕ ಮಹಿಳೆ ಬರೆದುಕೊಂಡಿದ್ದಾರೆ.

ಮತ್ತೊಂದು ಪತ್ರದಲ್ಲಿ “ಹೊಸ ಟ್ಯೂನ್ ಬಗ್ಗೆ ಅಭಿಪ್ರಾಯ ಕೇಳಲು ರಘು ದೀಕ್ಷಿತ್ ನನ್ನನ್ನು ಮನೆಗೆ ಆಹ್ವಾನಿಸಿದ್ದರು. ಬಳಿಕ ತನ್ನ ತೊಡೆ ಮೇಲೆ ಕೂರುವಂತೆ ರಘು ದೀಕ್ಷಿತ್ ಹೇಳಿದ್ದರು. ಇದರಿಂದ ಟ್ಯೂನ್‌ಗಳನ್ನು ಹತ್ತಿರದಿಂದ ಕೇಳಲು ಸಾಧ್ಯವಾಗುತ್ತದೆ” ಎಂದಿದ್ದರಂತೆ. ಆದರೆ ಆ ಮಹಿಳೆ ಅದಕ್ಕೆ ಅಂಗೀಕರಿಸಲಿಲ್ಲ. ಬಳಿಕ ಅವರ ಗೆಳೆಯರು ಬಂದರು ಆಗ ಅವರಿಗೆ ಆಕೆ ಪತ್ರಕರ್ತೆ ಎಂದು ಪರಿಚಯ ಮಾಡಿಸಿದ್ದರು ಎಂದಿದ್ದಾರೆ ಚಿನ್ಮಯಿ.

Advertisements

One Comment on “ಪರಭಕ್ಷಕ ಪಟ್ಟ – ರಘು ದೀಕ್ಷಿತ್ ವಿರುದ್ಧ ತೂರಿ ಬಂತು #MeToo ಅಭಿಯಾನ

  1. Pingback: #MeToo:ಲೈಂಗಿಕ ಕಿರುಕುಳ ಆರೋಪಕ್ಕೆ ರಘು ದೀಕ್ಷಿತ್ ಪ್ರತಿಕ್ರಿಯೆ – torrentspree

Leave a Reply

%d bloggers like this: