Advertisements

ರ & ರ ಬ್ರೇಕಪ್ ಸ್ಟೋರಿಗೆ ತಾರ್ಕಿಕ ಅಂತ್ಯ….

ಚಂದನವನದಲ್ಲಿ ಹಾಟ್ ಟಾಪಿಕ್ ಅನ್ನಿಸಿಕೊಂಡಿದ್ದ ರಶ್ಮಿಕಾ ಮಂದಣ್ಣ ಹಾಗೂ ರಕ್ಷಿತ್ ಶೆಟ್ಟಿ ಬ್ರೇಕಪ್ ಸ್ಟೋರಿಗೆ ತೆರೆ ಬೀಳುವ ಲಕ್ಷಣ ಗೋಚರಿಸುತ್ತಿದೆ. ಇತ್ತೀಚೆಗೆ ರಕ್ಷಿತ್ ಹಾಕಿದ್ದ ಫೇಸ್ ಬುಕ್ ಸ್ಟೇಟಸ್ ಅಡ್ಡಗೋಡೆ ಮೇಲೆ ದೀಪವಿಟ್ಟ ಹಾಗಿತ್ತು. ಜೊತೆಗೆ ರಶ್ಮಿಕಾ ಸ್ಟೇಟಸ್ ಕೂಡಾ ಕ್ಲ್ಯಾರಿಟಿ ಕೊಟ್ಟಿರಲಿಲ್ಲ.

ಈ ನಡುವೆ ಇಷ್ಟು ದಿನ ಇದು ತನ್ನ ಖಾಸಗಿ ವಿಚಾರ ಎಂದಿದ್ದ ರಶ್ಮಿಕಾ ಮೌನ ಮುರಿದಿದ್ದಾರೆ. ತೆಲುಗು ದೈನಿಕ ‘ಈನಾಡು’ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ರಶ್ಮಿಕಾ ತನ್ನ ಪ್ರೀತಿ, ಬ್ರೇಕಪ್ ಬಗ್ಗೆ ಮಾತನಾಡಿದ್ದಾರೆ.

“ಅಪ್ಪ ಅಮ್ಮನ ಜತೆಗೆ ನನಗೆ ಸಲುಗೆ ಜಾಸ್ತಿ. ನನ್ನ ಬಗ್ಗೆ ಅವರಿಗೆ ಭರವಸೆ ಜಾಸ್ತಿ. ಅಮ್ಮನನ್ನು ಫ್ರೆಂಡ್ ತರಹ ತಮಾಷೆಗೆ ಆಟ ಆಡಿಸುತ್ತಿರುತ್ತೇನೆ. ನನ್ನ ಫೀಲಿಂಗ್ಸ್ ಎಲ್ಲವನ್ನೂ ಹೇಳಿಕೊಳ್ಳುತ್ತೇನೆ. ಎಲ್ಲರಿಗೂ ಬಾಯ್‌ಫ್ರೆಂಡ್ಸ್ ಇರುತ್ತಾರೆ. ನನಗ್ಯಾಕೆ ಇಲ್ಲಮ್ಮಾ. ನನಗೂ ಬಾಯ್‍ಫ್ರೆಂಡ್ ಬೇಕು” ಎಂದು ಅಮ್ಮನನ್ನು ಬಹಳಷ್ಟು ಸಲ ಕೇಳಿದ್ದೇನೆ.

