ವಾರಾಣಸಿಯಲ್ಲಿ ಗೂಗಲ್ ಸರ್ಚ್ ಕೊಟ್ಟರೆ ಟಾಯ್ಲೆಟ್‌ ಕೂಡಾ ಸಿಗುತ್ತದೆ

ಈ ಗೂಗಲ್ ಸರ್ಚ್ ಅನ್ನುವುದು ಬಂದ ಮೇಲೆ ದಾರಿ ಕೇಳುವುದನ್ನು, ಹೋಟೆಲ್ ಹುಡುಕುವುದನ್ನು ಮರೆತು ಬಿಟ್ಟಿದ್ದೇವೆ. ನಮಗೇನು ಬೇಕು ಅನ್ನುವುದನ್ನು ಗೂಗಲ್ ಕಿವಿಯಲ್ಲಿ ಹೇಳಿದರೆ ಸಾಕು, ಕ್ಷಣ ಮಾತ್ರದಲ್ಲಿ ಹೇಳುತ್ತದೆ.

ಈಗ ಇನ್ನು ಒಂದು ಹೆಜ್ಜೆ ಮುಂದೆ ಹೋಗಿರುವ ಗೂಗಲ್ ಶೌಚಾಲಯವನ್ನು ಹುಡುಕಿಕೊಡುತ್ತದೆ. ಸಿಕ್ಕಾಪಟ್ಟೆ ಮೂತ್ರ ಬಂದಿದೆ. ಹೊಟ್ಟೆ ಚುಚ್ಚುತ್ತಿದೆ ಅಂದರೆ, ಗೂಗಲ್ ಕಿವಿಯಲ್ಲಿ ಹೇಳಿದರೆ ಸಾಕು, ನಿಮ್ಮ ಸಮೀಪದಲ್ಲಿರುವ ಟಾಯ್ಲೆಟ್, ಹೋಗಬೇಕಾಗಿರುವ ದಾರಿ, ತೆಗೆದುಕೊಳ್ಳಬೇಕಾದ ಸಮಯ ಎಲ್ಲವನ್ನೂ ಹೇಳುತ್ತದೆ.

ಆದರೆ ಈ ಸೇವೆ ಲಭ್ಯವಿದ್ದದ್ದು, ದಿಲ್ಲಿ, ಮುಂಬಯಿ ಹಾಗೂ ಭೋಪಾಲ್‌ನಲ್ಲಿ ಮಾತ್ರ. ಇದೀಗ ಈ ಸೇವೆ ವಾರಾಣಾಸಿಗೂ ವಿಸ್ತರಣೆಯಾಗಿದೆ.

ಹೀಗಾಗಿ ಹಿಂದೂಗಳ ಪವಿತ್ರ ಕ್ಷೇತ್ರವಾದ ವಾರಾಣಸಿಯಲ್ಲಿ ಇನ್ನು ಶೌಚಾಲಯ ಹುಡುಕುವುದು ಅತಿ ಸುಲಭವಾಗಲಿದೆ. ಗೂಗಲ್‌ನಲ್ಲಿ ಸ್ವಚ್ಛ ಟಾಯ್ಲೆಟ್ ಎಂದು ಸರ್ಚ್‌ ಮಾಡಿದರೆ, ನೀವಿರುವ ಜಾಗಕ್ಕೆ ಹತ್ತಿರವಿರುವ ಶೌಚಾಲಯವನ್ನು ತೋರಿಸುತ್ತದೆ.
ವಾರಾಣಸಿ ಮುನ್ಸಿಪಲ್‌ ಕಾರ್ಪೋರೇಷನ್‌ ಒಟ್ಟು 235 ಶೌಚಾಲಯವನ್ನು ಆನ್‌ಲೈನ್‌ ತಂತ್ರಜ್ಞಾನದೊಂದಿಗೆ ಜೋಡಣೆ ಮಾಡಿದ್ದು, ಮುಂದಿನ ದಿನಗಳಲ್ಲಿ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿದೆ.

ಇನ್ನು ನೀವು ಹೋಗಿ ಬಂದ ಶೌಚಾಲಯದ ಬಗ್ಗೆ ರಿವ್ಯೂ ಬರೆಯುವ ಅವಕಾಶವೂ ಇದೆ. ಹಸಿರು (ಉತ್ತಮ), ಹಳದಿ (ಸಾಧಾರಣ), ಹಾಗೂ ಕೆಂಪು (ಅತ್ಯಂತ ಕೆಟ್ಟ) ಎಂದು ನಮೂದಿಸಲು ಅವಕಾಶ ಕೊಡಲಾಗಿದೆ.

ನೀವು ಕೊಟ್ಟ ಬಣ್ಣವನ್ನು ನೋಡಿ ಪ್ರಕೃತಿಯ ಕರೆಯ ಮುಂದಿನ ವ್ಯಕ್ತಿ ಬೆಸ್ಟ್ ಟಾಯ್ಲೆಟ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: