Advertisements

ಸ್ವಚ್ಛ ಭಾರತ್ ಗೆ ಅವಮಾನ – ಸಿಎಂ ಪೋಟೋ ಪಕ್ಕದಲ್ಲೇ ಸಚಿವರ ಮೂತ್ರ ವಿಸರ್ಜನೆ

ರಾಜಸ್ತಾನದ ಸಚಿವ ಶಂಬು ಸಿಂಗ್ ಖಟೇಸರ್ ಮುಖ್ಯಮಂತ್ರಿ ವಸುಂಧರಾ ರಾಜೆ ಫೋಟೋ ಪಕ್ಕದಲ್ಲೇ ಮೂತ್ರ ವಿಸರ್ಜನೆ ಮಾಡಿದ್ದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಫೋಟೋ ವೈರಲ್ ಆಗುತ್ತಿದ್ದಂತೆ ಪ್ರತಿಕ್ರಿಯೆ ನೀಡಿರುವ, ಸಚಿವ ಶಂಬು ಸಿಂಗ್ ಅವರು, ಮುಖ್ಯಮಂತ್ರಿ ಕ್ಯಾಂಪೇನ್ ಪೋಸ್ಟರ್ ಬಳಿ ನಾನು ಮೂತ್ರ ಮಾಡಿಲ್ಲ. ವಯೋವೃದ್ಧ ಸಮಸ್ಯೆಯಿಂದ ಬಯಲಿನಲ್ಲಿ ಮೂತ್ರ ಮಾಡಿದ್ದೇನೆ. ಬಯಲಿನಲ್ಲಿ ಮೂತ್ರ ಮಾಡುವುದು ಒಲ್ಡ್ ಏಜ್ ಟ್ರಡಿಷನ್ ಅಂದಿದ್ದಾರೆ.

ಜೊತೆಗೆ ಯಾರು ಇಲ್ಲದ ಜಾಗದಲ್ಲಿ ಮೂತ್ರ ವಿಸರ್ಜನೆ ಮಾಡಿರುವುದರಿಂದ ಯಾವುದೇ ತೊಂದರೆ ಆಗುವುದಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.

ಬಿಜೆಪಿ Rally ಆಯೋಜಿಸಿದ್ದ ವೇಳೆ ಸಚಿವರು ಈ ಕೃತ್ಯ ಎಸಗಿದ್ದಾರೆ. 2.5 ಲಕ್ಷಕ್ಕೂ ಹೆಚ್ಚು ಜನ ಸೇರಿದ್ದ ಸಮಾವೇಶದಲ್ಲಿ ಯಾವುದೇ ಶೌಚಾಲಯ ಇರಲಿಲ್ಲ ಎನ್ನಲಾಗಿದೆ.

ನಿಜಕ್ಕೂ ಇದೊಂದು ದುರಂತವೇ ಸರಿ. ಪಾಪ ಮೋದಿ ದೇಶ, ಮನೆ, ಬೀದಿ, ಪರಿಸರವನ್ನು ಸ್ವಚ್ಛವಾಗಿಡೋಣ ಎಂದು ಹಗಲು ರಾತ್ರಿ ಅನ್ನದೆ ಪ್ರಯತ್ನಿಸುತ್ತಿದ್ದಾರೆ.

ಆದರೆ ಅವರದ್ದೇ ಪಕ್ಷದ ನಾಯಕರು ಮೋದಿ ಕನಸು ಹಾಗೂ ಕೆಲಸವನ್ನು ಮೋರಿಗೆ ತಳ್ಳುತ್ತಿದ್ದಾರೆ.

ಒಬ್ಬ ಸಚಿವರಾದವರು ಹೇಗೆ ವರ್ತಿಸಬೇಕು,ಸಾರ್ವಜನಿಕವಾಗಿ ನಾನು ಹೇಗೆ ಕಾಣಿಸಿಕೊಳ್ಳಬಾರದು ಅನ್ನುವುದರ ಪರಿಜ್ಞಾನವಿರಬೇಕು. ನಾಯಕನೇ ಹೀಗಾದರೆ ಬೆಂಬಲಿಗರು ಇನ್ನು ಹೇಗೋ…

Advertisements

Leave a Reply

%d bloggers like this: