Advertisements

ಪಕೋಡಾ ಅಂಗಡಿಯಲ್ಲಿ ಐಟಿ ಅಧಿಕಾರಿಗಳು ಸಿಕ್ಕಿದ್ದು 60 ಲಕ್ಷ ರೂಪಾಯಿ….!

1952ರಲ್ಲಿ ಪಂಜಾಬ್ ನ ಲೂಧಿಯಾನದ ಗಿಲ್ಲ್ ರೋಡ್ ನಲ್ಲಿ ಪನ್ನಾ ಸಿಂಗ್ ಪ್ರಾರಂಭಿಸಿದ ಪಕೋಡಾ ಅಂಗಡಿ ಕೆಲವೇ ವರ್ಷಗಳಲ್ಲಿ ಮನೆ ಮಾತಾಗಿ ಹೋಗಿತ್ತು. ಕೇವಲ ಪಂಜಾಬ್ ಮಾತ್ರವಲ್ಲ ಅಕ್ಕ ಪಕ್ಕದ ರಾಜ್ಯದ ಪಕೋಡಾ ಪ್ರಿಯರು ಅಂಗಡಿಗೆ ಬರಲಾರಂಭಿಸಿದರು.

ಇಲ್ಲಿನ ಪನ್ನೀರ್ ಪಕೋಡಾ ಅದೆಷ್ಟು ಫೇಮಸ್ ಆಗಿತ್ತು ಅಂದರೆ ರಾಜಕಾರಣಿಗಳು, ಅಧಿಕಾರಿಗಳುಸ ಪೊಲೀಸರು ಸೆಲೆಬ್ರೆಟಿಗಳು ಭೇಟಿ ನೀಡುತ್ತಿದ್ದರು.

ಕಾಲ ಕ್ರಮೇಣ ಮತ್ತೊಂದು ಶಾಖೆಯೂ ರಾಜ್ಯದಲ್ಲಿ ಪ್ರಾರಂಭಗೊಂಡಿತು.

ಆದರೆ ಅದ್ಯಾಕೋ ಐಟಿ ಅಧಿಕಾರಿಗಳಿಗೆ ಪಕೋಡಾ ಅಂಗಡಿಯಲ್ಲಿ ಅಕ್ರಮದ ವಾಸನೆ ಹೊಡೆದಿದೆ. ಅಂಗಡಿ ತುಂಬಾ ಸಿಕ್ಕಾಪಟೆ ಜನ ತುಂಬಿರುತ್ತಾರೆ. ಆದರೆ ಆದಾಯ ತೆರಿಗೆ ಸಲ್ಲಿಸುವ ವೇಳೆ ಕೊರತೆ ಕಾಣಿಸುತ್ತಿದೆ. ಹೀಗಾಗಿ ಕಡತ ಜಾಲಾಡಿ ನೋಡಿದ್ದಾರೆ. ಸಂಶಯ ಪಕ್ಕಾ ಆಗಿದೆ.

ಹೀಗಾಗಿ ಗುರುವಾರ ಅಂಗಡಿಗೆ ದಾಳಿ ನಡೆಸಿದ ಅಧಿಕಾರಿಗಳು ಕಡತ ಜಾಲಾಡಿದ್ದಾರೆ. ತೆರಿಗೆ ವಂಚನೆಯ ಸುಳಿವು ಸಿಗಲಿಲ್ಲ. ಕೊನೆಗೆ ಎರಡೂ ಅಂಗಡಿಗಳ ಕ್ಯಾಶ್ ಕೌಂಟರ್ ಬಳಿ ಪೊಲೀಸ್ ಭದ್ರತೆಯೊಂದಿಗೆ ಅಧಿಕಾರಿಗಳನ್ನು ನೇಮಿಸಲಾಗಿದೆ.