ಈ ಹುಡುಗ ಚೆನ್ನಾಗಿದ್ದಾನೆ, ಆ ಹುಡುಗ ಚೆನ್ನಾಗಿದ್ದಾನೆ ಎಂದು ಸಾಕಷ್ಟು ಮಂದಿಯನ್ನು ತೋರಿಸುತ್ತಿದ್ದೆ. ಅಮ್ಮನೂ ತಮಾಷೆಯಾಗಿಯೇ ತೆಗೆದುಕೊಳ್ಳುತ್ತಿದ್ದರು. ಕಿರಿಕ್ ಪಾರ್ಟಿ ಸಮಯದಲ್ಲಿ ರಕ್ಷಿತ್ ಶೆಟ್ಟಿ ಬಗ್ಗೆ ಅಭಿಮಾನ ಉಂಟಾಯಿತು. ಅದು ಪ್ರೀತಿಯಾಗಿ ಬದಲಾಯಿತು. ಇದೇ ಸಂಗತಿಯನ್ನು ಮೊದಲು ಅಮ್ಮನ ಬಳಿ ಹೇಳಿದೆ. “ನಾನು ತೆಗೆದುಕೊಂಡದ್ದು ಸರಿಯಾದ ನಿರ್ಧಾರವೇ” ಎಂದು ಕೇಳಿದೆ. ಯಾಕೆಂದರೆ ಆ ವಯಸ್ಸಲ್ಲಿ ನಮ್ಮ ಕಣ್ಣಿಗೆ ಎಲ್ಲರೂ ಒಳ್ಳೆಯವರಾಗಿಯೇ ಕಾಣಿಸುತ್ತಾರೆ. ಆದರೆ ಅಪ್ಪ ಅಮ್ಮ ಮಾತ್ರ ನಮಗೆ ಯಾವುದು ಒಳ್ಳೆಯದು ಎಂದು ಆಲೋಚಿಸುತ್ತಾರೆ. “ನಿನ್ನಿಷ್ಟ ನಿನಗೇನು ಅನ್ನಿಸಿದರೆ ಅದನ್ನು ಮಾಡು” ಎಂದು ಆಗ ಅಮ್ಮ ನನ್ನ ಅಭಿಪ್ರಾಯಕ್ಕೆ ಬೆಲೆ ಕೊಟ್ಟರು.

ಆದರೆ ಆ ಲವ್ ಸ್ಟೋರಿ ನಿಶ್ಚಿತಾರ್ಥದಲ್ಲೇ ನಿಂತು ಹೋಯಿತು. ಎಲ್ಲವೂ ಚೆನ್ನಾಗಿದೆ ಎಂದುಕೊಳ್ಳುವಾಗ ಒಂದು ಸಂಬಂಧವನ್ನು ಮುಂದೆ ಕೊಂಡೊಯ್ಯಬಹುದು. ಭಿನ್ನಾಭಿಪ್ರಾಯಗಳು, ಓರೆಕೋರೆಗಳು ಕಾಣಿಸಿದರೆ… ಅದನ್ನು ಅಲ್ಲೇ ಬಿಟ್ಟುಬಿಡುವುದು ಒಳ್ಳೆಯದು. ಇಲ್ಲದಿದ್ದರೆ ಭವಿಷ್ಯದಲ್ಲಿ ತುಂಬಾ ಕಳೆದುಕೊಳ್ಳುತ್ತೇವೆ ಅನ್ನಿಸಿತು. ಹಾಗಂತ ನಡೆದ ಘಟನೆಯಿಂದ ಪ್ರೀತಿಯ ಬಗ್ಗೆ ನನ್ನ ನಂಬಿಕೆ ಬದಲಾಗಿಲ್ಲ. ಪ್ರೀತಿ ದೊಡ್ಡದು. ಅದು ನೋಡುವ ಕಣ್ಣುಗಳನ್ನು ಅವಲಂಭಿಸಿರುತ್ತದೆ.

ನಮ್ಮ ನಡುವೆ ತಲೆದೋರಿದ ಭಿನ್ನಾಭಿಪ್ರಾಯವೇ ಕಾರಣ. ಇಬ್ಬರಲ್ಲೂ ಲೋಪದೋಷ ಕಾಣಿಸಿಕೊಂಡಿದ್ದು ನಿಜ. ಹಾಗಾಗಿ ಮದುವೆಗೆ ಮುನ್ನವೇ ಸಂಬಂಧ ಮುರಿದುಕೊಳ್ಳಲು ನಿರ್ಧರಿಸಿದೆವು. ನಾನು ಈಗ ಸಿನಿಮಾವನ್ನಷ್ಟೇ ಪ್ರೀತಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

Advertisements

One Comment on “ರ & ರ ಬ್ರೇಕಪ್ ಸ್ಟೋರಿಗೆ ತಾರ್ಕಿಕ ಅಂತ್ಯ….

  1. Pingback: ಗೀತಾ ಗೋವಿಂದಂ ಸೆಟ್‌ನಲ್ಲಿ ಬಿಕ್ಕಿ ಬಿಕ್ಕಿ ಅತ್ತಿದ ರಶ್ಮಿಕಾ…. – torrentspree

Leave a Reply

%d bloggers like this: