Advertisements

ಸೆಕ್ಸ್ ಗೆ ಒಪ್ಪಿಲ್ಲ ಎಂದು 13ರ ಬಾಲಕನಿಗೆ ಬರೆ ಇಟ್ಟ ಆಂಟಿ

ಲೈಂಗಿಕ ಕ್ರಿಯೆಗೆ ಸಹಕರಿಸಲಿಲ್ಲ ಅನ್ನುವ ಕಾರಣಕ್ಕೆ 13 ವರ್ಷದ ಬಾಲಕನ ಮರ್ಮಾಂಗಕ್ಕೆ ಪಕದ್ಮನೆ ಆಂಟಿಯೊಬ್ಬಳು ಇಕ್ಕಳದಿಂದ ಬರೆ ಹಾಕಿರುವ ಘಟನೆ ದೆಹಲಿಯ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ.

ಕಳೆದ ಶುಕ್ರವಾರ ಮಹಿಳೆ ಪಕ್ಕದ ಮನೆಯ ಬಾಲಕನನ್ನು ಮನೆಗೆ ಕರೆದಿದ್ದಾಳೆ. ಈ ವೇಳೆ ಮನೆಯಲ್ಲಿ ಒಬ್ಬಳೇ ಇದ್ದವಳು, ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲು ಮುಂದಾಗಿದ್ದಾಳೆ.

ಆದ್ರೆ ಆಂಟಿಯ ಕರೆಗೆ ಬಾಲಕ ಒಪ್ಪಿಕೊಳ್ಳಲಿಲ್ಲ. ಆದರೂ ಲೈಂಗಿಕ ದೌರ್ಜನ್ಯ ನಡೆಸಲು ಮುಂದಾಗಿದ್ದಾಳೆ. ಬಾಲಕ ವಿರೋಧ ವ್ಯಕ್ತಪಡಿಸಿದ್ದನ್ನು ಸಹಿಸದ ಮಹಿಳೆ ಸಿಟ್ಟುಗೊಂಡು ಬಾಲಕನ ಮರ್ಮಾಂಗಕ್ಕೆ ಬಿಸಿ ಇಕ್ಕಳದಿಂದ ಬರೆ ಕೊಟ್ಟಿದ್ದಾಳೆ.

ಇದೀಗ ಬಾಲಕನ ಪೋಷಕರು ಮಹಿಳೆ ವಿರುದ್ಧ ಗ್ರೇಟರ್ ನೋಯ್ಡಾದ ಬದಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮಹಿಳೆ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿ ನಾಪತ್ತೆಯಾಗಿದ್ದಾಳೆ.

ಅಂದ ಹಾಗೇ ಈ ಘಟನೆ ಚಾಪ್ರೌಲ ಎಂಬ ಗ್ರಾಮದಲ್ಲಿ ನಡೆದಿದೆ.ಆದರೆ ಶುಕ್ರವಾರ ಘಟನೆ ನಡೆದರೂ ಮಂಗಳವಾರ ದೂರು ದಾಖಲಿಸಿದ್ದು ಯಾಕೆ ಅನ್ನುವ ಪ್ರಶ್ನೆ ಉದ್ಭವಿಸಿದೆ. ಹೀಗಾಗಿ ಮಹಿಳೆಗೂ,ಬಾಲಕನ ಪೋಷಕರ ನಡುವೆ ವೈಮನಸ್ಸು ಇತ್ತಾ ಅನ್ನುವ ಕುರಿತಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Advertisements

Leave a Reply

%d bloggers like this: