Advertisements

ನಾನು ಹಿಂದು ವಿರೋಧಿಯಲ್ಲ…. ನಾನು ಹಿಂದುವಾಗಿ ಹುಟ್ಟಿದ್ದೇನೆ – ಸಿದ್ದರಾಮಯ್ಯ

ನಾನು ಸಿದ್ದರಾಮಯ್ಯ, ನನ್ನ ಅಪ್ಪನ‌ ಹೆಸರು ಸಿದ್ದರಾಮೇಗೌಡ. ಹಾಗಿದ್ದ ಮೇಲೆ ನಾನೇಕೆ ಹಿಂದು ವಿರೋಧಿ ಆಗುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಬೆಂಗಳೂರಿನ ಗಾಂಧಿನಗರದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಎಲ್ಲಾ ಜಾತಿಗಳ ಅಭಿವೃದ್ಧಿ ನಿಗಮ ಮಾಡಿದ್ದೂ ನಾನೇ ಆದರೂ ನಾನು ಜಾತಿ ವಿರೋಧಿ, ಧರ್ಮ ವಿರೋಧಿ ಎಂದು ಅಪಪ್ರಚಾರ ಮಾಡಿದರು. ಟಿಪ್ಪು ಜಯಂತಿಯನ್ನು ಏಕೆ ನಾನು ವಿರೋಧಿಸಬೇಕು? ಹಿಂದು ವಿರೋಧಿ ಎಂದು ನನ್ನನ್ನು ಬಿಂಬಿಸಿದ್ದಾರೆ. ‘ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟ’ ಎಂದು ರಾಷ್ಟ್ರಕವಿ ಕುವೆಂಪು ಅವರು ಹೇಳಿದಂತೆ ನಂಬಿದವನು ನಾನು ಎಂದರು.

ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನ ಫೋಟೋ ಹಾಕಿಸಿದವನು ನಾನು. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡ ಹೆಸರಿಟಿದ್ದು, ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ, ಅಕ್ಕಮಹಾದೇವಿ ವಿವಿ, ಕೆಂಪೇಗೌಡ ಜಯಂತಿ, ದೇವರದಾಸಿಮಯ್ಯ ಜಯಂತಿ, ಕೃಷ್ಣ ಜಯಂತಿ, ಹಡಪದ ಜಯಂತಿ ಎಲ್ಲಾ ಮಾಡಿದ್ದು ನಾನೇ. ಹಿಂದಿನ ಯಾವ ಸಿಎಂ ಇದನ್ನು ಯಾಕೆ ಮಾಡಲಿಲ್ಲ ಎಂದು ಪ್ರಶ್ನಿಸಿದರು.

ಐದು ವರ್ಷದಲ್ಲಿ ನಮ್ಮ ಸರ್ಕಾರ ಒಂದೇ ಒಂದು ಹಗರಣ ಮಾಡಲಿಲ್ಲ. ಆದರೂ ಸೋಲಿಸಿದ್ರು, ಅಪಪ್ರಚಾರದಿಂದ ನಾವು ಸೋಲಬೇಕಾಯ್ತು. ಆದರೆ ಲೋಕಸಭೆ ಚುನಾವಣೆಯಲ್ಲಿ ಹಾಗಾಗುವುದಿಲ್ಲ. ಈಗಾಲೇ ಜನ ಪಶ್ಚಾತಾಪ ಪಡುತ್ತಿದ್ದಾರೆ. ಹೀಗಾಗಿ ಗೆಲುವು ಕಾಂಗ್ರೆಸ್ ಪಕ್ಷಕ್ಕೆ ಕಟ್ಟಿಟ್ಟ ಬುತ್ತಿ ಎಂದರು.

ಸಿದ್ದರಾಮಯ್ಯ ಮಾತುಗಳನ್ನು ಕೇಳುತ್ತಿದ್ದರೆ..ಈ ಬಾರಿಯೂ ಕಾಂಗ್ರೆಸ್ ಸಾಫ್ಟ್ ಹಿಂದುತ್ವದ ಮೊರೆ ಹೋಗಿರುವುದು ಸ್ಪಷ್ಟ. ಈಗಾಗಲೇ ರಾಹುಲ್ ಗಾಂಧಿ ಟೆಂಪಲ್ ರನ್ ಮುಂದುವರಿಸಿದ್ದಾರೆ. ಕೇರಳದಲ್ಲಿ ಶಬರಿಮಲೆಗೆ ಮಹಿಳೆಯರು ಬರಬಾರದು ಎಂದು ಕಾಂಗ್ರೆಸ್ ಅಲ್ಲಿ ಪ್ರತಿಪಾದಿಸುತ್ತಿದೆ. ಇಲ್ಲಿ ಸಿದ್ದರಾಮಯ್ಯ ನುಡಿ.

Advertisements

Leave a Reply

%d bloggers like this: