Peruser!!! It is a trendy supermarket: read articles on day to day basis in English & Kannada. Read,Share & Care
ವಿಜಯ ದೇವರಕೊಂಡ ನಾಯಕ ನಟನಾಗಿದ್ದ ಗೀತಾ ಗೋವಿಂದಂ ಚಿತ್ರದ ಶೂಟಿಂಗ್ ಸೆಟ್ನಲ್ಲಿಯೇ ನಟಿ ರಶ್ಮಿಕಾ ಕಣ್ಣೀರು ಹಾಕಿದ್ದಾರೆ ಅನ್ನುವ ಸುದ್ದಿ ತಡವಾಗಿ ಬೆಳಕಿಗೆ ಬಂದಿದೆ. ರಕ್ಷಿತ್ ನೆನಪಾಯ್ತು ಅಂದುಕೊಳ್ಳಬೇಡಿ.
ಅವತ್ತು ಎಂದಿನಂತೆ ರಶ್ಮಿಕಾ ಸಿನಿಮಾ ಸೆಟ್ಗೆ ಹೋಗಿದ್ದಾರೆ. ಶೂಟಿಂಗ್ ಆರಂಭವಾಗಿ ಇನ್ನೂ ಒಂದು ವಾರವಷ್ಟೇ ಆಗಿತ್ತು. ಬೆಳಗ್ಗೆ 6 ಗಂಟೆಗೆ ಸೆಟ್ಗೆ ಹೋಗಿ, ವಧುವಿನ ಕಾಸ್ಟ್ಯೂಮ್ ಹಾಕಿಕೊಳ್ಳಲು ರಶ್ಮಿಕಾ ಸಿದ್ದತೆ ಮಾಡಿಕೊಂಡಿದ್ದರು. ಸೆಟ್ಗೆ ಹೋದ ತಕ್ಷಣ ಎಲ್ಲರನ್ನೂ ಮಾತನಾಡಿ ವಿಶ್ ಮಾಡುವುದು ರಶ್ಮಿಕಾ ಅಭ್ಯಾಸ. ಆ ದಿನವೂ ಹಾಗೆಯೇ ಮಾಡಿದ್ದಾರೆ. ಆದರೆ ಯಾರು ರಶ್ಮಿಕಾ ಕಡೆಗೆ ಮುಖ ತಿರುಗಿಸಲಿಲ್ಲ. ನಿತ್ಯ ನಗುನಗ್ತಾ ಮಾತಾಡ್ತಾ ಇದ್ದವರೆಲ್ಲ ಗಂಟು ಮುಖ ಹಾಕಿಕೊಂಡು ಕೂತಿದ್ದರು. ಇದರಿಂದ ಆಘಾತಗೊಂಡ ರಶ್ಮಿಕಾ, Some thing Wrong ಎಂದು ನಿರ್ದೇಶಕ ಪರಶುರಾಮ್ ಬಳಿ ಓಡಿದ್ದಾರೆ.
ರಶ್ಮಿಕಾ ಬೆನ್ನಲ್ಲೇ…ತಮಿಳಿನತ್ತ ವಲಸೆ ಹೊರಟ ಸಂಯುಕ್ತಾ ಹೆಗಡೆ
ಏನಾಯ್ತು ಸರ್ ಅಂದ್ರೆ ಸಿಕ್ಕಿದ್ದು ಒನ್ ವರ್ಡ್ ಆನ್ಸರ್ ಮಾಡಿದರು. ವಿಷಯ ಏನಾಗಿದೆ ಎಂದು ತಿಳಿದುಕೊಳ್ಳಲು ಮೇಕಪ್ ಮೆನ್ಗೆ ಕೇಳಿದ್ದಾರೆ. ಏನಾಗಿದೆ ಇಲ್ಲಿ ಎಂದು ಆತನೂ ಹೇಳಲಿಲ್ಲ. ಗೊತ್ತಿಲ್ಲ ಮೇಡಂ ಎಂದಷ್ಟೇ ಹೇಳಿದ್ದಾನೆ.
ರಶ್ಮಿಕಾ ಅವರಿಗೆ ನಾನು ಏನೋ ತಪ್ಪು ಮಾಡಿದ್ನಾ ಅನ್ನಿಸೋಕೆ ಶುರುವಾಗಿದೆ. ಮೂಡ್ ಫುಲ್ ಅಪ್ಸೆಟ್ ಆಗಿದೆ. ಮೇಕಪ್ ಮುಗಿಸಿ ಹೊರಬಂದರೂ ಯಾರೊಬ್ಬರೂ ರಶ್ಮಿಕಾ ಜೊತೆ ಮಾತನಾಡಲಿಲ್ಲ.
ರ & ರ ಬ್ರೇಕಪ್ ಸ್ಟೋರಿಗೆ ತಾರ್ಕಿಕ ಅಂತ್ಯ….
ಆಮೇಲೆ ಏನಾಯ್ತು ಅನ್ನುವುದನ್ನು ರಶ್ಮಿಕಾ ಅವರ ಮಾತುಗಳಲ್ಲೇ ಓದಿ, ಮತ್ತೆ ನಿರ್ದೇಶಕರ ಬಳಿ ಹೋಗಿ, ‘ಸರ್, ನನಗೆ ಮೂಡ್ ಇಲ್ಲ. ಹೊರಡುತ್ತೇನೆ ‘ ಎಂದರೆ ಅವರು ಸೀರಿಯಸ್ ಆಗಿ ನನ್ನ ಮುಖ ನೋಡಿದ್ರು. ಕ್ಯಾರಾವನ್ಗೆ ಹೋಗಿ ಬೇಸರದಲ್ಲಿ ಕುಳಿತುಬಿಟ್ಟೆ. ಆಮೇಲೆ ವಿಜಯ್ ದೇವರಕೊಂಡ ಬಂದು ಇದೆಲ್ಲವೂ ಪಕ್ಕಾ ಪ್ಲ್ಯಾನ್. ನಿಮ್ಮನ್ನು ಬಕ್ರಾ ಮಾಡಲು ಮಾಡಿದ ಐಡಿಯಾ ಎಂದು ಹೇಳಿದರು. ನನಗೆ ತುಂಬಾ ಅಳು ಬಂದುಬಿಡ್ತು. ಜೋರಾಗಿ ಬಿಕ್ಕಿ ಬಿಕ್ಕಿ ಅತ್ತುಬಿಟ್ಟೆ’ ಎಂದು ಆ ಸಂದರ್ಭವನ್ನು ವಿವರಿಸಿದ್ದಾರೆ. ರಶ್ಮಿಕಾ ಮಂದಣ್ಣರನ್ನು ಸೆಟ್ನಲ್ಲಿ ಯಾರೊಬ್ಬರೂ 15 ನಿಮಿಷ ಮಾತನಾಡಿಸದಿದ್ದರೆ ಅವರು ಅತ್ತು ಬಿಡುತ್ತಾರೆ ಎಂದು ನಿರ್ದೇಶಕ ಪರುಶುರಾಮ್ ಅವರಿಗೆ ಯಾರೋ ಹೇಳಿದ್ದರಂತೆ. ಅದನ್ನು ಟೆಸ್ಟ್ ಮಾಡಲೆಂದು ಇಡೀ ಚಿತ್ರತಂಡ ಆ ಐಡಿಯಾ ಮಾಡಿತ್ತು ಅನ್ನುವುದು ಆಮೇಲೆ ಗೊತ್ತಾಗಿದೆ.