ಇಡೀ ದಿನ ಆಗುವ ವ್ಯವಹಾರವೆಷ್ಟು ಅನ್ನುವುದನ್ನು ಲೆಕ್ಕ ಹಾಕುವುದು ಇದರ ಹಿಂದಿನ ಉದ್ದೇಶವಾಗಿದೆ. ಮುಂಜಾನೆಯಿಂದ ಸಂಜೆ ತನಕ ಕೂತು ನೋಡಿದರೆ ಭರ್ಜರಿ ವ್ಯಾಪಾರಿ ನಡೆದಿತ್ತು. ಅಳೆದು ತೂಗಿ ಗುರುವಾರದ ಕಲೆಕ್ಷನ್ ಅನ್ನು ವರ್ಷಕ್ಕೆ ಲೆಕ್ಕ ಹಾಕಿದರೆ ತೆರಿಗೆ ವಂಚನೆಯಾಗಿರುವುದು ಸ್ಪಷ್ಟವಾಗಿದೆ.

ಇದ್ಯಾಕೋ ಐಟಿ ಅಧಿಕಾರಿಗಳು ಸುಮ್ಮನೆ ಬಿಡುವಂತೆ ಕಾಣಿಸುತ್ತಿಲ್ಲ ಅನ್ನೋದು ಅಷ್ಟು ಹೊತ್ತಿಗೆ ಅಂಗಡಿ ಮಾಲೀಕ ದೇವ ರಾಜ್ ಗೂ ಅರಿವಾಗಿದೆ.

ಹೀಗಾಗಿ ತೆರಿಗೆ ಕದ್ದು ಅಡಗಿಸಿಟ್ಟಿದ 60 ಲಕ್ಷ ರೂಪಾಯಿ ಹಣವನ್ನು ಅಧಿಕಾರಿಗಳ ಕೈಗೆ ಕೊಟ್ಟು ತಪ್ಪಾಯ್ತು ಅಂದಿದ್ದಾನೆ. ಇದೀಗ ಮಾಲೀಕನ ಮೇಲೆ ಕ್ರಮ ಜರುಗಿಸುವ ಕುರಿತಂತೆ ಐಟಿ ಕಾನೂನು ಪುಸ್ತಕವನ್ನು ತಿರುವಿ ಹಾಕುತ್ತಿದ್ದಾರೆ.

ಹಿಂದೊಮ್ಮೆ ನಿರುದ್ಯೋಗ ಕುರಿತಂತೆ ಮಾತನಾಡಿದ ಪ್ರಧಾನಿ ಮೋದಿ ಪಕೋಡಾ ಮಾರುವುದು ಕೂಡಾ ಉದ್ಯೋಗ ಎಂದು ಹೇಳಿದ್ದರು. ಇದಕ್ಕೆ ಕಾಂಗ್ರೆಸ್ ಕೊಟ್ಟ ತಿರುಗೇಟನ್ನು ಯಾರೂ ಮರೆಯುವ ಹಾಗಿಲ್ಲ.

ಈಗ ನೋಡಿ ಶುಚಿ ರುಚಿಯಾಗಿ ಕೊಟ್ಟರೆ ಪಕೋಡಾ ಕೂಡಾ ಕೈ ಹಿಡಿಯುತ್ತದೆ. ಮಾತ್ರವಲ್ಲದೆ ಲಕ್ಷ ಲಕ್ಷ ಸಂಪಾದನೆಗೂ ದಾರಿ ಮಾಡಿಕೊಡುತ್ತದೆ.

Advertisements

One Comment on “ಪಕೋಡಾ ಅಂಗಡಿಯಲ್ಲಿ ಐಟಿ ಅಧಿಕಾರಿಗಳು ಸಿಕ್ಕಿದ್ದು 60 ಲಕ್ಷ ರೂಪಾಯಿ….!

  1. Pingback: ಲೋಕಸಭಾ ಚುನಾವಣೆ ಮುನ್ನ ಅರೆಸ್ಟ್ ಆಗ್ತಾರಂತೆ ಡಿಕೆಶಿ….ಹೌದಾ…? – torrentspree

Leave a Reply

%d bloggers like this: