Advertisements

ಏನಿದು ಪ್ರೇಮ್…. ಮೊದಲ ವಾರ ದಿ ವಿಲನ್ ಪ್ರೇಕ್ಷಕರಿಗೆ ಬರೆ….

ಶಿವಣ್ಣ ಮತ್ತು ಕಿಚ್ಚ ಸುದೀಪ್ ಜೋಡಿಯ ದಿ ವಿಲನ್ ಇದೇ ಅಕ್ಟೋಬರ್ 18ಕ್ಕೆ ಬಿಡುಗಡೆಯಾಗುತ್ತಿದೆ. 11 ರಿಂದ ಟಿಕೆಟ್ ಬುಕ್ಕಿಂಗ್ ಕೂಡಾ ಪ್ರಾರಂಭಗೊಳ್ಳಲಿದೆ.

ಈ ನಡುವೆ ನಿರ್ದೇಶಕ ಪ್ರೇಮ್ ಬಿಡುಗಡೆಯ ದಿನವನ್ನು ಕಾತುರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿ ಕೊಟ್ಟಿದ್ದಾರೆ.
ಈಗಾಗಲೇ ವಿಲನ್ ಟೀಂ ಮಲ್ಟಿಪ್ಲೆಕ್ಸ್ ಮಾಲೀಕರೊಂದಿಗೆ ಹೆಚ್ಚುವರಿ ಲಾಭಾಂಶಕ್ಕೆ ಮನವಿ ಮಾಡಿಕೊಂಡಿದ್ದು, 60:40 ಲಾಭಾಂಶಕ್ಕೆ ಒಪ್ಪಂದವಾಗಿದೆ.

1

ವಿಲನ್ ನಿರ್ಮಾಪಕರಿಗೆ ಶೇ.60ರಷ್ಟು ಪಾಲು ನೀಡಲು ಮಲ್ಟಿಪ್ಲೆಕ್ಸ್ ಮಾಲೀಕರು ಬಹುತೇಕ ಒಪ್ಪಿಕೊಂಡಿದ್ದಾರೆ. ಅಷ್ಟೇ ಅಲ್ಲ, ಚಿತ್ರದ ಅವಧಿ 3 ಗಂಟೆ ಇರುವುದರಿಂದ, ಜಾಹೀರಾತು ಅವಧಿ ಕಡಿಮೆ ಮಾಡುವಂತೆಯೂ ಚಿತ್ರತಂಡ ಮನವಿ ಮಾಡಿದೆ. ಸಾಮಾನ್ಯವಾಗಿ ಮಲ್ಟಿಪ್ಲೆಕ್ಸ್ ಗಳಲ್ಲಿ 15ರಿಂದ 20 ನಿಮಿಷ ಜಾಹೀರಾತುಗಳಿರುತ್ತದೆ.

ಮಾತ್ರವಲ್ಲದೆ ನಿರ್ಮಾಪಕರಿಗೆ ಅತೀ ಹೆಚ್ಚಿನ ಖರ್ಚು ವೆಚ್ಚವಾಗಿದೆ. ಇದನ್ನು ರಿಕವರಿ ಮಾಡುವ ಸಲುವಾಗಿ ಬೆಂಗಳೂರಿನ ಸಿಂಗಲ್ ಸ್ಕ್ರೀನ್ ಥಿಯೇಟರ್ ಗಳಲ್ಲಿ ದರ ಏರಿಸಲು ನಿರ್ಧರಿಸಲಾಗಿದೆ. ಹಾಗಂತ ಇದು ಚಿತ್ರ ಓಡುವ ತನಕ ಇರೋದಿಲ್ಲ.

2

ಬದಲಾಗಿ ಕೇವಲ ಒಂದು ವಾರ ಮಾತ್ರ ಈ ಹೆಚ್ಚುವರಿ ದರವಿರುತ್ತದೆ. ಎರಡನೇ ವಾರದಿಂದ ಎಲ್ಲವೂ ಯಥಾ ಸ್ಥಿತಿಗೆ ಬರಲಿದೆ.

ಇದನ್ನೂ ಓದಿ : ಆಮಿ ಜಾಕ್ಸನ್ ವಿರುದ್ಧ ಗರಂ ಆಗಿದ್ದಾರಂತೆ ಪ್ರೇಮ್…

ಹೀಗಾಗಿ ದಿ ವಿಲನ್ ಟಿಕೆಟ್ ದರ ಮೊದಲ ವಾರದಲ್ಲಿ 400 ರೂ. 500 ರೂ. 1000 ರೂಪಾಯಿಯ ಗಡಿ ದಾಟಲಿದೆ.
ದೊಡ್ಡ ಬಜೆಟ್‍ನಲ್ಲಿ ಸಿನಿಮಾ ನಿರ್ಮಾಣವಾಗಿರುವುದು ಕೂಡಾ ಟಿಕೆಟ್ ದರ ಹೆಚ್ಚಳ ಅನಿವಾರ್ಯ. ಮಲ್ಟಿಫೆಕ್ಸ್ ಗಳಲ್ಲಿ 20 ರೂಪಾಯಿ ನೀರಿನ ಬಾಟಲಿಗೆ 50 ರೂಪಾಯಿ ಕೊಟ್ಟು ಕುಡಿಯುವ ಜನ ನಾವು. ಅನ್ಯಾಯವಾಗಿ ಕಾಸು ಕಿತ್ತುಕೊಳ್ಳುತ್ತಿದ್ದಾರೆ ಎಂದು ಗೊತ್ತಿದ್ದರೂ ಸೈಲೆಂಟ್ ಆಗಿಲ್ವ.

         ಇದನ್ನೂ ಓದಿ : ದಿ V/S ದಿ : ವಿಲನ್ ಜೊತೆಗೆ ಟೆರರಿಸ್ಟ್ : ಉಭಯ ಚಕ್ರವರ್ತಿಗಳ ನಡುವೆ ರಾಗಿಣಿ ಗುದ್ದಾಟ

3

ಇನ್ನು ಇಂತಹುದೊಂದು ಅದ್ಭುತ ಹಾಗೂ ಅದ್ದೂರಿ ಚಿತ್ರಕ್ಕೆ ಒಂದಿಷ್ಟು ಹೆಚ್ಚು ಕಾಸು ಕೊಟ್ಟು ನೋಡಿದರೆ ಕಳೆದುಕೊಳ್ಳುವುದೇನಿದೆ. ಉತ್ತಮ ಚಿತ್ರಕ್ಕೆ ಸದಾ ಪ್ರೋತ್ಸಾಹ ಇರಲೇಬೇಕಲ್ವ. ಹಾಗೂ ದರ ದುಬಾರಿ ಆಯ್ತು ಅನ್ನುವುದಾದರೆ ಎರಡನೇ ವಾರ ಹೋಗಿ ಚಿತ್ರ ನೋಡಿದರಾಯ್ತು. ಹಾಗಂತ ಇದು ಮೊದಲೇನೂ ಅಲ್ಲ. ಹಿಂದಿ, ತೆಲುಗು, ತಮಿಳು ಚಿತ್ರಗಳು ರಿಲೀಸ್ ಆದಾಗ ಮೊದಲ ವಾರ ಟಿಕೆಟ್ ದರ ಹೆಚ್ಚಿಸುವ ಸಂಪ್ರದಾಯ ತುಂಬಾ ವರ್ಷಗಳಿಂದ ಇದೆ.

Advertisements

Leave a Reply

%d bloggers like this: