Advertisements

ಆನೆ ಮೇಲಿದ್ದ ಜಾರಿ ಬಿದ್ದ ಅಸ್ಸಾಂ ಡೆಪ್ಯೂಟಿ ಸ್ಪೀಕರ್

ಮೆರವಣಿಗೆ ವೇಳೆ ಅಸ್ಸಾಂ ನೂತನ ಡೆಪ್ಯುಟಿ ಸ್ಪೀಕರ್ ಕೃಪಾನಾಥ್ ಮಲ್ಲಾ ಅವರು ಆಯತಪ್ಪಿ ಆನೆ ಮೇಲಿಂದ ಕೆಳಗೆ ಬಿದ್ದ ಘಟನೆ ನಡೆದಿದೆ.

ಅಕ್ಟೋಬರ್ 6ರಂದು ಈ ಘಟನೆ ನಡೆದಿದ್ದು, ಬಿಜೆಪಿ ಶಾಸಕರಾಗಿರುವ ಕೃಪಾನಾಥ್ ಅವರು ಕರೀಂಗಂಜ್ ಜಿಲ್ಲೆಯಲ್ಲಿರುವ ತಮ್ಮ ಸ್ವಕ್ಷೇತ್ರ ರಾತಾಬಾರಿಯಲ್ಲಿ ಅಭಿಮಾನಿಗಳು ಅವರಿಗೆ ಭವ್ಯ ಸ್ವಾಗತ ನೀಡಲು ಆನೆಯ ಮೇಲೆ ಕುಳ್ಳಿರಿಸಿದ್ದರು.

ಆನೆ ಮೇಲೆ ಕೂರಿಸಿ ಮೆರವಣಿಗೆ ಕರೆದೊಯ್ಯುತ್ತಿದ್ದಾಗ ಈ ಘಟನೆ ನಡೆದಿದೆ. ಆನೆಯಿಂದ ಕೆಳಗೆ ಬೀಳುವ ವಿಡಿಯೋ ಮೊಬೈಲ್ನಲ್ಲಿ ಸೆರೆಯಾಗಿದ್ದು, ಹುಲ್ಲು ಹಾಸಿನ ಮೇಲೆ ಬಿದ್ದ ಪರಿಣಾಮ ಉಪ ಸಭಾಧ್ಯಕ್ಷರಿಗೆ ಘಟನೆ ವೇಳೆ ಯಾವುದೇ ಗಾಯಗಳಾಗಿಲ್ಲ.

ಆನೆ ಮೇಲೆ ಕುಳಿತಿದ್ದ ಮಾವುತ ಕೂಡ ಕೃಪಾನಾಥರ ಜತೆ ಕೆಳಗೆ ಬಿದ್ದಿದ್ದು, ನೆರೆದಿದ್ದವರು ತಕ್ಷಣ ಕೃಪಾನಾಥ ಅವರ ಸಹಾಯಕ್ಕೆ ಮುಂದಾದರು.

ಡೆಪ್ಯೂಟಿ ಸ್ಪೀಕರ್ ಕೂತ ತಕ್ಷಣ ಆನೆ ಸಿಕ್ಕಾಪಟ್ಟೆ ರಂಪಾಟ ಪ್ರಾರಂಭಿಸಿತ್ತು. ಆನೆಗೂ ಜನಪ್ರತಿನಿಧಿಗಳನ್ನು ನೋಡಿ ಕೋಪ ಉಕ್ಕಿ ಬಂದಿರಬೇಕು.

Advertisements

Leave a Reply

%d bloggers like this: